ಶಿಡ್ಲಘಟ್ಟ: ಕ್ಷೇತ್ರದಲ್ಲಿ 1.70 ಲಕ್ಷ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲಾಗಿದ್ದು, ಉಳಿದ 28 ಸಾವಿರ ಚೀಟಿಗೆ ಲಿಂಕ್ ಮಾಡಲು ಸಹಕರಿಸಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಮನವಿ ಮಾಡಿದರು.
ನಗರದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್‌ಲಿಂಕ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಗರದ 38 ಸಹಿತ ಕ್ಷೇತ್ರಾದ್ಯಂತ 242 ಮತಗಟ್ಟೆಗಳಲ್ಲಿ ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಒಟ್ಟು 1,99,016 ಮತದಾರರ ಗುರುತಿನ ಚೀಟಿ ಪೈಕಿ 1,70,197 ಆಧಾರ್ ಲಿಂಕ್ ಮಾಡಲಾಗಿದೆ. 28 ಸಾವಿರ ಮಾತ್ರ ಉಳಿದುಕೊಂಡಿದೆ. ಆ ಪೈಕಿ ಶಿಡ್ಲಘಟ್ಟ ನಗರದಲ್ಲಿ 13 ಸಾವಿರ ಮತದಾರರು ಆಧಾರ್ ಲಿಂಕ್ ಮಾಡಿಸಿಲ್ಲ. ತಾಲೂಕು ಮಟ್ಟದ ಎಲ್ಲಾ ಅಧಿ ಕಾರಿಗಳ, ಚುನಾಯಿತ ಪ್ರತಿನಿ ಧಿಗಳ ಸಹಕಾರದಿಂದ ನಗರದಲ್ಲಿ ವಿಶೇಷ ಅಭಿಯಾನ ನಡೆಸಲಾಗಿದೆ ಎಂದರು.
ಅಗ್ರಸ್ಥಾನ ಪಡೆಯಲು ಸಹಕರಿಸಿ: ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಮತ ದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈಗಾಗಲೇ ಶೇ.92.83 ಮತ ದಾರರು ಗುರುತಿನ ಚೀಟಿಗೆ ಆಧಾ ರ್‌ಲಿಂಕ್ ಮಾಡಿಕೊಂಡಿದ್ದಾರೆ. ಇನ್ನು ಶಿಡ್ಲಘಟ್ಟ ನಗರಸಭೆಯ ವ್ಯಾಪ್ತಿ ಯಲ್ಲಿ ಶೇ.63 ಮತದಾರರು ಆಧಾರ್ ಲಿಂಕ್ ಮಾಡಿಕೊಂಡಿದ್ದಾರೆ ಎಂದರು.
ರಜೆ ದಿನದಲ್ಲಿಯೂ ಅಧಿಕಾರಿಗಳ ಸೇವೆ: ಮತದಾರರ ಗುರುತಿನ ಚೀಟಿಗೆ ಆಧಾ ರ್‌ಲಿಂಕ್ ಮಾಡುವ ಅಭಿಯಾ ನವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ನೇತೃತ್ವದಲ್ಲಿ ಪೌರಾಯುಕ್ತ ಶ್ರೀಕಾಂತ್ ಸಹಿತ ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ರಾಜಸ್ವ ನಿರೀಕ್ಷಕರು ರಜಾ ದಿನದಲ್ಲಿಯೂ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಪ್ರೀತಿವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ, ಪಂಚಾಯತ್ ರಾಜ್ ಇಲಾಖೆಯ ಟಿಪ್ಪು ಸುಲ್ತಾನ್, ರೇಷ್ಮೆ ಮಾರುಕಟ್ಟೆಯ ಸಹಾ ಯಕ ನಿರ್ದೇಶಕ ನರಸಿಂಹಮೂರ್ತಿ, ಕೃಷಿ ಇಲಾಖೆ ಅಧಿಕಾರಿ ವೀಣಾ ಇದ್ದರು.