Advertisement
ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೂರು ದಿನ ಒಣ ದಿನಗಳೆಂದು ಘೋಷಣೆ ಮಾಡಿ ಮದ್ಯ ಮಾರಾಟ, ಸಾಗಾಣಿಕೆ ನಿಷೇಧ ಮಾಡಲಾಗಿತ್ತು. ಇದರಿಂದ ಮದ್ಯ ಮಾರಾಟದಲ್ಲಿ ಕುಸಿತ ಕಂಡಿದೆ.
Related Articles
Advertisement
3.34 ಕೋಟಿ ಮೌಲ್ಯದ ಅಕ್ರಮ ಮದ್ಯ ವಶ: ಮಾ.29ರಿಂದ ಮೇ 15ರವರೆಗೆ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ 3,34,22,240 ರೂ. ಮೌಲ್ಯದ ಅಕ್ರಮ ಮದ್ಯ, ಬಿಯರ್ ಗಾಂಜಾ, ಸೇಂದಿ ವಶಪಡಿಸಲಾಗಿದೆ. ಇದರಲ್ಲಿ 1250 ಕಿ.ಗ್ರಾಂ ಒಣ ಗಾಂಜಾ, 12 ಗಾಂಜಾ ಗಿಡ, 30 ಲೀಟರ್ ಸೇಂದಿ, 21144 ಲೀಟರ್ ಮದ್ಯ ಹಾಗೂ 88827 ಲೀಟರ್ ಬಿಯರ್ ಸೇರಿ ಒಟ್ಟು 1350 ಪ್ರಕರಣಗಳನ್ನು ದಾಖಲಿಸಿ 1106 ಮಂದಿ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ರಿದಲ್ಲಿ 126 ದ್ವಿಚಕ್ರ ವಾಹನ, 5 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 210 ಗಂಭೀರ ಪ್ರಕರಣದಲ್ಲಿ ಹಲವರನ್ನು ಬಂಧಿಸಿದ್ದು, 172 ಪ್ರಕರಣದಲ್ಲಿ ವೈನ್ ಸ್ಟೋರ್‌ಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ 1284 ಕಿರಾಣಿ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಕಲಿ ಮದ್ಯ ನಿಯಂತ್ರಣಕ್ಕೆ ಕ್ರಮ: ಡಾ.ಮಹಾದೇವಿ: ಪ್ರಸ್ತುತ ನಡೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 3.34 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಫೆಬ್ರವರಿ 18ರಿಂದಲೇ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಮಾರಾಟದ ಬಗ್ಗೆ ಗಮನ ಹರಿಸುವಂತೆ ರಾಜ್ಯ ಅಬಕಾರಿ ಆಯುಕ್ತರಿಂದ ಸೂಚನೆ ಬಂದ ಹಿನ್ನಲೆಯಲ್ಲಿ ಫೆ.18ರಿಂದ ಮೇ 15ರವರೆಗೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ, ಮಾರಾಟದ ಮೇಲೆ ಇಲಾಖೆಯ ಅಧಿಕಾರಿಗಳು ಕಣ್ಣಿಟ್ಟಿದ್ದರು. ಜಿಲ್ಲೆಯಲ್ಲಿ ನಕಲಿ ಮದ್ಯ ಹಾವಳಿ ಇಲ್ಲ. ನಕಲಿ ಮದ್ಯ ತಡೆಗೆ ನಮ್ಮ ತಂಡ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಂದು ವೇಳೆ ನಕಲಿ ಮದ್ಯ ಕಂಡು ಬಂದರೆ, ಬಾರ್ ಅಥವಾ ವೈನ್ ಸ್ಟೋರ್ ಮಾಲೀಕರ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ದುಬಾರಿ ದರದ ಮದ್ಯಕ್ಕೆ ಕಡಿಮೆ ದರದ ಮದ್ಯ ಮಿಶ್ರಣದ ಬಗ್ಗೆ ಈ ಹಿಂದೆ ಆರೋಪಗಳು ಕೇಳಿ ಬಂದಿದ್ದವು. ಇದೀಗ ಆ ತರಹದ ಘಟನೆ ಯಾವುದು ಇಲ್ಲ. ಹಾಗೊಂದು ವೇಳೆ ನಡೆಯುತ್ತಿದ್ದರೆ ನಮಗೆ ದೂರು ಬಂದಲ್ಲಿ ಆ ಮದ್ಯಗಳನ್ನು ಲ್ಯಾಬ್‌ಗ ತಪಾಸಣೆಗೆ ಕಳುಹಿಸಿ, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಡಾ.ಮಹಾದೇವಿ ತಿಳಿಸಿದ್ದಾರೆ.