Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಯುವ ಮನಸ್ಸುಗಳಿಗೆ ಸಾಹಿತ್ಯದ ಸವಿ ಉಣಬಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಸಾಹಿತ್ಯ ಸಂಭ್ರಮ ಅಪ್ಪಟ ಸಾಹಿತ್ಯಿಕ ಕಾರ್ಯಕ್ರಮವಾಗಿದೆ ಎಂದರು.
Related Articles
Advertisement
ಹಿರಿಯ ಸಾಹಿತಿ ಸಿದ್ಧರಾಮ ಪೊಲೀಸ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಜಗನ್ನಾಥ ಎಲ್. ತರನಳ್ಳಿ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ ಎಂದು ಹೇಳಿದರು.
ಮಧ್ಯಾಹ್ನ 1:15 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈ ಭಾಗದ ಕವಿಗಳ ಕುಂಚದಿಂದ ಅರಳಿದ ಕಾವ್ಯಗಾಯನ ನೆರವೇರಲಿದೆ. ಹಿರಿಯ ಕವಿಗಳಾದ ಪ್ರಭಾಕರ ಜೋಷಿ, ಕಾವ್ಯಶ್ರೀ ಮಹಾಗಾಂವಕರ್, ಮಂಡಲಗಿರಿ ಪ್ರಸನ್ನ, ನಾಗೇಂದ್ರಪ್ಪ ಮಾಡ್ಯಾಳೆ, ರಾಜಶೇಖರ ಮಾಂಗ್ ಅವರು ರಚಿಸಿದ ಕಾವ್ಯಗಾಯನ ನಡೆಯಲಿದೆ.
ಮಧ್ಯಾಹ್ನ 2:15 ಕ್ಕೆ ಹಿರಿಯ ಸಾಹಿತಿ ಡಾ| ನೀಲಾಂಬಿಕಾ ಪೊಲೀಸ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುವ ಕಾವ್ಯಾಮೃತದಲ್ಲಿ ವಿವಿಧ ಕವಿಗಳು ಸ್ವರಚಿತ ಕವನ ವಾಚಿಸಲಿದ್ದಾರೆ. ಉಪನ್ಯಾಸಕ ಡಾ.ಕೆ.ಗಿರಿಮಲ್ಲ ಆಶಯ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 3:35ಕ್ಕೆ ಸಿಂಧು ಸೇತುವೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ವಿಶೇಷ ಗೋಷ್ಠಿಯಲ್ಲಿ ಸಾಹಿತ್ಯದ ಬದುಕಿಗೆ ಮಾಧ್ಯಮದ ಬೆಳಕು ವಿಷಯದ ಕುರಿತು ಹಿರಿಯ ಪತ್ರಕರ್ತ ಡಾ| ಶ್ರೀನಿವಾಸ ಸಿರನೂರಕರ್ ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 4:05ಕ್ಕೆ ನಡೆಯುವ ಸಮಾರೋಪ ಸಂಭ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಹಿರಿಯ ಜಾನಪದ ತಜ್ಡ ಡಾ| ಹನುಮಂತರಾವ ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಸಾಧನ ಸಿರಿಗೆ ಗರಿ ಮುಡಿಸುವ ಪರಿ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೂಜ್ಯ ಸುರೇಂದ್ರ ಮಹಾಸ್ವಾಮಿಗಳು, ಶೇಷಮೂರ್ತಿ ಅವಧಾನಿ, ಶಿವಶರಣಪ್ಪ ಕಮಲಾಪುರ, ಸಿದ್ಧಲಿಂಗ ಬಾಳಿ, ಹೇಮಂತ ಮಾಲಗತ್ತಿ, ರಾಮಯ್ಯಸ್ವಾಮಿ ಐನೋಳ್ಳಿ, ಕಾಶಪ್ಪ ವಾಂಜರಖೇಡೆ, ಎನ್.ಸಿ.ವಾರದ, ಡಾ| ರೆಹಮಾನ್ ಪಟೇಲ, ಕೆ.ಪಿ.ಗಿರಿಧರ, ಸುನೀಲ ಚೌಧರಿ, ಸಿದ್ಧಣ್ಣಾ ಮಾಲಗಾರ, ಭೀಮಾಶಂಕರ ಭೂಂಯ್ನಾರ, ಬಸವರಾಜ ಜಿ.ಮಲ್ಲಡ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ತಿಳಿಸಿದರು.
ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ಶಿವರಾಜ ಎಸ್.ಅಂಡಗಿ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ಡಾ| ಕೆ.ಗಿರಿಮಲ್ಲ, ರವೀಂದ್ರಕುಮಾರ ಭಂಟನಳ್ಳಿ, ವಿದ್ಯಾಸಾಗರ ದೇಶಮುಖ, ಪ್ರಭುಲಿಂಗ ಮೂಲಗೆ ಇದ್ದರು.