Advertisement

ವಾರದಲ್ಲಿ 3 ದಿನ ಮದ್ಯ ಮಾರಾಟ

05:23 PM May 04, 2020 | Suhan S |

ಹಾಸನ: ವಾರದಲ್ಲಿ 3 ದಿನ ಮಾತ್ರ ಬೆಳಗ್ಗೆ 9ರಿಂದ ಸಂಜೆ 7ರ ವರೆಗೂ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. ಆದರೆ ಮದ್ಯ ಖರೀದಿಯ ಪ್ರಮಾಣದ ಮಿತಿಯನ್ನೇನೂ ನಿಗದಿಪಡಿಸಿಲ್ಲ. ದಾಸ್ತಾನು ಮುಗಿಯುವರೆಗೂ ವಹಿವಾಟು ನಡೆಯಲಿದೆ.

Advertisement

ಸಿ.ಎಲ್‌ -2 ( ಮದ್ಯದಂಗಡಿ ) ಹಾಗೂ ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದು ಕೊಂಡು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ತೆರೆಯಲು ಅವಕಾಶವಿಲ್ಲ. ಮದ್ಯ ಮಾರಾಟಗಾರರು ಗ್ಲೌಸ್‌ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಮದ್ಯ ಖರೀದಿ ಮಾಡುವವರಿಗೆ ಸಾನಿಟೈಸರ್‌ ಬಳಕೆ ಸೂಚನೆ ನೀಡಬೇಕು. ಮದ್ಯ ಖರೀದಿಸುವವರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಮದ್ಯದಂಗಡಿಗಳ ಬಳಿ ಸಾಮಾಜಿಕ  ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ಯ ಮಾರಾಟ ಮಳಿಗೆಯವರು ಭಾನುವಾರವೇ ಮದ್ಯದಂಗಡಿಗಳ ಮುಂದೆ ಮರದ ತುಂಡುಗಳಿಂದ ಬ್ಯಾರಿಕೇಡ್‌ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಕಲವು ಮದ್ಯ ವ್ಯಾಪಾರಿಗಳು ಭಾನುವಾರ ಸಂಜೆಯೇ ಅಂಗಡಿಗಳ ಮುಂದೆ ಪೂಜೆ ನೆರವೇರಿಸಿ ಸೋಮವಾರದಿಂದ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next