Advertisement

ದೇಶದಲ್ಲಿ ಮದ್ಯ ಮಾರಾಟ ಇಳಿಕೆ

10:15 AM Dec 12, 2019 | sudhir |

ಹೊಸದಿಲ್ಲಿ: ದಿಢೀರ್‌ ಗಗನಮುಖೀಯಾದ ಈರುಳ್ಳಿ ಸೇವನೆಯಿಂದ ಜನರು ದೂರ ಉಳಿದಿರುವ ಸಂಗತಿ ಎಲ್ಲರಿಗೂ ತಿಳಿದೆ ಇದೆ. ಆದರೆ ನಿರೀಕ್ಷೆಗೂ ಮೀರಿದ ಒಂದು ಬೆಳವಣಿಗೆ ನಡೆದಿದ್ದು, ದೇಶಾದ್ಯಾಂತ ಮದ್ಯ ಮಾರಾಟದಲ್ಲಿಯೂ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

Advertisement

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಬಿಡುಗಡೆ ಮಾಡಿರುವ ತ್ರೈಮಾಸಿಕ ವರದಿ ಮದ್ಯ ಮಾರಾಟ ಕುಸಿತಗೊಂಡಿರುವ ಬಗ್ಗೆ ಉಲ್ಲೇಖ ಮಾಡಿದೆ. ಕಳೆದ ವರ್ಷ ಆದಾಯ ಮಟ್ಟದಲ್ಲಿ ಶೇ.10.3ರಷ್ಟು ಏರಿಕೆಯಾಗುವ ಮೂಲಕ ಉತ್ತಮ ಆದಾಯಗಳಿಸಿದ್ದು, ಪ್ರಸಕ್ತ ಸಾಲಿನ ವಾರ್ಷಿಕ ಆದಾಯದಲ್ಲಿ ಕೇವಲ ಶೇ.2.2ರಷ್ಟು ಏರಿಕೆ ಅಷ್ಟೇ ದಾಖಲಾಗಿದೆ. ಈ ಮೂಲಕ 7,296 ಕೋಟಿ ರೂ. ಆದಾಯಗಳಿಸಿದೆ ಎಂದು ಹೇಳಿದೆ.

ಏರಿಕೆಯಾಗುತ್ತಿರುವ ದಿನಪಯೋಗಿ ವಸ್ತುಗಳಿಂದ ಜನರು ಕಂಗಾಲಾಗಿದ್ದು, ದುಬಾರಿ ಬೆಲೆಯಿಂದ ಮನೆಯ ನಿರ್ವಹಣೆ ಕಷ್ಟವಾಗುತ್ತಿದೆ. ಈ ಹಿನ್ನಲೆ ಜನರು ಹಣ ವ್ಯಯಿಸುವುದಕ್ಕೂ ಮುನ್ನ ನೂರಾರಿ ಬಾರಿ ಯೋಚಿಸುತ್ತಿದ್ದು, ತೀರಾ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡುತ್ತಿದ್ದಾರೆ ವರದಿ ಹೇಳಿದೆ.

ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಪ್ರಮಾಣ ಕುಸಿತ ಕಂಡಿದ್ದು, ಮದ್ಯ ಕೊಳ್ಳುವವರ ಪ್ರಮಾಣ ಇಳಿಕೆಯಾಗಿದೆ. ಕೆಲವು ಮಾರುಕಟ್ಟೆಗಳಲ್ಲಿ ಜನರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು ಪರೋಕ್ಷವಾಗಿ ಉತ್ಪಾದನಾ ವಲಯಕ್ಕೆ ಸವಾಲಾಗಿ ಪರಿಣಮಿಸಿದೆ. ಹೂಡಿಕೆಯ ಕೊರತೆಯಿಂದ ವ್ಯಾಪಾರ ವಹಿವಾಟು ಚಟುವಟಿಕೆ ಕುಂಠಿತವಾಗಿದೆ ಎಂದು ಕಂಪೆನಿಯ ಸಿಇಒ ಆನಂದ್‌ ಕೃಪಾಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next