ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಪ್ರವಾಸಿ ತಾಣಗಳ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಮಾಲ್ಡೀವ್ಸ್ ಸಚಿವರು ಉದ್ಧಟತನ ಮೆರೆದ ಬಳಿಕ ಮಾಲ್ಡೀವ್ಸ್ ಬಿಡಿ ಲಕ್ಷದ್ವೀಪದತ್ತ ನಡೆ ಎಂದು ಪ್ರವಾಸಿಗರು ಮಾಲ್ಡೀವ್ಸ್ ವಿಮಾನ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದೆ.
ಭಾರತೀಯ ಪಾಸ್ ಪೋರ್ಟ್ ಹೊಂದಿರುವವರಿಗೆ, ಕಳೆದ ಕೆಲವು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಕನಸು ಹೆಚ್ಚು ನನಸಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವದಿಂದ ಹಲವು ದೇಶಗಳು ಇದೀಗ ವೀಸಾ ಇಲ್ಲದೆ ತಮ್ಮ ದೇಶಕ್ಕೆ ಭಾರತೀಯರ ಪ್ರವೇಶಕ್ಕೆ ಅನುಮತಿ ನೀಡುತ್ತಿದೆ. ಸದ್ಯ ಭಾರತೀಯರು ಈಗ 62 ದೇಶಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಯಿಲ್ಲದೆ ವಿಮಾನ ಏರಬಹುದಾಗಿದೆ.
ಮಂಗಳವಾರ ಬಿಡುಗಡೆಯಾದ ಇತ್ತೀಚಿನ ಹೆನ್ಲಿ ಪಾಸ್ ಪೋರ್ಟ್ ಸೂಚ್ಯಂಕದ ಪ್ರಕಾರ, ಭಾರತದ ಪಾಸ್ ಪೋರ್ಟ್ ಜಾಗತಿಕವಾಗಿ 80 ನೇ ಸ್ಥಾನದಲ್ಲಿದೆ. ಇದು ಭಾರತೀಯರು 62 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಪ್ರಯಾಣದ ಮೊದಲು ವೀಸಾ ಪಡೆಯದೆ ಭಾರತೀಯರು ಭೇಟಿ ನೀಡಬಹುದಾದ ಸ್ಥಳಗಳ ಸಂಪೂರ್ಣ ಪಟ್ಟಿ ಇಲ್ಲಿದೆ: (ಈ ಪಟ್ಟಿಯು ಜನವರಿ 11 ರಂದು ವೀಸಾ ನಿಯಮಗಳನ್ನು ಆಧರಿಸಿದೆ)
ಅಂಗೋಲಾ, ಬಾರ್ಬಡೋಸ್, ಭೂತಾನ್, ಬೊಲಿವಿಯಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಬುರುಂಡಿ, ಕಾಂಬೋಡಿಯಾ, ಕೇಪ್ ವರ್ಡೆ ದ್ವೀಪಗಳು, ಕೊಮೊರೊ ದ್ವೀಪಗಳು, ಕುಕ್ ದ್ವೀಪಗಳು, ಜಿಬೌಟಿ, ಡೊಮಿನಿಕಾ, ಎಲ್ ಸಾಲ್ವಡಾರ್ ಇಥಿಯೋಪಿಯಾ, ಫಿಜಿ, ಗ್ಯಾಬೊನ್, ಗ್ರೆನಡಾ, ಗಿನಿ-ಬಿಸ್ಸೌ, ಹೈಟಿ, ಇಂಡೋನೇಷ್ಯಾ ಇರಾನ್, ಜಮೈಕಾ, ಜೋರ್ಡಾನ್, ಕಝಾಕಿಸ್ತಾನ್, ಕೀನ್ಯಾ, ಕಿರಿಬಾಟಿ, ಲಾವೋಸ್, ಮಕಾವೊ, ಮಡಗಾಸ್ಕರ್, ಮಲೇಷ್ಯಾ, ಮಾಲ್ಡೀವ್ಸ್, ಮಾರ್ಷಲ್ ದ್ವೀಪಗಳು, ಮಾರಿಟಾನಿಯ, ಮಾರಿಷಸ್, ಮೈಕ್ರೋನೇಶಿಯಾ, ಮಾಂಟ್ಸೆರಾಟ್, ಮೊಜಾಂಬಿಕ್, ಮ್ಯಾನ್ಮಾರ್, ನೇಪಾಳ, ನಿಯು, ಓಮನ್, ಪಲಾವ್ ದ್ವೀಪಗಳು, ಕತಾರ್, ರುವಾಂಡಾ, ಸಮೋವಾ ಸೆನೆಗಲ್, ಸೀಶೆಲ್ಸ್, ಸಿಯೆರಾ ಲಿಯೋನ್, ಸೊಮಾಲಿಯಾ, ಶ್ರೀಲಂಕಾ, ಸೇಂಟ್ ಕಿಟ್ಸ್ ಮತ್ತು ನೆವಿಸ್ ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟಾಂಜಾನಿಯಾ, ಥೈಲ್ಯಾಂಡ್, ಟಿಮೋರ್-ಲೆಸ್ಟೆ, ಟೊಗೊ, ಟ್ರಿನಿಡಾಡ್ ಮತ್ತು ಟೊಬಾಗೊ, ಟುನೀಶಿಯಾ, ಟುವಾಲು, ವನವಾಟು, ಜಿಂಬಾಬ್ವೆ.