ಬಸವಣ್ಣನವರ ಅನುಯಾಯಿಗಳ ಕುತಂತ್ರವಲ್ಲ, ಗುರು ಪರಂಪರೆ ಯವರಂತೆ ನಮಗೆ ಪೀಠಗಳ ವ್ಯಾಮೋಹವೂ ಇಲ್ಲ ಎಂದು ಬಸವ ಧರ್ಮ ಪೀಠದ ಜಗದ್ಗುರು ಡಾ| ಮಾತೆ ಮಹಾದೇವಿ ಹೇಳಿದರು.
Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡುವಂತೆ ಆಗ್ರಹಿಸಿ ನಗರದ ಎನ್.ವಿ. ಮೈದಾನದಲ್ಲಿ ಸೆ.24ರಂದು ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಸಮ
ಯದ ಅಭಾವದಿಂದ ಕಾರ್ಯಕ್ರಮ ಸೆ.4ರ ಬದಲು 24ಕ್ಕೆ ಮುಂದೂಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ತಮ್ಮ ಬೇಡಿಕೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.