Advertisement
ನಗರದ ಬಸವಗಿರಿಯಲ್ಲಿ ನಡೆದ 16ನೇ ವಚನ ವಿಜಯೋತ್ಸವದಲ್ಲಿ ನಡೆದ ಲಿಂಗಾಯತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ ಏಕ ದೇವೋಪಾಸಾನೆ ಆಚರಣೆಯಾದರೆ, ಅಲ್ಲಿ ಬಹುದೇವ ಉಪಾಸನೆ ಜಾರಿಯಲ್ಲಿದೆ. ಇಲ್ಲಿ ಜ್ಯೋತಿಷಿಗಳಿಗೆ ಸ್ಥಾನವಿಲ್ಲ.
Related Articles
Advertisement
12ನೇ ಶತಮಾನದ ನಂತರದ ವರ್ಷಗಳಲ್ಲಿ ಕೇವಲ 350 ವಚನಗಳು ದೊರೆಕಿದ್ದವು. ಆ ನಂತರ ಸಂಶೋಧನೆ ಹುಡುಕಾಟದ ನಂತರ 15 ಸಾವಿರ ವಚನಗಳು ಸಿಕ್ಕಿವೆ. ಪುರೋಹಿತಶಾಹಿಗಳು ಪಟ್ಟಭದ್ರ ಹಿತಾಸಕ್ತಿಗಳು ಸಾವಿರಾರು ವಚನಗಳನ್ನು ನಾಶ ಪಡಿಸಿದ್ದಾರೆ. ಡಾ| ಎಸ್.ಎಂ. ಜಾಮದಾರ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಾಮೂಹಿಕ ಇಷ್ಟಲಿಂಗ ಪೂಜ ಅಂಗ-ಲಿಂಗ ಒಂದಾದರೆ ಜೀವನ ಸಮರಸ
ಬೀದರ: 16ನೇ ವಚನ ವಿಜಯೋತ್ಸವ ನಿಮಿತ್ಯ ರವಿವಾರ ಬಸವಗಿರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಜಗನ್ನಾಥ ರಾಯಚೋಟ್ಟಿ ಮಾತನಾಡಿ, ಅಂಗ-ಲಿಂಗ ಒದಾದರೆ ಜೀವನ ಸಮರಸವಾಗುತ್ತದೆ. ಪ್ರತಿನಿತ್ಯ ಲಿಂಗಾರ್ಚನೆ ಮಾಡುವ ಮೂಲಕ ಜೀವನ ಸ್ವಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು. ಅಕ್ಕ ಅನ್ನಪೂರ್ಣ ಅವರು ಮಾತನಾಡಿ, ಲಿಂಗಾರ್ಚನೆ ಮೂಲಕ ಜೀವನದಲ್ಲಿ ಒತ್ತಡದಿಂದ ಹೊರಬರ ಬರಲು ಸಾಧ್ಯ. ವೈಜ್ಞಾನಿ ದೃಷ್ಟಿಯಿಂದ ಕೂಡಿದ ಲಿಂಗಾರ್ಚನೆಯಿಂದ ದುಃಖ ದುಮ್ಮಾನಗಳಿಂದ ಹೋರಬರಲು ಸಾಧ್ಯವಾಗುತ್ತದೆ. ಜೀವನದಲ್ಲಿ ಸಂತೃಪ್ತಿ ನೆಮ್ಮದಿ, ಶಾಂತಿ ನೆಲೆಗೊಳಿಸಬೇಕಾದರೆ ನಿತ್ಯ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡಬೇಕು. ಪರಮ ಸತ್ಯ ಅರಿಯಬೇಕಾದರೆ ಇಷ್ಟಲಿಂಗದ ಮೊರೆ ಹೋಗಬೇಕು. ಇಷ್ಟಲಿಂಗದಲ್ಲಿ ಆರ್ಕಷಣೆ ಶಕ್ತಿಯಿದೆ. ಮಾನಸಿಕ ನೆಮ್ಮದಿ ಇದೆ. ಶಾರರೀಕವಾಗಿ ಸದೃಢಗೊಳಿಸುತ್ತದೆ ಎಂದು ವಿವರಿಸಿದರು. ಶ್ರೀ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ, ರಮೇಶ ಮಠಪತಿ ಲಿಂಗಪೂಜಾ ವಿಧಾನಗಳನ್ನು ವಿವರಿಸಿದರು. ಡಾ| ಗಂಗಾಂಬಿಕಾ, ಪ್ರಭುದೇವರು, ಸಿದ್ಧರಾಮಪ್ಪ ಕಪಲಾಪುರೆ, ಪ್ರಶಾಂತ ಪರ್ತಾಪುರೆ, ಶಿವಾನಂದ ಪಾಟೀಲ, ಚಂದ್ರಕಾಂತ ರತ್ನಾಪುರೆ, ಶರಣ ಕಂಟೆಪ್ಪ ಗಂದಿಗುಡೆ, ಮಲ್ಲಮ್ಮ ನಾಗನಕೇರಿ, ವಿದ್ಯಾವತಿ ಸೋಮನಾಥಪ್ಪ ಅಷೂರ, ವಿರೂಪಾಕ್ಷ ಗಾದಗಿ, ಅಣ್ಣಾರಾವ್ ಮೊಗಶೆಟ್ಟಿ, ಶರಣಪ್ಪ ಬಿರಾದಾರ, ಜಗನ್ನಾಥ ರಾಯಚೋಟಿ, ಅಣ್ಣಾರಾವ್ ಮೊಗಶೆಟ್ಟಿ, ಶರಣಪ್ಪ ಬಿರಾದಾರ, ಶರಣ ಚಂದ್ರಶೇಖರ ಉಳಗಡ್ಡಿ, ಶಾಮರಾವ್ ಮೋರಗಿಕರ್, ಹಣಮಂತರಾವ್ ಕೊಳಕ್ಕೂರ, ಅರವಿಂದ ರಗಟೆ, ಸಂತೋಷ ಹಡಪದ, ವೀರೇಶ ಜಗನ್ನಾಥ ಸಿರ್ಸೆ, ಚಂದ್ರಕಾಂತ ಹೆಬ್ಟಾಳೆ, ಹಾವಗಿರಾವ್ ವಟಗೆ, ಸಂತೋಷ ಪಾಟೀಲ ಉಪಸ್ಥಿತರಿದ್ದರು.