Advertisement

ಲಿಂಗಾಯತ ಸ್ವತಂತ್ರ ಧರ್ಮ ರಾಜಕೀಯ ತೀರ್ಮಾನ ಮುಖ್ಯ

12:28 PM Aug 09, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ-ವೀರಶೈವ ಬೇರೆ ಎಂಬ ವಿವಾದ ಇಂದು ನಿನ್ನೆಯದಲ್ಲ, ಸುಮಾರು 600 ವರ್ಷಗಳಿಂದ ನಡೆಯುತ್ತ ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಹೆಚ್ಚುತ್ತಿದ್ದು, ಈ ಬಗ್ಗೆ ರಾಜಕೀಯ ತೀರ್ಮಾನ ಮುಖ್ಯವಾಗಿದೆ. ಮುಖ್ಯಮಂತ್ರಿಯವರು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಡಾ| ಎಸ್‌.ಎಂ. ಜಾಮದಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

Advertisement

ಲಿಂಗಾಯತ ಹಾಗೂ ವೀರಶೈವರ ನಡುವೆ ಆಚಾರದಲ್ಲಿ ಬಹುದೊಡ್ಡ ವ್ಯತ್ಯಾಸ, ಭಿನ್ನತೆ ಇಲ್ಲ. ಇಬ್ಬರಲ್ಲೂ ಸಾಕಷ್ಟು ಸಾಮ್ಯತೆ ಅಥವಾ ಬಹುತೇಕ ಒಂದೇ ಎನ್ನುವಂತಿದೆ. ಆದರೆ, ಬಂದಿರುವ ಪ್ರಶ್ನೆ ವಿಚಾರದ್ದು. ಲಿಂಗಾಯತ ಹಾಗೂ ವೀರಶೈವ ವಿಚಾರಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಮುಖ್ಯ ಎಂದರು. 

ದೇಶದಲ್ಲಿ ಮೂಲತಃ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ಬಸವಣ್ಣವರು ಸಹ ಹಿಂದೂ ಆಗಿದ್ದವರು. ಆದರೆ, ಕಾಲಮಾನದ ಬದಲಾವಣೆ, ವಿಚಾರಗಳ ಬದಲಾವಣೆಯನ್ನು ಗಮನಿಸಬೇಕಾಗಿದೆ. ವಿಚಾರ ಬದಲಾವಣೆ ಒಪ್ಪಿಕೊಂಡವರಿಗೂ ಮನ್ನಣೆ ದೊರೆಯಬೇಕಾಗಿದೆ ಎಂದು ಹೇಳಿದರು.  

ಯಾವುದೇ ಧರ್ಮವಿರಲಿ, ಅದು ತನ್ನ ಸಮಾಜದ ಬದುಕಿನ ಪ್ರಶ್ನೆಯನ್ನು ಅರ್ಥೈಯಿಸಿಕೊಳ್ಳದಿದ್ದರೆ ಅಥವಾ ಅದಕ್ಕೆ ಸ್ಪಂದಿಸದಿದ್ದರೆ ಅಂತಹ ಧರ್ಮಕ್ಕೆ ಅರ್ಥವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಹಿಂದೆ ಸಮಾಜದ ಬದುಕಿನ ಪ್ರಶ್ನೆಯೂ ಅಡಗಿದೆ. ಪ್ರತ್ಯೇಕ ಧರ್ಮದಿಂದ ಹೆಚ್ಚುವರಿ ಸೌಲಭ್ಯ ಸಿಕ್ಕರೆ ಸಿಗಲಿ ಎಂದರು. 

ಲಿಂಗಾಯತ- ವೀರಶೈವ ಎಂಬುದು ಮಠಾಧೀಶರ  ನಡುವಿನ ಭಿನ್ನಾಭಿಪ್ರಾಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಠಾಧೀಶರ ಭಿನ್ನಾಭಿಪ್ರಾಯ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಬಾರದು. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವವರು ಇದಕ್ಕೆ ಉತ್ತರಿಸಿಬೇಕು ಎಂದರು. 

Advertisement

ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಆ. 10ರಂದು ಬೆಂಗಳೂರಿನಲಿ ನಡೆಯುವ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next