Advertisement

ಲಿಪ್‌ಸ್ಟಿಕ್‌…ಅಹನಾ

06:46 PM Nov 17, 2017 | Team Udayavani |

ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಎಂಬ ವಿವಾದಾತ್ಮಕ ಚಿತ್ರದಿಂದ ಬೆಳಕಿಗೆ ಬಂದ ಪ್ರತಿಭೆ ಅಹನಾ ಕುಮ್ರ. ಈಕೆ ಉಳಿದವರಂತೆ ಆಕಸ್ಮಿಕವಾಗಿ ನಟಿಯಾದವಳಲ್ಲ. ಬಾಲ್ಯದಲ್ಲಿಯೇ ನಟಿಯಾಗಬೇಕೆಂಬ ಹಂಬಲ ಇಟ್ಟುಕೊಂಡು ಈ ದಿಸೆಯಲ್ಲೇ ಮುಂದುವರಿದು ಹಂಬಲವನ್ನು ಈಡೇರಿಸಿಕೊಂಡವಳು. 

Advertisement

ನಟನೆ ಎನ್ನುವುದು ಅವಳಿಗೆ ಸಹಜವಾಗಿ ಒಲಿದು ಬಂದಿದೆ. ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಎರಡನೆಯ ಚಿತ್ರವಾಗಿದ್ದರೂ ಯಾವುದೇ ಅನುಭವಿ ನಟಿಗೂ ಕಡಿಮೆಯಿಲ್ಲದಂತೆ ಈ ಜಟಿಲ ಪಾತ್ರದಲ್ಲಿ ಸೈ ಎನಿಸಿಕೊಂಡಾಕೆ ಅಹನಾ. ತಂದೆ ಎನ್‌ಆರ್‌ಐ, ತಾಯಿ ಸಿಐಡಿ ಅಧಿಕಾರಿ. ಈ ವಿಶಿಷ್ಟ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅಹನಾ 13ರ ಹರೆಯದಲ್ಲೇ ನಟಿಯಾಗಬೇಕೆಂಬ ಕನಸನ್ನು ನನಸು ಮಾಡುವ ಸಲುವಾಗಿ ಮುಂಬಯಿಯ ರೈಲೇರಿದಳು. 

ಆರಂಭದ ದಿನಗಳಲ್ಲಿ ಕಲಾವಿದರನ್ನು ರೂಪಿಸುವ ಪೃಥ್ವಿ ಥಿಯೇಟರ್‌ನ ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಮಾಗುತ್ತ ಬಂದ ಅಹನಾ, ಅನಂತರ ವಿಸ್ಲಿಂಗ್‌ ವಿಂಡ್‌ ತರಬೇತಿ ಕೇಂದ್ರ ಸೇರಿ ಸಿನೆಮಾ ಅಭಿನಯದ ವಿವಿಧ ಆಯಾಮಗಳನ್ನು ಕಲಿತುಕೊಂಡಳು. ಹೀಗೆ ಶ್ರಮಪಟ್ಟು ನಟಿಯಾದ ಅಹನಾಳನ್ನು ಮೊದಲು ಕೂಗಿ ಕರೆದದ್ದು ಮಾಡೆಲಿಂಗ್‌ ಜಗತ್ತು. ಮೋಡೆಲಿಂಗ್‌ನಲ್ಲಿ ಸಾಕಷ್ಟು ಯಶಸ್ವಿಯಾದ ಬಳಿಕ ಕಿರುತೆರೆಗೆ ಜಿಗಿದಳು. ಮೇರುನಟ ಅಮಿತಾಭ್‌ ಬಚ್ಚನ್‌ ಜತೆಗೆ ನಟಿಸುವ ಸುವರ್ಣಾ ವಕಾಶವನ್ನು ಕಿರುತೆರೆ ಅವಳಿಗೆ ಒದಗಿಸಿಕೊಟ್ಟಿತು. ಯುದ್ಧ್  ಎಂಬ ಟಿವಿ ಸರಣಿಯಲ್ಲಿ ಅಮಿತಾಭ್‌ ಮಗಳಾಗಿ ಅಭಿನಯಿಸಿದಾಗ ನಟಿಯಾಗಿರುವುದು ಸಾರ್ಥಕ ಎಂಬ ಧನ್ಯತೆ ಉಂಟಾಯಿತಂತೆ.

ಟಿವಿ ಸರಣಿ, ರಿಯಾಲಿಟಿ ಶೋ, ನಿರೂಪಕಿ, ಕಿರುಚಿತ್ರ ಎಂದೆಲ್ಲ ಫ‌ುಲ್‌ ಬ್ಯುಸಿಯಾಗಿದ್ದ ಅಹನಾ ಕುಡ್ಲ ಕೆಫೆ ಎಂಬ ತುಳು ಚಿತ್ರದಲ್ಲಿ ನಟಿಸಿರುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಸೋನಾ ಸ್ಪಾ  ಅಹನಾ ನಟಿಸಿದ ಮೊದಲ ಸಿನೆಮಾ. 2013ರಲ್ಲಿ ಬಿಡುಗಡೆಯಾದ ಇದು ಹೆಚ್ಚೇನೂ ಸದ್ದು ಮಾಡದೆ ಸರಿದು ಹೋದ ಕಾರಣ ಅಹನಾ ಗಮನ ಸೆಳೆಯಲಿಲ್ಲ. ಆದರೆ, ಈ ವರ್ಷ ಭಾರೀ ವಿವಾದದ ಬಳಿಕ ಬಿಡುಗಡೆಯಾದ ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಅವಳಿಗೆ ತೀರಾ ಅಗತ್ಯವಾಗಿದ್ದ ದೊಡ್ಡ ಮಟ್ಟದ ಬ್ರೇಕ್‌ ನೀಡಿದೆ. ಕೊಂಕಣಾ ಸೇನ್‌ ಶರ್ಮ, ರತ್ನಾ ಪಾಠಕ್‌ ಶಾ ಮುಂತಾದ ದಿಗ್ಗಜ ನಟಿಯರಿಗೆ ಸರಿಸಮಾನವಾಗಿ ನಟಿಸಿರುವ ಅಹನಾಳ ಪ್ರತಿಭೆಯನ್ನು ಬಾಲಿವುಡ್‌ ಈಕ ಕಣ್ಣರಳಿಸಿ ನೋಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next