Advertisement

ಬಾಲ್ಯದ ಗೆಳತಿಯೊಂದಿಗೆ ಮೆಸ್ಸಿ ಶತಮಾನದ ಮದುವೆ!

03:45 AM Jul 02, 2017 | |

ರೊಸಾರಿಯೊ (ಆರ್ಜೆಂಟೀನಾ): ಫ‌ುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಶುಕ್ರವಾರ ತಮ್ಮ ದೀರ್ಘ‌ಕಾಲದ ಗೆಳತಿ ರೊಕುಜೊj ಅವರನ್ನು ವಿವಾಹವಾಗಿದ್ದಾರೆ. ಈ ಮದುವೆಯನ್ನು ಆರ್ಜೆಂಟೀನಾದ ಮಾಧ್ಯಮಗಳು ಶತಮಾನದ ಮದುವೆ ಎಂದು ಬಣ್ಣಿಸಿವೆ. 

Advertisement

ರೊಸಾರಿಯೊದ ಹೊಟೇಲ್‌ನಲ್ಲಿ ನೂರಾರು ಪತ್ರಕರ್ತರು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಾಹ ನಡೆಯಿತು. ಖ್ಯಾತ ಪಾಪ್‌ ಗಾಯಕಿ ಶಕೀರಾ, ಬಾರ್ಸಿಲೋನ ಫ‌ುಟ್ಬಾಲ್‌ ತಂಡದ ಸಹ ಆಟಗಾರ, ನೇಯ್ಮರ್‌ ಸೇರಿದಂತೆ  260 ಅತಿಥಿಗಳು ಪಾಲ್ಗೊಂಡಿದ್ದರು. ಮದುವೆಯ ಹಿನ್ನೆಲೆಯಲ್ಲಿ ಹೊಟೇಲ್‌ನ ಸುತ್ತಮುತ್ತ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಪಾಪ್‌ ಗಾಯಕಿ ಶಕೀರಾ ಮದುವೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸುದ್ದಿಯಾಗಿದ್ದರೂ ಹಾಜರಾಗಿ ಅಚ್ಚರಿ ಮೂಡಿಸಿದರು.  30 ವರ್ಷದ ಲಿಯೋನೆಲ್‌ ಮೆಸ್ಸಿ ತಮ್ಮ 9ನೇ ವಯಸ್ಸಿನಲ್ಲಿ ರೊಕುಜೊjರನ್ನು ಭೇಟಿಯಾಗಿದ್ದರು. ಅಲ್ಲಿಂದ ಶುರುವಾಗಿದ್ದ ಇಬ್ಬರ ನಡುವಿನ ಬಾಂಧವ್ಯ ಇದೀಗ ವಿವಾಹವಾಗಿ ಮಾರ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next