Advertisement
1. ಕನ್ನಡದ ಪುಟಾಣಿಗಳಿಗಾಗಿ, “ಬೊಮ್ಮನಹಳ್ಳಿಯ ಕಿಂದರಿಜೋಗಿ’ ಎಂಬ ಪದ್ಯವನ್ನು ಬರೆದವರು ಕುವೆಂಪು.2. ಆ ಪದ್ಯ ಬರೆದಾಗ ಕುವೆಂಪುಗೆ 22 ವರ್ಷ ವಯಸ್ಸು. ಸುಮಾರು 430 ಸಾಲುಗಳ ಆ ಪದ್ಯ ನಾಲ್ಕೈದು ಗಂಟೆಗಳಲ್ಲಿ ರಚಿಸಿದ್ದರಂತೆ.
3. ತಮ್ಮ “ಶ್ರೀರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಮೊದಲು ಬರೆಯಲು ಶುರು ಮಾಡಿದ್ದು ಇಂಗ್ಲಿಷ್‌ನಲ್ಲಿ.
4. “ಬಿಗಿನರ್ ಮ್ಯೂಸ್’- ಕುವೆಂಪು ಅವರ ಮೊದಲ ಇಂಗ್ಲಿಷ್ ಕವನ ಸಂಕಲನ.
5. ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಕೂಡಾ ಕನ್ನಡದ ಪ್ರಮುಖ ಬರಹಗಾರ.
6. ಕರ್ನಾಟಕದ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕುವೆಂಪು, ಕನ್ನಡದ ಎರಡನೇ ರಾಷ್ಟ್ರಕವಿ ಬಿರುದಾಂಕಿತರು.
7. ಕುವೆಂಪು ಅವರ 113ನೇ ಜನ್ಮದಿನದ ಸಂದರ್ಭದಲ್ಲಿ, ಗೂಗಲ್ ತನ್ನ ಡೂಡಲ್‌ನಲ್ಲಿ ರಾಷ್ಟ್ರಕವಿಯನ್ನು ಸ್ಮರಿಸುವುದರ ಮೂಲಕ ಗೌರವ ಸಲ್ಲಿಸಿತ್ತು.
8. ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪುರವರು, “ಮಂತ್ರಮಾಂಗಲ್ಯ’ ಎಂಬ ಸರಳ ವಿವಾಹ ಪದ್ಧತಿಯನ್ನು ಪ್ರೋತ್ಸಾಹಿಸಿದರು.
9. ಅವರು ಮೈಸೂರು ವಿ.ವಿ.ಯ ಉಪಕುಲಪತಿಗಳಾಗಿದ್ದರು.
10. ಕುವೆಂಪು ಅವರು ಜನಿಸಿದ ಕುಪ್ಪಳ್ಳಿಯ ಮನೆ, ಅವರಿಗೆ ಪ್ರೇರಣೆಯಾಗಿದ್ದ ಮನೆ ಸನಿಹದ “ಕವಿಶೈಲ’ ಗುಡ್ಡ ಮತ್ತು ಮೈಸೂರಿನಲ್ಲಿ ಅವರು ನೆಲೆಸಿದ್ದ “ಉದಯರವಿ’ ಮನೆ ಈಗ ಸಾಹಿತ್ಯಾಸಕ್ತರ ಪ್ರವಾಸಿ ತಾಣವಾಗಿ ಬದಲಾಗಿದೆ.