Advertisement

ಲಿಂಗಾಯತ ಧರ್ಮ ಶ್ರೀಗಳ ಬೆಂಬಲವಿಲ್ಲ

06:00 AM Sep 13, 2017 | |

ತುಮಕೂರು/ವಿಜಯಪುರ: ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ತಮ್ಮ ಬೆಂಬಲವಿದೆ ಎಂಬ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರ ಹೇಳಿಕೆಯನ್ನು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ತಳ್ಳಿಹಾಕಿದ್ದಾರೆ.

Advertisement

ಈ ಸಂಬಂಧ ಮಂಗಳವಾರ ಬೆಳಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿದ್ದ ಮಠ, ಎಂ.ಬಿ. ಪಾಟೀಲ್‌ ಅವರು ಶ್ರೀಗಳ ಹೇಳಿಕೆ ತಿರುಚಿದ್ದಾರೆ ಎಂದು ಹೇಳಿತ್ತು. ಆದರೆ, ಸಂಜೆ ಅಖೀಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು ಭೇಟಿ ಮಾಡಿದ ಬಳಿಕ, ಎರಡನೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಶ್ರೀಗಳು, ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ವೀರಶೈವ ಮಹಾಸಭಾದ ನಿಲುವಿಗೆ ತಮ್ಮ ಬೆಂಬಲವಿದೆ ಎಂದಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಬೇರೆ ಅಲ್ಲ, ಎರಡೂ ಒಂದೇ. ಇದರಲ್ಲಿ ಯಾರೂ ಗೊಂದಲ ಸೃಷ್ಠಿ ಮಾಡಬಾರದು. ಸಮಾಜಕೂಡ ಇದನ್ನೇ ಭಾವಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ, ಎರಡು ದಿನಗಳ ಹಿಂದೆ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ ವೇಳೆ ಪ್ರತ್ಯೇಕ ಧರ್ಮದ ವಿಷಯವಾಗಿ ಕೇಳಿದ್ದನ್ನು ಹಾಗೂ ಕಂಡದ್ದನ್ನು ಹೇಳಿದ್ದೇನೆ. ಇದರ ಹೊರತಾಗಿ ಬೇರೆ ಏನನ್ನೂ ಹೇಳಿಲ್ಲ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಶ್ರೀಗಳ ಪತ್ರದಲ್ಲಿ ಏನಿದೆ?
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರು ಸೆ. 10 ರಂದು ತಮ್ಮನ್ನು ಭೇಟಿ ಮಾಡಿ ವೀರಶೈವ -ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಪ್ರಸ್ತಾಪಿಸಿದಾಗ ನಾವು ಪ್ರತಿಕ್ರಿಯಿಸಿ ನಗರ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾವಂತರು ವೀರಶೈವ ಪದ ಮತ್ತು ಹಳ್ಳಿಯಲ್ಲಿ ವಾಸಿಸುವವರು ಲಿಂಗಾಯತ ಪದ ಬಳಸುತ್ತಾರೆ ಎಂದು ತಿಳಿಸಿದ್ದಾರೆ.

ಇವೆರಡು ಪದಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಎರಡು ಪದಗಳು ಒಂದೇ, ಒಂದು ವೇಳೆ ಭಿನ್ನಾಬಿಪ್ರಾಯ ಇದ್ದಿದ್ದೇ ಆದರೆ ಧಾರ್ಮಿಕ ಮುಖಂಡರು ಮತ್ತು ಸಮಾಜದ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸುವುದು ಒಳಿತು ಎಂದು ತಿಳಿಸಿದ್ದೆವು ಎಂದು ಹೇಳಿದ್ದಾರೆ.

Advertisement

ಆದರೆ ಸಚಿವರು ನಮ್ಮ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತಿರುಚಿ ಲಿಂಗಾಯತ ಧರ್ಮದ ಪರವಾಗಿದ್ದಾರೆ ಎಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿರುವುದು ದುರದೃಷ್ಣಕರ ಮತ್ತು ಅಪ್ರಸ್ತುತ. ಒಂದು ವೇಳೆ ವೀರಶೈವ ಲಿಂಗಾಯತ ಸಮಾಜವನ್ನು ಇಬ್ಭಾºಗ ಮಾಡಲು ಯಾರೇ ಪ್ರಯತ್ನ ಮಾಡಿದರೂ ಅದು ಸಮಾಜಕ್ಕೆ ಒಳಿತಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಮಾಜ ಕೂಡ ಇದೇ ಅಂತಿಮ ಎಂದು ಭಾವಿಸುವುದು ಒಳಿತು. ಈ ಕುರಿತು ಅಖೀಲ ಭಾರತ ವೀರಶೈವ ಮಹಾಸಭೆ ನಿರ್ಣಯ ಸಹ ಸರಿಯಾದ ನಡೆ. ಅದನ್ನು ನಾವು ಕೂಡ ಪುಷ್ಟೀಕರಿಸುತ್ತೇವೆ ಎಂದು ಹೇಳಿದ್ದಾರೆ.

ಮುಖಂಡರಿಂದ ಶ್ರೀಗಳ ಭೇಟಿ: ಪ್ರತ್ಯೇಕ ಧರ್ಮದ ಕುರಿತು ರಾಜ್ಯದಲ್ಲಿ ಭುಗಿಲೆದ್ದಿರುವ ವಿವಾದಕ್ಕೆ ತೆರೆ ಎಳೆಯಲು ಅಖೀಲ ಭಾರತ ವೀರಶೈವ ಮಹಾಸಭಾದ ಮುಖಂಡರು ಮಂಗಳವಾರ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಜತೆ ಚರ್ಚಿಸಿದರು. ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವರಾದ ಈಶ್ವರ ಖಂಡ್ರೆ, ತಿಪ್ಪಣ್ಣ ಸೇರಿ ಹಲವು ಮುಖಂಡರು ಸುಮಾರು ಮುಕ್ಕಾಲು ಗಂಟೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next