ಪ್ಯಾರಿಸ್: ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದು ಬೀಗಿದ್ದ ಲಿಯೋನೆಲ್ ಮೆಸ್ಸಿ ಇದೀಗ ದಾಖಲೆಯೊಂದನ್ನು ಬರೆದಿದ್ದಾರೆ. ಫ್ರೆಂಚ್ ಲೀಗ್ ಪಂದ್ಯದಲ್ಲಿ ಪಿಎಸ್ ಜಿ ತಂಡದ ಆಟಗಾರ ಮೆಸ್ಸಿ ಅವರು ಮಾಂಟ್ಪೆಲ್ಲಿಯರ್ ವಿರುದ್ಧ ಗೋಲು ಗಳಿಸಿದ ವೇಳೆ ರೊನಾಲ್ಡೊ ದಾಖಲೆಯನ್ನು ಅಳಿಸಿ ಹಾಕಿದರು.
ಬುಧವಾರ ನಡೆದ ಪಂದ್ಯದಲ್ಲಿ ಪಿಎಸ್ ಜಿ ತಂಡವು ಮಾಂಟ್ಪೆಲ್ಲಿಯರ್ ತಂಡವನ್ನು 3-1 ಅಂತರದಿಂದ ಸೋಲಿಸಿತು. ಫ್ಯಾಬಿಯನ್ ರುಯಿಜ್ ಅವರು 55 ನಿಮಿಷ, ಮೆಸ್ಸಿ 72ನೇ ನಿಮಿಷ, ವ್ಯಾರೆನ್ ಎಮೆರಿ 92ನೇ ನಿಮಿಷದಲ್ಲಿ ಗೋಲು ಗಳಿಸಿ ಪಿಎಸ್ ಜಿ ತಂಡಕ್ಕೆ ನೆರವಾದರು.
ಇದನ್ನೂ ಓದಿ:86 ನಿಮಿಷಗಳ ಆಯವ್ಯಯ: ಪ್ರಧಾನಿ ಮೋದಿ ಮೇಜು ಕುಟ್ಟಿದ್ದೆಷ್ಟು ಬಾರಿ?
ಇದು ಟಾಪ್ 5 ಯುರೋಪಿಯನ್ ಲೀಗ್ ಗಳಲ್ಲಿ ಮೆಸ್ಸಿಯ 697 ನೇ ಗೋಲು ಆಗಿದ್ದು, ಕ್ರಿಸ್ಟಿಯಾನೋ ರೊನಾಲ್ಡೊ ಅವರ ದಾಖಲೆಯನ್ನು ಮೀರಿದರು. ಅಲ್ಲದೆ ರೊನಾಲ್ಡೊ ಅವರಿಗಿಂತ 84 ಕಡಿಮೆ ಪಂದ್ಯಗಳಲ್ಲಿ ಮೆಸ್ಸಿ ಈ ದಾಖಲೆ ಬರೆದರು.
ಪಿಎಸ್ ಜಿ ತಂಡದ ಮತ್ತೋರ್ವ ಸ್ಟಾರ್ ಆಟಗಾರ ಕಿಲಿಯನ್ ಎಂಬಪ್ಪೆ ಅವರು 21ನೇ ನಿಮಿಷದಲ್ಲಿ ಗಾಯಗೊಂಡು ಮೈದಾನದಿಂದ ಹೊರನಡೆದರು.