Advertisement
ಕಾಲೇಜು ಪರಿಸರದಿಂದ ಕೇವಲ 100 ಮೀಟರ್‌ಗೂ ಹತ್ತಿರ ಹಾಗೂ ಪ್ರಾಥಮಿಕ ಶಾಲಾ ಮೈದಾನದಿಂದ ಕೇವಲ 15 ಮೀಟರ್ ಸಮೀಪವೇ ನಿರ್ಮಾಣವಾಗುತ್ತಿದೆ. ಗುತಿಗಾರು ಕಾಲೇಜಿಗೆ ಸಾಕಷ್ಟು ವಿಸ್ತಾರವಾದ ಜಾಗವಿದ್ದರೂ ಕಂಪೌಂಡ್ ಇಲ್ಲ. ಹೀಗಾಗಿ ಕುಡುಕರ ಉಪಟಳ ಶಾಲೆಯ ಮೇಲಾಗಲಿದೆ. ಅಲ್ಲದೇ ಶಿಕ್ಷಣ ಸಂಸ್ಥೆ ಪರಿಸರದಲ್ಲಿ ಮಾದಕವಸ್ತು ಮಾರಾಟ ಕೇಂದ್ರಗಳಿರಬಾರದು ಎಂಬ ಸರಕಾರದ ನಿಯಮವಿದೆ. ಆದರೆ ಇದೀಗ ಕಟ್ಟಡ ಮದ್ಯದಂಗಡಿ ಕೇಂದ್ರಕ್ಕೆ ನಿರ್ಮಾಣವಾದರೆ ಶಿಕ್ಷಣಸಂಸ್ಥೆಯ ಪರಿಸರವೇ ಹಾಳಾಗಲಿದೆ. ಶಿಕ್ಷಣ ಸಂಸ್ಥೆಗಳಿಗೂ ಧಕ್ಕೆಯುಂಟಾಗಲಿದೆ ಎಂಬ ಆತಂಕ ಪೋಷಕರಲ್ಲಿದೆ. ಹೀಗಾಗಿ ಪೋಷಕರೂ ಕೂಡಾ ವಿದ್ಯಾರ್ಥಿಗಳ ಪರ ಧ್ವನಿಯಾಗಲು ಮುಂದಾಗಿದ್ದಾರೆ. ಮದ್ಯದಂಗಡಿ ತೆರೆಯಲು ಮುಂದಾದರೆ ವಿವಿಧ ಸಂಘಸಂಸ್ಥೆಗಳೂ ಕೂಡಾ ಹೋರಾಟಕ್ಕಿಳಿಯಲಿವೆ.
ಶಿಕ್ಷಣ ಸಂಸ್ಥೆ ಸಮೀಪವೇ ಮದ್ಯದಂಗಡಿ ತೆರೆಯಲು ಪ್ರಯತ್ನಿಸಿರುವುದು ಕಾನೂನು ಬಾಹಿರ. ಇದರಿಂದ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಮದ್ಯದಂಗಡಿ ತೆರೆದರೆ ಸಂಘಸಂಸ್ಥೆಗಳ ನೆರವಿನೊಂದಿಗೆ ತೀವ್ರ ಹೋರಾಟ ನಡೆಸಲಾಗುವುದು.
– ಲೋಕೇಶ್ ಡಿ.ಆರ್. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ