Advertisement

ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್

10:33 PM May 25, 2022 | Team Udayavani |

ಶಿರಸಿ: ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರು ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ ಕೆನಡಾ ದೇಶದ ಲಿಟರರಿ ಅವಾರ್ಡ ಪಡೆದಿದ್ದಾರೆ.

Advertisement

ಕೆನಡಾ ಹಾಗೂ ಭಾರತದ ರಂಗಭೂಮಿಯಲ್ಲಿ ಪ್ರೀತಿಯ, ಸೌಹಾರ್ದ ಪಯಣಕ್ಕೆ ಸಂಬಂಧಿಸಿ ಲವ್ ಇನ್ ಇಂಡಿಯಾ ಎಂಡ್ ಇಂಡೀಜಿನಿಯಸ್ ಥಿಯೇಟರ್ ಇನ್ ಕೆನಡಾ ಎಂಬ
ಪ್ರಬಂಧಕ್ಕೆ ಕೆನಡಾದ ಪ್ರತಿಷ್ಠಿತ ಪುರಸ್ಕಾರ ಅರಸಿ ಬಂದಿದೆ.

ಶೀತಲ್ ಅವರು ನಾಡಿನ ಹೆಸರಾಂತ ರಂಗತಜ್ಞ ಡಾ.ಶ್ರೀಪಾದ ಭಟ್ ಮತ್ತು ಶಿಕ್ಷಕಿ ಶಾಂತಲಾ ಭಟ್ ಅವರ ಪುತ್ರಿ. ಪಿಯುಸಿ ವರೆಗೂ ಸರ್ಕಾರಿ ಶಾಲೆಗಳಲ್ಲಿ ಕಲಿತ ಈಕೆ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಣಿಪಾಲದ ಎಂ.ಸಿ.ಪಿ.ಎಚ್. ಸೆಂಟರಿನಲ್ಲಿ ಗಳಿಸಿದ್ದರು. ಈಗ ಕೆನಡಾದ ವಿಶ್ವವಿದ್ಯಾಲಯ ವೆಸ್ಟರ್ನ್ ಒಂಟೋರಿಯಾದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.

ಶೀತಲ್ ಭಟ್ ಅವರ ಮೊದಲ ಪುಸ್ತಕ ಪರ್ಪಾರಿಂಗ್ ಸೆಲ್ಪ ಹಾಗೂ ಪರ್ಪಾರಿಂಗ್ ಜೆಂಡರ್ ಪುಸ್ತಕವನ್ನು ಮಣಿಪಾಲ ಯುನಿವರ್ಸಿಟಿ ಪ್ರೆಸ್ ಮುದ್ರಿಸಿತ್ತು. ಶೀತಲ್ ರ ಸಂಶೋಧನಾ ಪ್ರಬಂಧಗಳಿಗೆ ಈಗಾಗಲೇ ಅಂತರಾಷ್ಟ್ರೀಯ ಫೆಡರೇಶನ್ ಆಫ್ ಥೀಯೇಟರ್ ರಿಸರ್ಚ ಸಂಸ್ಥೆಯಿಂದ ಹೆಲ್ಸಿಂಕಿ ಪ್ರಶಸ್ತಿ ಮತ್ತು ಇಂಟರನ್ಯಾಶನಲ್ ಅಸೋಸೊಯೇಶನ್ ಫಾರ್ ಪೆಂಟಾಸ್ಟಿಕ್ ಇನ್ ದಿ ಆರ್ಟ್ಸನಿಂದ ಅತ್ಯುತ್ತಮ ಸ್ಕಾಲರ್ ಪ್ರಶಸ್ತಿ ಸಂದಿದೆ. ಇದೀಗ ತನ್ನ ಸಂಶೋಧನೆಗಾಗಿ ಕೆನಡಾ ದೇಶದ ಲಿಟರರಿ ಅವಾರ್ಡ್ ಪಡೆದಿದ್ದು ಉತ್ತರ ಕನ್ನಡಕ್ಕೆ ಹೆಮ್ಮೆ ಮೂಡಿಸಿದೆ.

ಇದನ್ನೂ ಓದಿ : ವಾಡಿ : ಪ್ರೀತಿಸಿದ ಯುವತಿಯ ಸಹೋದರರಿಂದಲೇ ನಡೆಯಿತು ಯುವಕನ ಬರ್ಬರ ಹತ್ಯೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next