Advertisement
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ 22ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಸಂಬಂಧ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿಯೂ ಘೋಷಣೆ ಮಾಡಬೇಕು ಎಂಬುದೂ ಸೇರಿದೆ.
Related Articles
Advertisement
ಬಸವಣ್ಣ ಸಾಂಸ್ಕೃತಿಕ ನಾಯಕನಾಗಲಿನಾರಾಯಣ ಗುರುಗಳನ್ನು ಕೇರಳ ತಮ್ಮ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿಕೊಂಡಿದೆ. ಅದೇ ರೀತಿ ಮಹಾರಾಷ್ಟ್ರ ಛತ್ರಪತಿ ಶಿವಾಜಿ, ಪಶ್ಚಿಮ ಬಂಗಾಳ ರವೀಂದ್ರನಾಥ ಠಾಕೂರ್ ಹಾಗೂ ತಮಿಳುನಾಡು ತಿರುವಳ್ಳವರ್‌ನ್ನು ತಮ್ಮ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿವೆ. ಹೀಗಾಗಿ ರಾಜ್ಯ ಸರ್ಕಾರವೂ ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಮಾತೆ ಮಹಾದೇವಿ ಆಗ್ರಹಿಸಿದರು. ಲಿಂಗಾಯತ ಧರ್ಮದ ವಿವಿಧ ಉಪಜಾತಿಗಳಿಗೆ ವೀರಶೈವ-ಲಿಂಗಾಯತ ಎಂಬ ಜಾತಿ ಪ್ರಮಾಣ ಪತ್ರದಲ್ಲಿ ನಮೂದಿಸಲಾಗುತ್ತಿದ್ದು, ಎಸ್.ಎಂ.ಕೃಷ್ಣಾ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಹೀಗಾಗಿ ಕೂಡಲೇ ಅದನ್ನು ರದ್ದುಪಡಿಸಬೇಕು ಮತ್ತು ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು ಎಂದು ಮಾತೆ ಮಹಾದೇವಿ ಒತ್ತಾಯಿಸಿದರು. ದೆಹಲಿಯಲ್ಲಿ ರ್ಯಾಲಿ
ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಕೂಡಲೇ ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು. ಈ ಮೂಲಕ ಕೇಂದ್ರ ಸರ್ಕಾರದ ಮೇಲೆಯೂ ಒತ್ತಡ ತರುವ ಕೆಲಸ ಮಾಡುತ್ತೇವೆ. ಜತೆಗೆ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಸರ್ಕಾರ ಹಣ ನೀಡುತ್ತಿದೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದು, ಜನರಿಂದ ದೇಣಿಗೆ ರೂಪದಲ್ಲಿ ಪಡೆದ ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಮಾತುತಪ್ಪಿದ ದೇವೇಗೌಡರು
ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದಾಗ ಎಚ್.ಡಿ.ದೇವೆಗೌಡರು ಅವರು, ತಾವು ಪ್ರಧಾನಿಯಾಗುತ್ತಿದ್ದು, ದೆಹಲಿಯಿಂದ ಬಂದ ಕೂಡಲೇ ಬಸವೇಶ್ವರರ ಹೆಸರಿಡುವುದಾಗಿ ಹೇಳಿದ್ದರು. ಒಂದೊಮ್ಮೆ ಹೆಸರಿಡದಿದ್ದರೆ ತಮ್ಮನ್ನು ವಚನಭ್ರಷ್ಟ ಎಂದು ಕರೆಯುವಂತೆ ತಿಳಿಸಿದ್ದರು. ಅವರು ದೆಹಲಿಗೆ ಹೋಗಿ ಪ್ರಧಾನಿಯೇನೋ ಆಗಿ ರಾಜ್ಯಕ್ಕೆ ಬಂದರೂ ಹೆಸರು ಮಾತ್ರ ನಾಮಕರಣ ಮಾಡಲಿಲ್ಲ ಎಂದು ರೋಪಿಸಿದರು. ನಂತರ ಮಾತನಾಡಿದ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಈಗಾಗಲೇ ರಾಜ್ಯದಲ್ಲಿ ಪ್ರತ್ಯೇಕ ಧರ್ಮಕ್ಕೆ ನಡೆಸುತ್ತಿರುವ ಪ್ರತಿಭಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಮುಟ್ಟಿವೆ. ಅದೇ ರೀತಿ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶವು ವಿಶ್ವಸಂಸ್ಥೆಯ ಬಾಗಿಲಿಗೆ ಮುಟ್ಟಬೇಕಿದೆ ಎಂದು ತಿಳಿಸಿದರು.
ಒಂದು ಮೊಬೈಲ್‌ನ ಬ್ಯಾಟರಿ ರಾತ್ರಿ ವೇಳೆಗೆ ವೀಕ್ ಆಗುತ್ತದೆ. ಆದರೆ, ನಮ್ಮ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬ್ಯಾಟರಿಯನ್ನು ಯಾರಿಂದಲೂ ವೀಕ್ ಮಾಡಲು ಸಾಧ್ಯವಿಲ್ಲ. ನಮ್ಮ ಬೀದರ್‌ನ ರ್ಯಾಲಿ 1ಜಿ ಆಗಿತ್ತು, ಬೆಳಗಾವಿಯ ರ್ಯಾಲಿ 2ಜಿ ಆಗಿತ್ತು, ಲಾತೂರ್‌ನಲ್ಲಿ ನಡೆದ ರ್ಯಾಲಿ 3ಜಿ ಹಾಗೂ ಹುಬ್ಬಳಿಯಲ್ಲಿನ ರ್ಯಾಲಿ 4ಜಿ ಆಗಿತ್ತು. ಇದೀ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ರ್ಯಾಲಿಯನ್ನು 5ಜಿ ಮಾಡುವ ಮೂಲಕ ಜಗತ್ತು ನಮ್ಮ ಕಡೆ ನೋಡುವಂತೆ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ಸೂಚಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದಿದೆ ಎಂದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶತಾಯುಷಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಸಚಿವರಾದ ಎಂ.ಬಿ.ಪಾಟೀಲ್, ರಾಲಿಂಗಾರೆಡ್ಡಿ, ವಿನಯ್ ಕುಲಕರ್ಣಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ನಟ ಚೇತನ್, ಹಿಂದುಳಿದ ವರ್ಗಗಳ ಆರೋಗ್ಯ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಹಾಸಭೆಯ ನಿರ್ಣಯಗಳು
– ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ
– ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ಮಾನ
– ರಾಜ್ಯದಲ್ಲಿ ಬಸವಣ್ಣ ಸಾಂಸ್ಕೃತಿಕ ನಾಯಕನಾಗಬೇಕು
– ಕಲಬುರಗಿ ವಿವಿಗೆ ಬಸವೇಶ್ವರರ ಹೆಸರು
– ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ-ಲಿಂಗಾಯತ ಪದ ಬಳಕೆ ರದ್ದು