Advertisement

ನೋಂದಣಿ ಕಚೇರಿಯಲ್ಲಿ ಸಾಮಾಜಿಕ ಅಂತರ ಕಣ್ಮರೆ

12:06 PM May 09, 2020 | Naveen |

ಲಿಂಗಸುಗೂರು: ಕೋವಿಡ್ ವೈರಸ್‌ ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಅತಿ ಮುಖ್ಯವಾಗಿದೆ. ಆದರೆ ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ಸಾಮಾಜಿಕ ಅಂತರ ಕಣ್ಮರೆಯಾಗಿದೆ.

Advertisement

ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಸರ್ಕಾರ ಒಂದು ತಿಂಗಳು ಕಾಲ ಉಪ ನೋಂದಣಿ ಕಚೇರಿ ಬಂದ್‌ ಮಾಡಿತ್ತು. ಆದರೆ ಕಳೆದ ಒಂದು ವಾರದಿಂದ ಉಪ ನೋಂದಣಿ ಕಚೇರಿ ಪುನಾರಂಭವಾಗಿದೆ. ಆದರೆ ಇಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದು ಜನರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ 190ಕ್ಕೂ ಅಧಿಕ ಹಳ್ಳಿಗಳಿವೆ. ಮಸ್ಕಿ ಹೊಸ ತಾಲೂಕು ಆದರೂ ಇಲ್ಲಿ ಇನ್ನೂ ಸಬ್‌ ರಜಿಸ್ಟರ್‌ ಕಚೇರಿ ಆರಂಭವಾಗದ ಕಾರಣದಿಂದ ಇಲ್ಲಿನ ಸಬ್‌ ರಜಿಸ್ಟರ್‌ ಕಚೇರಿಯಲ್ಲಿ ನೋಂದಣಿಗಳು ನಡೆಯುತ್ತಿವೆ. ಜಮೀನು, ನಿವೇಶನ, ಮನೆಬೋಗ್ಯ, ಖರೀದಿ ಪತ್ರ, ಬಾಡಿಗೆ ನವೀಕರಣ, ವಿವಾಹ ನೋಂದಣಿ, ಟ್ರಸ್ಟ್‌ ರಜಿಸ್ಟರ್‌ ಸೇರಿ ನೂರಾರು ಸಂಖ್ಯೆಯಲ್ಲಿ ನೋಂದಣಿಯಾಗುತ್ತಿವೆ.

ಯಾವುದೇ ನೋಂದಣಿ ಇರಲಿ ಸಾಕ್ಷಿದಾರರು, ನೋಂದಣಿ ಮಾಡಿಸುವಕೊಳ್ಳುವವರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದರೆ ಇಲ್ಲಿ ಮಾತ್ರ ಸಾಮಾಜಿ ಅಂತರ ಇಲ್ಲದಾಗಿದೆ. ಅಲ್ಲದೆ ಸಾನಿಟೈಸರ್‌ ಬಳಕೆಯಂತೂ ಮೊದಲೇ ಇಲ್ಲ. ಕೆಲವರು ಮಾಸ್ಕ್ ಹಾಕದೇ ಕಚೇರಿಗೆ ಬರುತ್ತಿದ್ದರೂ ಯಾರು ಕೇಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next