Advertisement

ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ಭಾರತೀಯರಿವರು..: ಇಲ್ಲಿದೆ ಪಟ್ಟಿ

03:37 PM Nov 26, 2021 | Team Udayavani |

ಕಾನ್ಪುರ: ಪ್ರವಾಸಿ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ ಶತಕ ಸಿಡಿಸಿ ಮಿಂಚಿದ್ದಾರೆ. ತನ್ನ ಪದಾರ್ಪಣಾ ಪಂದ್ಯದಲ್ಲೇ ಮೂರಂಕಿ ಮೊತ್ತ ಗಳಿಸಿದ ಅಪರೂಪದ ದಾಖಲೆಯನ್ನು ಅಯ್ಯರ್ ಬರೆದಿದ್ದಾರೆ.

Advertisement

144 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದುವರೆಗೆ 112 ಮಂದಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಇದರಲ್ಲಿ 16 ಮಂದಿ ಭಾರತೀಯರು ಮಾತ್ರ ಈ ದಾಖಲೆ ಮಾಡಿದ್ದಾರೆ. 1933ರಲ್ಲಿ ಇಂಗ್ಲೆಂಡ್ ವಿರುದ್ಧ ಲಾಲಾ ಅಮರನಾಥ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ:ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯರು ಹೆದರಿದ್ದರು: ಇಂಝಮಾಮ್

ಚೊಚ್ಚಲ ಟೆಸ್ಟ್ ಪಂದ್ಯದ ಶತಕವೀರರು

ಹೆಸರು | ರನ್ | ಎದುರಾಳಿ | ತಂಡ | ವರ್ಷ

Advertisement

1 ಲಾಲಾ ಅಮರನಾಥ್ 118 ಇಂಗ್ಲೆಂಡ್ (1933)

2 ದೀಪಕ್ ಶೋಧನ್ 110 ಪಾಕಿಸ್ತಾನ (1952)

3 ಎ.ಜಿ. ಕೃಪಾಲ್ ಸಿಂಗ್ 100* ನ್ಯೂಜಿಲೆಂಡ್ (1955)

4 ಅಬ್ಬಾಸ್ ಅಲಿ ಬೇಗ್ 112 ಇಂಗ್ಲೆಂಡ್ (1959)

5 ಹನುಮಂತ್ ಸಿಂಗ್ 105 ಇಂಗ್ಲೆಂಡ್ (1964)

6 ಗುಂಡಪ್ಪ ವಿಶ್ವನಾಥ್ 137 ಆಸ್ಟ್ರೇಲಿಯಾ (1969)

7 ಸುರಿಂದರ್ ಅಮರನಾಥ್ 124 ನ್ಯೂಜಿಲೆಂಡ್ (1976)

8 ಮೊಹಮ್ಮದ್ ಅಜರುದ್ದೀನ್ 110 ಇಂಗ್ಲೆಂಡ್ (1984)

9 ಪ್ರವೀನ್ ಅಮ್ರೆ 103 ದಕ್ಷಿಣ ಆಫ್ರಿಕಾ (1992)

10 ಸೌರವ್ ಗಂಗೂಲಿ 131 ಇಂಗ್ಲೆಂಡ್ (1996)

11 ವೀರೇಂದ್ರ ಸೆಹ್ವಾಗ್ 105 ದಕ್ಷಿಣ ಆಫ್ರಿಕಾ (2001)

12 ಸುರೇಶ್ ರೈನಾ 120 ಶ್ರೀಲಂಕಾ (2010)

13 ಶಿಖರ್ ಧವನ್ 187 ಆಸ್ಟ್ರೇಲಿಯಾ (2013)

14 ರೋಹಿತ್ ಶರ್ಮಾ 177 ವೆಸ್ಟ್ ಇಂಡೀಸ್ (2013)

15 ಪೃಥ್ವಿ ಶಾ 134 ವೆಸ್ಟ್ ಇಂಡೀಸ್ (2018)

16 ಶ್ರೇಯಸ್ ಅಯ್ಯರ್ 105 ನ್ಯೂಜಿಲೆಂಡ್ (2021)

Advertisement

Udayavani is now on Telegram. Click here to join our channel and stay updated with the latest news.

Next