Advertisement

ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರ

02:21 PM Dec 06, 2017 | |

ತಾಂಬಾ: ಕರ್ನಾಟಕದಲ್ಲಿ ಲಿಂಗಾಯತ ಮಠಗಳು ಶಿಕ್ಷಣರಂಗ ಬೆಳೆಸಲು ಸಾಕಷ್ಟು ಶ್ರಮಿಸುತ್ತಿವೆ. ಅದರಂತೆ ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು
ವಚನಪಿತಾಮಹ ಫ.ಗು. ಹಳಕಟ್ಟಿ ಹಾಗೂ ಬಿ.ಎಂ. ಪಾಟೀಲರ ಸೇವೆ ಅನನ್ಯವಾಗಿದೆ. ಇಂತಹ ಮಹಾನ್‌ ಚೇತನರಿಂದ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು ಹೆಸರುವಾಸಿಯಾಗಿವೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ. ಬಿ. ಪಾಟೀಲ ಹೇಳಿದರು.

Advertisement

ಗ್ರಾಮದ ಶ್ರೀ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಮಾತೋಶ್ರೀ ಮುರುಗೆವ್ವ ಷಣ್ಮುಖಪ್ಪ ಗುಡ್ಡೋಡಗಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು,. ಉತ್ತರ ಕರ್ನಾಟಕದಲ್ಲಿ ಮಠಾಧಿಧೀಶರು ಶಿಕ್ಷಣ ರಂಗ ಮುಂದೆ ಬರಲು ಶ್ರಮಿಸಿದ್ದಾರೆ. ಗ್ರಾಮಿಣ ಭಾಗದ ಸಂಸ್ಥೆಗಳನ್ನು ಬೆಳೆಸಲು ದಾನಿಗಳ ನೀಡಿದ ಸಹಾಯದಿಂದ ಶೈಕ್ಷಣಿಕ ಪ್ರಗತಿ ಹೊಂದಲು ಗುಡ್ಡೋಡಗಿಯಂತ ದಾನಿಗಳ ಅವಶ್ಯವಿದೆ ಎಂದರು.

ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿರುವ ಯೋಜನೆಗಳು ಸೇರಿದಂತೆ 15ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಭದ್ರ ಬುನಾದಿ ಹಾಕಿದೆ. 203 ಕೆರೆಗಳನ್ನು ತುಂಬಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಮುಳವಾಡ
ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ, ಬೂದಿಹಾಳ ಹಾಗೂ ಕೆರಾಪುರ ಏತ ನೀರಾವರಿ, ಚಡಚಣ ಏತ ನೀರಾವರಿ, ನಾಗರಬೆಟ ನೀರಾವರಿ ಹಾಗೂ ರಸ್ತೆ ಸೇತುವೆ ಕಟ್ಟಡ ಇನ್ನಿತರ ಕಾಮಗಾರಿಗಳು ಸೇರಿ ಪ್ರಸಕ್ತ ಸಾಲಿನಲ್ಲಿ ಒಟ್ಟು 13769.70ಕೋಟಿ ರೂ. ಗಳನ್ನು ಜಿಲ್ಲೆಯಲ್ಲಿ ಅನೇಕ ಯೋಜನೆ ಅನುಷ್ಟಾನಗೊಳ್ಳುತ್ತಿವೆ. 

ರಾಜ್ಯದಲ್ಲಿ ಕಳಂಕರಹಿತ ಆಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ. ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಶೀಘ್ರದಲ್ಲಿ ನೀರು ಹರಿಸಲಾಗುವುದು ಎಂದು ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಬಂಥನಾಳದ ಸಂಗನಬಸವ ಶಿವಯೋಗಿಗಳು ವಿಜಯಪುರ ಜಿಲ್ಲೆಯಲ್ಲಿ ಜನಿಸದಿದ್ದರೆ ಇಂದು ನಾವು ಕತ್ತಲೆಯಲ್ಲಿ ಇರಬೇಕಾಗುತ್ತಿತ್ತು. 

Advertisement

ವಿಜಯಪುರದಲ್ಲಿ ಬಂಗಾರೆಮ್ಮ ಸಜ್ಜನರಿಂದ 54ಎಕರೆ ಭೂಮಿ ದಾನಪಡೆದು ಬಿಎಲ್‌ಡಿಇ ಸಂಸ್ಥೆ ನಿರ್ಮಿಸಿ ಬೆಳಕು ಚೆಲ್ಲಿದರು. ಮಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಆಗದ ಕೆಲಸ ಮಾಡಿ ರೈತರ ಬಾಳಿಗೆ ಬೆಳಕಾಗಿದ್ದಾರೆ ಎಂದು
ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಸಿಂದಗಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಂಗನಬಸವ ಶಿವಯೋಗಿಗಳ ಪ್ರೇರಣೆಯಿಂದ ನನ್ನ ಕ್ಷೇತ್ರದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಹತ್ತು ವರ್ಷದ ನನ್ನ ಆಡಳಿತ ಅವಧಿಯಲ್ಲಿ ತಲಾ 5ಲಕ್ಷ ರೂ.ಗಳಂತೆ ಅನುದಾನ ನೀಡಲಾಗಿದೆ ಎಂದರು. 

ಬೀದರದ ಶಿವಕುಮಾರ ಮಹಾಶಿವಯೋಗಿಗಳು, ಬಂತನಾಳದ ವೃಷಭಲಿಂಗ ಮಹಾಶಿವಯೋಗಿಗಳು
ಮಾತನಾಡಿದರು. ಎಸ್‌ವಿವಿ ಸಂಘದ ಚೇರಮನ್‌ ಜೆ.ಎಸ್‌. ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಎಸ್‌. ಕಲ್ಲೂರ, ಅಶೋಕ ಕುಲಕರ್ಣಿ, ಡಿ.ಎಸ್‌.ಗುಡ್ಡೋಡಗಿ, ಸಿದ್ದಪ್ಪ ಕೆಂಗನಾಳ ಉಪಸ್ಥಿತರಿದ್ದರು. ಪ್ರೊ| ಎ.ಪಿ. ಕಾಗವಾಡಕರ ಸ್ವಾಗತಿಸಿದರು. ಪಿ.ಬಿ. ಕಾಡಯ್ಯನಮಠ ನಿರೂಪಿಸಿದರು. ಎಸ್‌.ಎಸ್‌. ಕನಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next