Advertisement

ಮದ್ಯ ಮಾರಾಟ: ಸಾವಿರ ಕೋಟಿ ಆದಾಯ

09:09 AM May 13, 2020 | Lakshmi GovindaRaj |

ಮುಳಬಾಗಿಲು: ತಾಲೂಕಿನ ಬೆಸ್ಕಾಂ ಉಪ ವಿಭಾಗವನ್ನು ರಾಜ್ಯದಲ್ಲಿಯೇ ಮಾದರಿ ಮಾಡಲು ಶ್ರಮಿಸಲಾಗುವುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ನಗರದಲ್ಲಿ 1.91 ಕೋಟಿ ರೂ.ನಲ್ಲಿ ನಿರ್ಮಿಸಲಾದ ಉಪ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಬೇರೆ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಬೆಸ್ಕಾಂ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜನರಿಗೆ ಮತ್ತಷ್ಟು ಉತ್ತಮ ಸೇವೆ ಒದಗಿಸಲು ಈಗಾಗಲೇ 12 ಕಿ.ಮೀ. ಎಲ್‌.ಟಿ. ಕೇಬಲ್‌  ಹಾಕಲಾಗುತ್ತಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ 7 ಗಂಟೆ ತ್ರಿಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ರೈತರಿಗೆ ಮತ್ತಷ್ಟು ಅನುಕೂಲ ಒದಗಿಸಲು ಬೆಸ್ಕಾಂ ಶ್ರಮಿಸಬೇಕು ಎಂದು ಹೇಳಿದರು. 42 ದಿನಗಳ ಲಾಕ್‌ಡೌನ್‌ನಿಂದ 3 ಸಾವಿರ  ಕೋಟಿ ರೂ. ನಷ್ಟವಾಗಿದ್ದರೂ ವಾರದಲ್ಲಿ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ 1 ಸಾವಿರ ಕೋಟಿ ರೂ. ಲಾಭ ಬಂದಿದೆ. ವಾರ್ಷಿಕವಾಗಿ 25 ಸಾವಿರ ಕೋಟಿ ರೂ. ಲಾಭ ಬರುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಸಂಸದ  ಎಸ್‌.ಮುನಿಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್‌. ವೆಂಕಟೇಶ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್‌ ಗೌಡ, ರಾಜ್ಯ ತಾಂತ್ರಿಕ ನಿರ್ದೇಶಕ ಜಿ.ಅಶೋಕ್‌ಕುಮಾರ್‌, ಸಿ.ಇ.ಪ್ರಸನ್ನ, ಎಸ್‌.ಸಿ. ಗುರುಸ್ವಾಮಿ, ಸಿ.ಸಿ.ಪ್ರಸನ್ನ, ತಹಶೀಲ್ದಾರ್‌  ರಾಜಶೇಖರ್‌, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಎಇಇ ರಮೇಶ್‌, ಪೌರಾಯುಕ್ತ ಶ್ರೀನಿವಾಸ್‌ಮೂರ್ತಿ, ಬಿ.ಎನ್‌.ನಾರಾಯಣಸ್ವಾಮಿ,  ಗರಸಭೆ ಸದಸ್ಯ ಪ್ರಸಾದ್‌, ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್‌, ಪ್ರಧಾನ ಕಾರ್ಯದರ್ಶಿ ಬೆಳಗಾನಹಳ್ಳಿ  ರಮೇಶ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next