ಬ್ಯೂನಸ್ ಐರಿಸ್: ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಗುರುವಾರ ವೃತ್ತಿಜೀವನದ 800ನೇ ಗೋಲು ಬಾರಿಸಿದರು. ಪನಾಮ ವಿರುದ್ಧ ಅರ್ಜೆಂಟೀನಾ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.
ವೃತ್ತಿಜೀವನದ ಗೋಲುಗಳ ಸಾರ್ವಕಾಲಿಕ ದಾಖಲೆಯನ್ನು ಹೊಂದಿರುವ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ (830) ಬಳಿಕ 800 ಗೋಲು ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ಇದನ್ನೂ ಓದಿ:ಸತ್ಯವತಿಯಾದ ಶಿಲ್ಪಾ ಶೆಟ್ಟಿ: ಧ್ರುವ ಸರ್ಜಾ ‘ಕೆ.ಡಿ’ಗೆ ಜತೆಯಾದ ಕರಾವಳಿ ಕುವರಿ
ಕಳೆದ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್ 2022 ಪ್ರಶಸ್ತಿಯನ್ನು ಎತ್ತಿಹಿಡಿದ ನಂತರ ಲಿಯೋನೆಲ್ ಮೆಸ್ಸಿ ಮತ್ತು ಅವರ ಅರ್ಜೆಂಟೀನಾ ತಂಡದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡರು. 83,000 ಅಭಿಮಾನಿಗಳು ಸೇರಿದ್ದ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ತಂಡವು ಪನಾಮವನ್ನು 2-0 ಅಂತರದಿಂದ ಸೋಲಿಸಿತು.
ತಿಯಾಗೊ ಅಲ್ಮಾಡಾ ಅವರು 78ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಹನ್ನೊಂದು ನಿಮಿಷದ ಬಳಿಕ ಲಿಯೋನೆಲ್ ಮೆಸ್ಸಿ ಅವರು ಫ್ರಿ ಕಿಕ್ ಮೂಲಕ ಗೋಲು ಗಳಿಸಿ ತವರಿನ ಕ್ರೀಡಾಭಿಮಾನಿಗಳನ್ನು ರಂಜಿಸಿದರು.