Advertisement
ನಗರದ ಬಸವನಗುಡಿಯಲ್ಲಿ ಗುರುವಾರ ರಾತ್ರಿ ನಡೆದ ವೀರಶೈವ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನ ಬಗ್ಗೆ, ಅವರ ವಿಚಾರದ ಬಗ್ಗೆ ಗೊಂದಲ ಮಾಡಿಕೊಳ್ಳಬಾರದು. ಲಿಂಗಾಯತ ಧರ್ಮದ ವಿಚಾರದಲ್ಲಿ ಐದು ಪಿಟಿಷನ್ ಬಂತು. ನಾಗಮೋಹನ್ ದಾಸ್ ನೇತೃ ತ್ವದಲ್ಲಿ ಸಮಿತಿ ಮಾಡಿದೆ. ರಿಪೋರ್ಟ್ ಬಂತು. ಅದನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ನಂತರ ಕೇಂದ್ರಕ್ಕೆ ಶಿಫಾರಸು ಮಾಡಿದೆವು. ಕ್ಯಾಬಿನೆಟ್‌ನಲ್ಲಿ ಈಶ್ವರ್ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಮಗ ಮಲ್ಲಿಕಾರ್ಜುನ್ ಕೂಡ ಇದ್ದರು. ಆ ವರದಿಯನ್ನೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆವು, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡಲು ಸೂಚಿಸಿದೆ. ಇದೇ ಕಾರಣಕ್ಕೆ ವೀರಶೈವ ಮಹಾಸಭಾದಿಂದ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಸಭೆಗೆ ಶಾಮನೂರು ಶಿವಶಂಕರಪ್ಪ ಅವರು ಕರೆದರು. ಸನ್ಮಾನ ಮಾಡಿದರು. ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಅಂತ ಕೇಳಿದರು. ನಾನು ಒಗ್ಗಟ್ಟಾಗಿ ಬನ್ನಿ ಅಂದೆ. ವಿರಕ್ತ ಮಠದ ಸ್ವಾಮಿಗಳು ಬಂದರು. ಲಿಂಗಾಯತ ಧರ್ಮ ಮಾಡಬೇಕು ಅಂತ ಕೇಳಿದರು. ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ, ಮಾತೆ ಮಹಾದೇವಿ, ತೋಂಟದಾರ್ಯ ಸ್ವಾಮೀಜಿ ಅವರು ಕೂಡ
ಬಂದಿದ್ದರು. ಗುರು ಪರಂಪರೆಯವರು ಬಂದು ವೀರಶೈವ ಧರ್ಮ ಮಾಡಿ ಅಂದರು. ಎಲ್ಲ ಸೇರಿ ಐದು ಪಿಟಿಷನ್ ಬಂತು. ಅದಕ್ಕಾಗಿ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಲಾಯಿತು.
Related Articles
Advertisement
ಕಾಯಕ, ದಾಸೋಹ ಬಸವಣ್ಣ ಹೇಳಿದ ಪ್ರಮುಖ ಸಂಗತಿ. ಎಲ್ಲರೂ ಕಾಯಕ ಮಾಡಬೇಕು ಅಂತಾ ಬಸವಣ್ಣ ಹೇಳಿದರು. ನೀವು ಕೆಲಸ ಮಾಡುವ ಮೂಲಕ ದೇವರನ್ನು ಕಾಣಬೇಕು. ಎಲ್ಲರೂ ಸೇರಿ ಉತ್ಪಾದನೆ ಮಾಡಬೇಕು. ಉತ್ಪಾದಿಸಿದ್ದು ಹಂಚಿ ತಿನ್ನಬೇಕು. ಅದೇ ದಾಸೋಹ. ಸಮಾನತೆಯತತ್ವವನ್ನು ಜಗತ್ತಿಗೆ ಮೊದಲು ಬೋಧಿಸಿದ್ದು ಬಸವಣ್ಣ. ಬಸವಣ್ಣ ಹೇಳಿದ್ದು ಇದನ್ನೇ, ಗಾಂಧೀಜಿ ಹೇಳಿದ್ದು ಇದನ್ನೇ. ಇದೇ ಸಂವಿಧಾನದಲ್ಲಿ ಇರೋದು ಎಂದರು. ವಿಜಯಪುರ ಮಹಿಳಾ ವಿವಿ ಆಗಿದ್ದು ಎಸ್.ಎಂ. ಕೃಷ್ಣ ಕಾಲದಲ್ಲಿ. ಅದಕ್ಕೆ ಅಕ್ಕಮಹಾದೇವಿ ಹೆಸರಿಡಬೇಕು ಅಂತ ಕೂಗು ಇತ್ತು. ಯಡಿಯೂರಪ್ಪ, ಶೆಟ್ಟರ್ ಸಿಎಂ ಆದಾಗ ಅದಕ್ಕೆ ಯಾಕೆ ಆ ಹೆಸರಿಡಲಿಲ್ಲ. ನಾನು ಸಿಎಂ ಆದಾಗ ಕ್ಯಾಬಿನೆಟ್‌ನಲ್ಲಿ ತಂದು ಹೆಸರಿಟ್ಟೆ. ಕಿತ್ತೂರು ರಾಣಿ ಚೆನ್ನಮ್ಮ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮಾಡಿದ್ದು ಯಾರು? ನಾನು. ಹಾಗಿದ್ದರೆ ನಾನು ಹೇಗೆ ಲಿಂಗಾಯತ, ವೀರಶೈವ ವಿರೋಧಿ ಆಗ್ತಿನಿ ಎಂದು ಖಾರವಾಗಿ ಪ್ರಶ್ನಿಸಿದರು.