Advertisement

ಆರಂಭವಾಗದ ಜಿಟಿಡಿಸಿ ಕಾಲೇಜು ಕ್ಯಾಂಟೀನ್‌

12:00 PM Sep 26, 2019 | Team Udayavani |

ಶಿವರಾಜ ಕೆಂಭಾವಿ
ಲಿಂಗಸುಗೂರು: ಪಟ್ಟಣದ ಜಿಟಿಟಿಸಿ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ಎರಡು ವರ್ಷದ ಹಿಂದೆ ನಿರ್ಮಿಸಿದ್ದ ಕ್ಯಾಂಟೀನ್‌ ಇನ್ನೂ ಆರಂಭಗೊಳ್ಳದಿರುವುದು ವಿದ್ಯಾರ್ಥಿಗಳ ಪರದಾಟಕ್ಕೆ ಕಾರಣವಾಗಿದೆ.

Advertisement

ಪಟ್ಟಣದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ (ಜಿಟಿಟಿಸಿ) ಕಾಲೇಜಿನಲ್ಲಿ ರಕ್ಷಣೆ, ವೈಮಾನಿಕ, ಬಾಹ್ಯಾಕಾಶ ಹಾಗೂ ಕೈಗಾರಿಕಾ ರಂಗಕ್ಕೆ ಸಂಬಂ ಧಿಸಿದ ಅತ್ಯಂತ ಜಟಿಲ ವಿನ್ಯಾಸಗಳ ಹೊಂದಿರುವ ಉಪಕರಣಗಳನ್ನು ಜಿಟಿಡಿಸಿ ಕಾಲೇಜಿನ ಕಾರ್ಯಾಗಾರದಲ್ಲಿನ ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಕಾಲೇಜಿನಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳು ಸ್ವಯಂ ಉದ್ಯೋಗದ ಜೊತೆಗೆ ದೇಶ, ವಿದೇಶಗಳಲ್ಲಿ ಉದ್ಯೋಗ ಪಡೆಯುವ ಅವಕಾಶಗಳಿವೆ.

ಕಾಲೇಜಿನಲ್ಲಿ ಒಟ್ಟು 105 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 45 ವಿದ್ಯಾರ್ಥಿಗಳು ಕಾಲೇಜಿನ ವಸತಿ ನಿಲಯದಲ್ಲಿಯೇ ವಾಸ ಮಾಡುತ್ತಾರೆ. ಆದರೆ ಇವರಿಗೆ ಊಟ, ಉಪಹಾರದ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

1.23 ಕೋಟಿ ರೂ. ವೆಚ್ಚದ ಕ್ಯಾಂಟೀನ್‌: 2016ರಲ್ಲಿ ಜಿಟಿಡಿಸಿ ಕಾಲೇಜಿನ ಆವರಣದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ(ಎಸ್‌ಡಿಪಿ), ಅಂದಾಜು 1.23 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ಯಾಂಟೀನ್‌ ಕಟ್ಟಡ ನಿರ್ಮಿಸಲಾಗಿದೆ. 2017ರಲ್ಲಿ ಕಟ್ಟಡವನ್ನು ಕಾಲೇಜು ಸುಪರ್ದಿಗೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡು ಹಲವು ವರ್ಷಗಳೇ ಉರುಳಿವೆ. ಆದರೆ ಕಟ್ಟಡದ ಉದ್ಘಾಟನೆ ನೆಪದಲ್ಲಿ ಕ್ಯಾಂಟೀನ್‌ ಆರಂಭಗೊಳಿಸದೇ ಇರುವುದರಿಂದ ವಿದ್ಯಾರ್ಥಿಗಳು ಪಟ್ಟಣದ ಹೊಟೇಲ್‌ಗ‌ಳಿಗೆ ಊಟಕ್ಕಾಗಿ ಅಲೆಯುವ ಸ್ಥಿತಿ ನಿರ್ಮಾಣಗೊಂಡಿದೆ.

ತಡೆಗೋಡೆ ಇಲ್ಲ: ಕಾಲೇಜಿನಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಯಂತ್ರೋಪಕರಣಗಳಿವೆ. ಆದರೆ ಮುಖ್ಯದ್ವಾರ ಬಳಿಯ ರಸ್ತೆ ಬದಿಯಲ್ಲಿ ಕಾಂಪೌಂಡ್‌ ಗೋಡೆ ಬಿದ್ದರೂ ಮರು ನಿರ್ಮಾಣಕ್ಕೆ ಮುಂದಾಗಿಲ್ಲ. ಪರಿಣಾಮ ಕಾಲೇಜಿನ ಕಟ್ಟಡದೊಳಗೆ ಕುರಿ-ಮೇಕೆ,
ದನಕರುಗಳು ನುಗ್ಗುತ್ತಿವೆ. ಕೂಡಲೇ ಕ್ಯಾಂಟೀನ್‌ ಆರಂಭಿಸುವ ಜೊತೆಗೆ ಕಾಲೇಜು ಕಟ್ಟಡಕ್ಕೆ ಆವರಣ ಗೋಡೆ ನಿರ್ಮಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next