Advertisement

ಕನ್ನ ಡ ಭಾಷೆ ಶ್ರೀಮಂತಗೊಳಿಸಲು ಲಿಂಗಯ್ಯ ಸಲಹೆ

12:43 PM Jan 23, 2022 | Team Udayavani |

ರಾಣಿಬೆನ್ನೂರ: ಕನ್ನಡದ ಅಳಿವು ಉಳಿವು ಕನ್ನಡಿಗರ ಮೇಲಿದೆ. ಕನ್ನಡವನ್ನು ಮನೆಯ ಮುಂಬಾಗಿಲಾಗಿ, ಆಂಗ್ಲ ಭಾಷೆಯನ್ನು ಮನೆಯ ಹಿಂಬಾಗಿಲಾಗಿ, ಹಿಂದಿ ಮತ್ತು ಉಳಿದ ಭಾಷೆಗಳನ್ನು ಕಿಟಕಿಗಳಾಗಿ ಬಳಕೆ ಮಾಡಿದಲ್ಲಿ ಕನ್ನಡ ಭಾಷೆ ಶ್ರೀಮಂತಗೊಳ್ಳುವ ಮೂಲಕ ನಮ್ಮ ಜ್ಞಾನಾರ್ಜನೆ ಹೆಚ್ಚಾಗಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಚ್‌.ಬಿ. ಲಿಂಗಯ್ಯ ಹೇಳಿದರು.

Advertisement

ಶನಿವಾರ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಹಿತಿ ಚಂಪಾ ಬದುಕು ಮತ್ತು ಬರಹ ಕುರಿತ ಹಾಗೂ ಕಸಾಪ ಗ್ರಾಮೀಣ ಘಟಕದ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಯುವ ಬರಹಗಾರರಿದ್ದು, ಕಸಾಪ ಗ್ರಾಮೀಣ ಘಟಕ ಅವರನ್ನು ಗುರುತಿಸಲು ಮುಂದಾಗಬೇಕು ಎಂದರು. ಡಾ| ಕಾಂತೇಶ ಅಂಬಿಗೇರ ಮಾತನಾಡಿ, ಕನ್ನಡ ನಾಡಿನ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಗಟ್ಟಿ ಧ್ವನಿ ಎತ್ತುವ ತಾಕತ್ತು ಇದ್ದದ್ದು ನಾಡಿನ ಧೀಮಂತ ಸಾಹಿತಿ, ಬರಹಗಾರ, ಕನ್ನಡಪರ ಹೋರಾಟಗಾರ, ವಿಮರ್ಶಕ, ನಾಟಕಕಾರ ಚಂದ್ರಶೇಖರ ಪಾಟೀಲ (ಚಂಪಾ) ಅವರಿಗೆ ಮಾತ್ರ ಎಂದರೆ ತಪ್ಪಾಗಲಿಕ್ಕಿಲ್ಲ ಎಂದರು.

1980ರ ಅವಧಿಯಲ್ಲಿ ಚಂಪಾರವರು ಬಂಡಾಯ ಸಾಹಿತ್ಯದ ಮೆರಗು ಚೆಲ್ಲಿದರು. ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಈ ನಾಡು, ನುಡಿ, ಮಣ್ಣಿಗೆ ಸಮಸ್ಯೆ ಬಂದಾಗ ಕೆಚ್ಚೆದೆಯಿಂದ ಹೋರಾಡುವ ಮನೋಭಾವ ಹೊಂದಿದ್ದರು. ಚಂಪಾರವರ ವಯೋ ಸಹಜ ಸಾವು ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು. ರಾಧಾ ಕೋಡಬಾಳ, ಶಿವಾನಂದ ಕೋಣನವರ, ವೀರೇಶ ಜಂಬಗಿ, ಮಾಲತೇಶ ಕೊರಚರ, ಅಡಿವೆಪ್ಪ ಕುರಿಯವರ, ಬಿ.ಎಂ. ಜಗಾಪುರ, ಪ್ರೊ| ಎಚ್‌.ಎ. ಭಿûಾವರ್ತಿಮಠ, ಎಸ್‌.ಸಿ. ಷಡಕ್ಷರಿಮಠ, ಬಿ.ಪಿ. ಶಿಡೇನೂರ, ಎಫ್‌.ಎಂ. ಕೊರಚರ, ಪ್ರಭಾಕರ ಶಿಗ್ಲಿ, ಗ್ರಾಪಂ ಸದಸ್ಯರಾದ ಫಕ್ಕೀರವ್ವ ಡೊಳ್ಳಿನ, ಬಸವಣ್ಣೆವ್ವ ಕಟಿಗೇರ, ಶಾಂತವ್ವ ಕೋರೆಪ್ಪನವರ, ನೀಲಮ್ಮ ಮಾದರ, ಮಾರುತಿ ಮಾದರ, ಮಹೇಶ ಲಮಾಣಿ, ಪುಟ್ಟಯ್ಯ ಭಿûಾವರ್ತಿಮಠ, ಮಲ್ಲಪ್ಪ ಕಟಿಗೇರ, ಈರಣ್ಣ ತಿರ್ಲಾಪುರ, ಹೊನ್ನಪ್ಪ ಅಂತರವಳ್ಳಿ, ಬಸವರಾಜ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next