Advertisement

ಫೈನಾನ್ಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

12:12 PM May 30, 2020 | Naveen |

ಲಿಂಗಸುಗೂರು: ಗುಂಪುಗಳಿಗೆ ನೀಡಿದ ಸಾಲದ ಕಂತು ಪಾವತಿಸುವಂತೆ ಮೈಕ್ರೋ ಫೈನಾನ್ಸ್‌ ಕಂಪನಿಗಳು ತೊಂದರೆ ನೀಡುತ್ತಿದೆ. ಫೈನಾನ್ಸ್‌ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲೂಕಿನ ಕಾಚಾಪುರ ಗ್ರಾಮದ ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದ್ದಾರೆ.

Advertisement

ಸರ್ವೋದಯ, ಗ್ರಾಮೀಣ ಕೂಟ, ಪಿನ್‌ಕೇರ್‌, ಸಮಸ್ತ, ಸ್ವಾತಂತ್ರ್ಯ ಸೇರಿ ಖಾಸಗಿ ಫೈನಾನ್ಸ್‌ ಕಂಪನಿಗಳು ಪಟ್ಟಣದ ಮಹಿಳೆಯರಿಗೆ ಗುಂಪು ಸಾಲ ನೀಡಿವೆ. ಲಾಕ್‌ಡೌನ್‌ ಮುಂಚೆ ಕಟ್ಟುನಿಟ್ಟಿನಿಂದ ಸಾಲದ ಕಂತನ್ನು ಪಾವತಿಸಲಾಗಿದೆ. ಆದರೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಕೆಲಸವಿಲ್ಲದೆ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಾಗಿದೆ. ಇಂತಹ ಸಂಕಷ್ಟದಲ್ಲೂ ಸಾಲದ ಕಂತು ಪಾವತಿಸಲು ಮೂರು ತಿಂಗಳು ಕಾಲವಾಕಾಶ ನೀಡುವಂತೆ ಮನವಿ ಮಾಡಿದರೂ ಫೈನಾನ್ಸ್‌ ಸಿಬ್ಬಂದಿ ಸಾಲ ಮರುಪಾವತಿಸುವಂತೆ ಪ್ರತಿ ದಿನ ಮನೆಗೆ ಬಂದು ತೊಂದರೆ ನೀಡುತ್ತಿದ್ದಾರೆ. ಇದುಲ್ಲದೆ ಸಾಲದ ಕಂತು ಪಾವತಿಸಲು ಸರ್ಕಾರವೇ ವಿನಾಯಿತಿ ನೀಡಿದೆ. ಆದರೆ ಖಾಸಗಿ ಕಂಪನಿಗಳು ವಿನಾಕಾರಣ ತೊಂದರೆ ನೀಡುತ್ತಿರುವುದರಿಂದ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಚಾಪುರ ಗ್ರಾಮದ ಲಕ್ಷ್ಮೀ ಮಳೆಯಪ್ಪ, ಬಸಮ್ಮ, ಗಂಗಮ್ಮ, ಲಕ್ಷ್ಮೀ ಅಮರೇಶ, ಶಂಕ್ರಮ್ಮ, ಮಂಜಮ್ಮ, ಅಕ್ಕಮ್ಮ ಒತ್ತಾಯಿಸಿದ್ದಾರೆ.

ತಮಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಕಾಚಾಪುರ ಗ್ರಾಮದ ಮಹಿಳೆಯರು ಶಾಸಕರ ಕಚೇರಿ ಆಗಮಿಸಿದ ವೇಳೆ ಶಾಸಕರು ಬೆಂಗಳೂರಿಗೆ ತೆರಳಿದ್ದರಿಂದ ಕಾಂಗ್ರೆಸ್‌ ಮುಖಂಡರಾದ ಶಿವಣ್ಣ ಕೋಠಾ, ದೇವರಾಜ ನಿಮ್ಮ ಸಮಸ್ಯೆಗಳನ್ನು ಶಾಸಕರು ಬಂದ್‌ ನಂತರ ಅವರ ಗಮನಕ್ಕೆ ತರಲಾಗುವುದು ಎಂದು ಮಹಿಳೆಯರಿಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.