Advertisement

ಮದ್ಯ ಅಕ್ರಮ ಸಾಗಾಟ: ಆರೋಪಿ ಪರಾರಿ

09:34 PM Apr 21, 2023 | Team Udayavani |

ಉಡುಪಿ: ಉಡುಪಿಗೆ ಗೋವಾದಿಂದ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ಕಣ್ತಪ್ಪಿಸಿ ಪಲಾಯನಗೈದ ಘಟನೆ ನಡೆದಿದೆ.

Advertisement

ಮಣಿಪಾಲ ಪೊಲೀಸ್‌ ಠಾಣೆಯ ನಿರೀಕ್ಷಕ ದೇವರಾಜ್‌ ಟಿ.ವಿ. ಅವರು ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿರುವಾಗ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಗೋವಾ ಕಡೆಯಿಂದ ಕೇರಳಕ್ಕೆ ಹೋಗುವ ಒಂದು ರೈಲು ಬಂದು ನಿಂತಿದ್ದು, ಆ ರೈಲಿನಿಂದ ಕೆಲವು ಪ್ರಯಾಣಿಕರು ಇಳಿದಿದ್ದರು. ಅವರಲ್ಲಿ ಓರ್ವ ವ್ಯಕ್ತಿಯು ಒಂದು ಹಸುರು ಬಣ್ಣದ ಪ್ಲಾಸ್ಟಿಕ್‌ ಕವರನ್ನು ಹಿಡಿದುಕೊಂಡು ಅನುಮಾಸ್ಪದವಾಗಿ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿ ಆತನನ್ನು ತಪಾಸಣೆ ಮಾಡಲು ಮುಂದಾದಾಗ ಆತನ ಕೈಯಲ್ಲಿದ್ದ ಹಸುರು ಬಣ್ಣದ ಪ್ಲಾಸ್ಟಿಕ್‌ ಕವರನ್ನು ಎಸೆದು ಓಡಿ ಹೋಗಿದ್ದ. ಸಿಬಂದಿ ಆತನನ್ನು ಬೆನ್ನಟ್ಟಿ ಹೋಗಿ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಪ್ಲಾಸ್ಟಿಕ್‌ ಕವರನ್ನು ತೆರೆದು ನೋಡಿದಾಗ ಅದರಲ್ಲಿ ಮದ್ಯ ತುಂಬಿದ ಮೂರು ಬಾಟಲಿಗಳಿದ್ದು ಅವುಗಳು ಗೋವಾ ರಾಜ್ಯದ ಮದ್ಯದ ಬಾಟಲಿಗಳಾಗಿದ್ದವು.

ಹಸುರು ಬಣ್ಣದ ಪ್ಲಾಸ್ಟಿಕ್‌ ಕವರ್‌ನಲ್ಲಿದ್ದ ಮದ್ಯ ತುಂಬಿದ ಬಾಟಿಲಿಗಳನ್ನು ಪರಿಶೀಲಿಸಿದಾಗ ಒಟ್ಟು 1,400 ರೂ. ಮೌಲ್ಯದ 3.5 ಲೀ. ಮದ್ಯ ಪತ್ತೆಯಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next