Advertisement

ಸಿಂಹಕ್ಕೆ ಕೃತಕ ಗರ್ಭಧಾರಣೆ ; ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ

08:50 AM Oct 01, 2018 | Karthik A |

ಪ್ರಿಟೋರಿಯಾ: ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಸಿಂಹಕ್ಕೆ ಕೃತಕ ಗರ್ಭಧಾರಣೆ ನಡೆಸಲಾಗಿದೆ. ಕಳೆದ ತಿಂಗಳು 25ರಂದು ಜನಿಸಿದ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯು ಸಂಪೂರ್ಣ ಆರೋಗ್ಯಯುತವಾಗಿ ದಕ್ಷಿಣ ಆಫ್ರಿಕಾದ ಕನ್ಸರ್ವೇಶನ್‌ ಸೆಂಟರ್‌ನಲ್ಲಿವೆ. ಪ್ರಿಟೋರಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂತಾನೋತ್ಪತ್ತಿ ಸಂಬಂಧಿ ಸಂಶೋಧನೆಯಿಂದ ಇದು ಸಾಧ್ಯವಾಗಿದೆ. ಸತತ 18 ತಿಂಗಳುಗಳವರೆಗೆ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದೆವು ಎಂದು ವಿಶ್ವವಿದ್ಯಾಲಯದ ನಿರ್ದೇಶಕ ಆಂಡ್ರೆ ಗನ್‌ ಸ್ವಿಟ್‌ ಹೇಳಿದ್ದಾರೆ.

Advertisement

ಕೃತಕ ಗರ್ಭಧಾರಣೆ ಹೇಗೆ?: ಆರೋಗ್ಯವಂತ ಸಿಂಹದಿಂದ ವೀರ್ಯವನ್ನು ತೆಗೆದುಕೊಂಡು, ಅದನ್ನು ಸೂಕ್ತ ಸಮಯದಲ್ಲಿ ಹೆಣ್ಣು ಸಿಂಹಕ್ಕೆ ಕೃತಕವಾಗಿ ಇಂಜೆಕ್ಟ್ ಮಾಡಲಾಗಿದೆ. ಈ ಪ್ರಕ್ರಿಯೆ ಅತ್ಯಂತ ಸರಳವಾಗಿ ನಡೆದಿದೆ. ಆದರೆ ಇದಕ್ಕೂ ಮೊದಲು ಸಾಕಷ್ಟು ಅಧ್ಯಯನ ನಡೆಸಲಾಗಿತ್ತು. ಅಲ್ಲದೆ ಹಲವು ಬಾರಿ ಯತ್ನ ವಿಫ‌ಲವೂ ಆಗಿದೆ ಎಂದು ಅವರು ಹೇಳಿದ್ದಾರೆ.

ಸಂತತಿ ರಕ್ಷಣೆಗೆ ಅನುಕೂಲ: ಕೃತಕ ಗರ್ಭಧಾರಣೆ ಮಹತ್ವದ್ದಾಗಿದ್ದು, ಅಳಿವಿನಂಚಿನಲ್ಲಿರುವ ಸಿಂಹಗಳ ಹಲವು ಪ್ರಭೇದಗಳನ್ನು ರಕ್ಷಿಸುವಲ್ಲಿ ನೆರವು ನೀಡಲಿವೆ. 2 ದಶಕಗಳಲ್ಲಿ ಸಿಂಹಗಳ ಸಂಖ್ಯೆ ಶೇ.43ರಷ್ಟು ಕುಸಿದಿದೆ. ಸದ್ಯ ಆಫ್ರಿಕಾ ದೇಶಗಳಲ್ಲಿ ಕೇವಲ 20 ಸಾವಿರ ಸಿಂಹಗಳಿವೆ. ಆದರೆ ಈ ಸಂಶೋಧನೆ ಬಗ್ಗೆ ಪಾಶ್ಚಾತ್ಯ ದೇಶಗಳ ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಿಂಹ ಸಂತತಿ ರಕ್ಷಣೆಗೆ ನೆರವಾಗುವುದರ ಬದಲಿಗೆ, ಸಿಂಹದ ಮರಿಗಳ ವ್ಯಾಪಾರಕ್ಕೆ ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಸಿಂಹಗಳನ್ನು ಬೋನಿನಲ್ಲಿಟ್ಟಾಗ ಹೆಚ್ಚು ಮರಿ ಹಾಕುತ್ತವೆ. ಈ ಸಂಶೋಧನೆಯಲ್ಲಿ ಸಿಂಹಿಣಿಯನ್ನು ಬೋನಿನಲ್ಲಿಟ್ಟು ಕೃತಕ ಗರ್ಭಧಾರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next