ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಬಿಹಾರ ವಿಧಾನಸಭೆಯ ಆವರಣದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಕೇವಲ 100 ಮೀ. ಅಂತರದಲ್ಲಿ ಮದ್ಯದ ಖಾಲಿ ಬಾಟಲಿಗಳು ಪತ್ತೆಯಾಗಿವೆ.
ಆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧವಿದೆ. ಅಲ್ಲದೇ ಕೆಲವೇ ದಿನಗಳ ಹಿಂದೆ ಸಂಪೂರ್ಣ ಮದ್ಯ ನಿಷೇಧ ಮಾಡಬೇಕೆಂದು ಮುಖ್ಯಮಂತ್ರಿ ಸಹಿತ ಅಲ್ಲಿನ ಸಚಿವರೆಲ್ಲ ಪ್ರಮಾಣವಚನ ಸ್ವೀಕರಿಸಿದ್ದರು.
ಇದರ ಬೆನ್ನಲ್ಲೇ ಅಲ್ಲಿ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದನ್ನು ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ನೌಕಾಪಡೆಗೆ ಅಡ್ಮಿರಲ್ ಹರಿಕುಮಾರ್ ಮುಖ್ಯಸ್ಥ
ಇದು ಬಿಹಾರದಲ್ಲಿ ಮದ್ಯ ನಿಷೇಧದ ನೈಜಸ್ಥಿತಿ, ಈ ಬಗ್ಗೆ ನಿತೀಶ್ ಕ್ಷಮೆಯಾಚಿಸಬೇಕು, ಅಲ್ಲದೇ ಮದ್ಯ ಮಾಫಿಯಾದೊಂದಿಗೆ ಅವರಿಗೆ ಸಂಬಂಧವಿದೆ ಎಂದೂ ಆರೋಪಿಸಿದ್ದಾರೆ.