ಲಿಂಗಸುಗೂರು: ಅಲೆಮಾರಿ ಸಮುದಾಯ ದವರು ವಿದ್ಯೆ, ಜ್ಞಾನ, ಓದುವ ಅಭಿರುಚಿ ಬೆಳೆಸಿಕೊಂಡು ಸಾಕ್ಷರತಾ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಪಟ್ಟಣದಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಎರಡು ಗ್ರಂಥಾಲಯ ತೆರೆಯಲಾಗಿತ್ತು ಆದರೆ ಗ್ರಂಥಪಾಲಕರ ನಿರ್ಲಕ್ಷ್ಯದಿಂದ ಹಲವಾರು ತಿಂಗಳಿಂದ ಗ್ರಂಥಾಲಯಕ್ಕೆ ಬೀಗ ಜಡಿಯಲಾಗಿದೆ.
Advertisement
ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯನ ವಿಶ್ವವಿದ್ಯಾಲಯ ಎಂದು ಕರೆಯಲಾಗುತ್ತಿದೆ. ಆದರೆ ಪಟ್ಟಣದ ಸಂತೆಬಜಾರ್‌ನಲ್ಲಿ ಹಳೆಯ ಸುಣಗಾರಗಲ್ಲಿ ಶಾಲಾ ಕಟ್ಟಡವೊಂದರಲ್ಲಿ ನಡೆಸುತ್ತಿರುವ ಅಲೆಮಾರಿ ಗ್ರಂಥಾಲಯ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದೆ.
ಹೊಸ ಕಟ್ಟಡ ನಿರ್ಮಾಣ ಕಾರ್ಯ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದೆ.
ಒಂದೂವರೆ ವರ್ಷದಿಂದ ಗ್ರಂಥಾಲಯ ಬಂದ್ ಆಗಿದ್ದರೂ ಗ್ರಂಥಪಾಲಕನಿಗೆ ಮಾತ್ರ ಪ್ರತಿ ತಿಂಗಳು ಸಂಬಳ ಕೈ ಸೇರುತ್ತಿದೆ. ಇದಲ್ಲದೆ ಪತ್ರಿಕೆಗಳನ್ನು ತರಿಸದಿದ್ದರೂ ಅವುಗಳ ಬಿಲ್ ಗ್ರಂಥಪಾಲಕನ ಜೇಬಿಗೆ ಸೇರುತ್ತಿದೆ. ಗ್ರಂಥಾಲಯ ತೆಗೆಯದಿದ್ದರೂ ಸಂಬಳ ನೀಡುತ್ತಿರುವ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳ ಕಾರ್ಯವೈಖರಿ ಮೆಚ್ಚುವಂತಹದು.