Advertisement
ಚೆಂಬೂರು ಘಾಟ್ಲಾ ಅಲ್ಲಿನ ಸಂಸ್ಥೆಯ ಸಂಕುಲದಲ್ಲಿ ಡಿ. 23ರಂದು ಸಂಜೆ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ “ಸಾಹಿತ್ಯ ಸಹವಾಸ-2017-2018′ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಸಾಧಕರಿಂದ ಕಲಿಯುವುದು ಬಹಳಷ್ಟಿದೆ.ಆದ್ದರಿಂದ ಭವಿಷ್ಯತ್ತಿನ ಪ್ರಜೆಗಳಾದ ಮಕ್ಕಳು ತಮ್ಮಜೀವನ ಧ್ಯೇಯ ಏನೆಂದು ತಿಳಿದುಕೊಳ್ಳಬೇಕು. ಸಾಕಷ್ಟು ಕನಸುಗಳನ್ನು ಕಂಡು ನಿರಂತರ ಪ್ರಯತ್ನದಿಂದ ಕನಸುಗಳನ್ನು ನನಸಾಗಿಸಿರಿ. ಸತತ ಅಭ್ಯಾಸದಿಂದ ಸಾಧನೆ ಸಿದ್ಧಿಸಿರಿ. ಬದುಕು ಚಿಮ್ಮುವ ಹಲಗೆಯಂತೆ. ಆದ್ದರಿಂದ ಸಮಾಜದಿಂದ ಬಹಳಷ್ಟು ಪಡೆದ ನಾವುಗಳು ಸೇವೆಯ ಮೂಲಕ ಸಮಾಜಕ್ಕೆ ಹಿಂತಿರುಗಿಸಿ ಜೀವನ ಪಾವನಗೊಳಿಸಬೇಕು ಎಂದು ನುಡಿದರು.
ವರ್ಷಗಳಲ್ಲಿ ಇಂತಹದ್ದೇ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ತಲುಪುವ ಭರವಸೆ ನೀಡುತ್ತೇನೆ ಎಂದರು. ಸಮಾರಂಭದಲ್ಲಿ ಗಣ್ಯರು ಹಾಗೂ ಸಂಸ್ಥೆಯ ಪದಾಧಿ
ಕಾರಿಗಳಾದ ಉಪಾಧ್ಯಕ್ಷ ಪ್ರಭಾಕರ ಬಿ. ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ರಂಜನ್‌ಕುಮಾರ್ ಆರ್. ಅಮೀನ್, ಗೌರವ ಕೋಶಾಧಿಕಾರಿ ಟಿ. ಆರ್. ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಜಯ ಎನ್. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘದ ವಾರ್ಷಿಕ ಪ್ರತಿಷ್ಠಿತ “ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2017’ನ್ನು “ಅಕ್ಷರ ಸಂತ ಅಕ್ಕರದ ಅವಧೂತ’ ಹರೇಕಳ ಹಾಜಬ್ಬ, “ದಿ| ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕಿ ಲೀಲಾವತಿ ಕೆ. ಶೆಟ್ಟಿ, “ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಪುರಸ್ಕಾರವನ್ನು ಹಿರಿಯ ರಂಗ ನಟ, ನಿರ್ದೇಶಕ ಉಮೇಶ್ ಎನ್. ಶೆಟ್ಟಿ ಹಾಗೂ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಪ್ರದಾನಿಸಿ ಗೌರವಿಸಿ ಶುಭ ಹಾರೈಸಿದರು.
Related Articles
Advertisement
ದಕ್ಷಿಣ ಕನ್ನಡ ಹಿರಿಯ ಪತ್ರಕರ್ತ ಗುರುವಪ್ಪ ಎನ್. ಟಿ. ಬಾಳೆಪುಣಿ ಅವರು ಹಾಜಬ್ಬರ ಸಿದ್ಧಿ-ಸಾಧನೆಗಳನ್ನು ಸ್ಥೂಲವಾಗಿ ಬಣ್ಣಿಸಿದರು. ಗೌರಿ ಜಗ್ತಾಪ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯದರ್ಶಿ ದಯಾ ಸಾಗರ್ ಚೌಟ ಸ್ವಾಗತಿಸಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂ ಪಿಸಿದರು. ರಂಜನ್ ಕುಮಾರ್ ಆರ್. ಅಮೀನ್ ವಂದಿಸಿದರು.
ನೂಪುರ್ ಡ್ಯಾನ್ಸ್ ಅಕಾಡೆಮಿ ತಂಡ ಹಾಗೂ ಭರತ್ ಶೆಟ್ಟಿ ಬಳಗ ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವ ಸಾರುವ ಸಂಸ್ಕೃತಿ ಉತ್ಸವವನ್ನು ಹಾಗೂ ಸಂಘದ ಚೆಂಬೂರು ಕರ್ನಾಟಕ ಪೂರ್ವ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿ ಗಳಿಂ¨ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು. 1955ರಲ್ಲಿ ಶೆಟ್ರ ಜಾಗದಲ್ಲಿ ಹುಟ್ಟಿದರೂ ಅಂದು ಒಂದು ರೂಪಾಯಿ ಬೆಲೆಯಿಲ್ಲದ ನನಗೆ ತಮ್ಮಂಥವರ ಪ್ರೋತ್ಸಾಹವೇ ಉಮೇದು ತುಂಬಿದೆ. ತೀವ್ರ ಬಡತನದಲ್ಲಿದ್ದ ನನಗೆ ಕಿತ್ತಾಳೆ ಮಾರಾಟವೇ ಜೀವನೋಪಾಯವಾಯಿತು. ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರ ಕಿತ್ತಾಳೆ ಬುಟ್ಟಿಯ ಲೇಖನ ನನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿತು. ಎಂದೂ ಬೊಂಬಾಯಿ ಕಾಣದ ನನಗೆ ಇಂದು ತಾವು ಆಹ್ವಾನಿಸಿ ಈ ಪುರಸ್ಕಾರ ನೀಡಿದಿರಿ. ತಮ್ಮೆಲ್ಲರ ಪ್ರೀತಿವಾತ್ಸಲ್ಯದ ಈ ಗೌರವ ಪಡೆದ 64ರ ವ್ಯಕ್ತಿಯ ಜೀವನವೇ ಸಾರ್ಥಕವಾಯಿತು. ಗೌರವಕ್ಕೆ ಕಾರಣಕರ್ತರಾದ ದಯಸಾಗರ್ ಚೌಟ ಮತ್ತು ಸಂಘಕ್ಕೆ ಋಣಿಯಾಗಿದ್ದೇನೆ. ಈ ಸಂಘವು ಹೆಮ್ಮರವಾಗಿ ಬೆಳೆಯಲಿ
– ಹರೇಕಳ ಹಾಜಬ್ಬ (ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ -2017 ಪುರಸ್ಕೃತರು). ನಾನು ಬರೇ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದವಳು ಅಷ್ಟೇ. ಅಂತಹದ್ದೇನು ಸಾಧನೆ ಮಾಡಿಲ್ಲ. ಆದರೆ ಅಂದಿನ ದಿನಗಳಲ್ಲಿ ಸರಕಾರ, ಸಂಸ್ಥೆಗಳ ಸಹಯೋಗ ಅಷ್ಟೇನಿರದ ಕಾರಣ ನಾವೇ ಜವಾಬ್ದಾರಿಯುತವಾಗಿ ಸಲ್ಲಿಸಿದ ಶ್ರಮದಾಯಕ ಸೇವೆ ನನ್ನನ್ನು ಇಷ್ಟರ ಮಟ್ಟಕ್ಕೆ ಬೆಳೆಸಿದೆ. ಆ ಶ್ರಮಕ್ಕೆ ಈ ಗೌರವ ಪೂರಕವಾಗಿದೆ ಎಂದೆಣಿಸುವೆ ಗೌರವವನ್ನು ಅಭಿಮಾನದಿಂದ ಸ್ವೀಕರಿಸುತ್ತೇನೆ
– ಲೀಲಾವತಿ ಶೆಟ್ಟಿ (ದಿ| ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು). ಮುಂಬಯಿಯಲ್ಲಿ ಕನ್ನಡಕ್ಕಾಗಿ ದುಡಿಯುವ (ವ್ಯಕ್ತಿಯೊಬ್ಬರು) ಮೊಮ್ಮಗ ಅಜ್ಜಿಯ ಹೆಸರಲ್ಲಿ ಪ್ರಶಸ್ತಿ ಅದೇ ನಗರದಲ್ಲಿದ್ದು ಕನ್ನಡ ಸೇವೆ ಮಾಡಿದ ಅಜ್ಜಿಯಾಗಿರುವ ನನಗೆ ಈ ಇಳಿವಯಸ್ಸಿನಲ್ಲಿ ಸಂದಿರುವುದು ನನ್ನ ಅನುಭವವನ್ನು ಹೆಚ್ಚಿಸಿದೆ. ಕನ್ನಡದ ಮನಸ್ಸುಗಳ ಇಂತಹ ವೈಶಾಲ್ಯವನ್ನು ನಾನು ಮೆಚ್ಚುವೆ, ಅಭಿನಂದಿಸುವೆ
– ಡಾ| ಸುನೀತಾ ಎಂ. ಶೆಟ್ಟಿ (ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ ಪುರಸ್ಕೃತರು)