Advertisement

ಫೇಸ್‌ಬುಕ್‌ನಲ್ಲಿ  ಲಿಂಗಾಯಿತ ಸಮಾಜ ಅವಹೇಳನ: ದೂರು

01:25 PM Jul 27, 2017 | |

ಕಂಪ್ಲಿ: ಸಾಮಾಜಿಕ ಜಾಲತಾಣದಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಅವಹೇಳನ ಮಾಡುವ ಪೋಸ್ಟರ್‌ಗಳನ್ನು
ಹಾಕಿದ್ದು, ಸಮಾಜವನ್ನು ಅತ್ಯಂತ ಕೀಳಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಕೂಡಲೇ ಬಂಧಿಸಿ
ಕಾನೂನು ಕ್ರಮ ಕೈಗೊಳ್ಳಬೇಕೆಂದು ವೀರಶೈವ ಲಿಂಗಾಯತ ಯುವ ವೇದಿಕ ಹೊಸಪೇಟೆ ತಾಲೂಕು ಘಟಕ ಮತ್ತು ಕಂಪ್ಲಿ ಹೋಬಳಿ ಘಟಕದ ಪದಾಧಿಕಾರಿಗಳು ಕಂಪ್ಲಿ ಠಾಣೆಯಲ್ಲಿ ಸಿಪಿಐ ಮತ್ತು ಪಿಎಸ್‌ಐಗಳಿಗೆ ಮನವಿ ಸಲ್ಲಿಸಿದರು.

Advertisement

ಯುವವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ. ಗೌಡ ಮತ್ತು ಎಸ್‌. ಚಂದ್ರಶೇಖರಗೌಡ, ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಮಮತಾ ನಾಯ್ಕ ಎನ್ನುವವರು ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಮಾಜದ ಸ್ವಾಸ್ಥವನ್ನು ಕದಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ವೀರಶೈವ ಸಮಾಜದ ಮುಖಂಡರಾದ ಇಟಗಿ ಬಸವರಾಜಗೌಡ, ಜಿ.ಜಿ. ಚಂದ್ರಣ್ಣ ಮತ್ತು ವಿ.ವಿದ್ಯಾಧರ ಮಾತನಾಡಿ ಅನಾದಿ ಕಾಲದಿಂದಲೂ ಇತರೆ ಸಮಾಜದವರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿರುವ ಹಾಗೂ  ಸರ್ಕಾರದ ನೀತಿಗಳನುಗುಣವಾಗಿಯೇ ಮೀಸಲಾತಿ ಸೌಲಭ್ಯ ಪಡೆದಿರುವ ವೀರಶೈವ ಲಿಂಗಾಯತ ಧರ್ಮವು ಯಾವುದೇ ಮೀಸಲಾತಿಗಾಗಿ ಅನ್ಯ ಮಾರ್ಗವನ್ನು ಹಿಡಿದಿಲ್ಲ. ಆದರೂ ಈ ರೀತಿ ಅವಹೇಳನಕಾರಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದವರನ್ನು ಕೂಡಲೇ ಬಂಧಿ ಸಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  

ಕಂಪ್ಲಿ ವಲಯ ನಿರೀಕ್ಷಕರಾದ ಸಿದ್ದೇಶ್ವರ ಕೃಷ್ಣಾಪುರ ಮತ್ತು ಪಿಎಸ್‌ಐ ಬಿ.ನಿರಂಜನ ಅವರಿಗೆ ಮನವಿ
ಸಲ್ಲಿಸಿದರು. ವೀರಶೈವ ಸಮಾಜದ ಮುಖಂಡರಾದ ಕನಕಗಿರಿ ರೇಣುಕಪ್ಪ, ಜವುಕಿನ ಶಂಕರ್‌, ದೇವಸಮುದ್ರದ
ಚನ್ನಬಸವ, ಜಿ.ಚಂದ್ರಶೇಖರಗೌಡ ಸೇರಿದಂತೆ ವೇದಿಕೆ ಪದಾಧಿ ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next