ದೊಡ್ಡಬಳ್ಳಾಪುರ: ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆ ದಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಸಂಪನ್ಮೂಲ ಕ್ರೋಢಿಕರಿಸಿ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ದೀಪಕ್ ಸುಮನ್ ತಿಳಿಸಿದರು.
ತಾಲೂಕಿನ ಲಯನ್ಸ್ ಕ್ಲಬ್‌ಗ ಭೇಟಿ ನೀಡಿ ವಿವಿಧ ಸೇವಾ ಕಾಯಕ್ರಮಗಳಲ್ಲಿ ಭಾಗವಹಿಸಿ ನಂತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸೇವೆ ಮಾಡುವುದರ ಜೊತೆಗೆ ಅದರ ಸದುಪಯೋಗವಾಗಬೇಕು. ಈ ದಿಸೆಯಲ್ಲಿ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಬೇಕು ಎಂದರು.
ಅಧ್ಯಕ್ಷ ಆರ್.ಎಸ್.ಮಂಜುನಾಥ್ ಮಾತನಾಡಿ, ಸೇವೆಯೇ ನಮ್ಮ ಆರಾಧ್ಯ ದೈವ ಎನ್ನುವ ಲಯನ್ಸ್ ಸಿದ್ಧಾಂತ ಪಾಲಿಸಲಾಗುತ್ತಿದೆ. ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಲಯನ್ಸ್ ಕಣ್ಣಿನ ಚಿಕಿತ್ಸಾ ಶಿಬಿರ ಜ.21 ರಿಂದ ಆರಂಭವಾಗಿದ್ದು, ಇನ್ನು ಮುಂದೆ ಪ್ರತಿ ಗುರುವಾರ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ 200 ಪಿ.ಪಿಇ ಕಿಟ್, ಬಿಸಿ ಮತ್ತು ತಂಪಿನ ನೀರಿನ ಯಂತ್ರಗಳು ಸರ್ಕಾರಿ ಶಾಲೆಗಳಿಗೆ 6 ಸಾವಿರ ಮಾಸ್ಕ್, ಸಾರ್ವಜನಿಕ ಗ್ರಂಥಾಲಯಗಳಿಗೆ 10 ಸಾವಿರ ರೂ. ಬೆಲೆಯ ಪುಸ್ತಕ, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೊಲೀಸ್ ಇಲಾಖೆಗೆ 2 ಚೌಕಿಗಳು, ಸ್ವಾಮಿ ವಿವೇಕಾನಂದ ಕನ್ನಡ ಶಾಲೆ, ಹ್ಯಾಪಿ ಶಾಲೆಗೆ ಉನ್ನತ ಪ್ರಯೋಗ ಶಾಲಾಪರಿಕರಗಳು ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.
ಇದನ್ನೂ ಓದಿ :ಶ್ರದ್ಧೆ – ಪರಿಶ್ರಮದಿಂದ ಸಾಧನೆ ಸಾಧ್ಯ: ಡಾ| ಟೀಕಪ್ಪ
ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಎಂ.ಆರ್. ಶ್ರೀನಿವಾಸ್, ಕೋಶಾಧಿಕಾರಿ ಲಯನ್ ಹುಲಿಕಲ್ ನಟರಾಜ್ ಹಾಗೂ ಸದಸ್ಯರು ಇದ್ದರು.