Advertisement

ಕುರಿ ಸಾಕಾಣಿಕೆದಾರರಿಗೆ ಅರಣ್ಯಾಧಿಕಾರಿಗಳಿಂದ ಕಿರುಕುಳ: ಕ್ರಮಕ್ಕೆ ಆಗ್ರಹ

05:48 PM Oct 01, 2020 | sudhir |

ಲಿಂಗಸುಗೂರು: ಮಸ್ಕಿ ತಾಲೂಕಿನ ಹೂವಿನಭಾವಿ ಗ್ರಾಮದ ಕುರಿ ಸಾಕಾಣಿಕೆದಾರರಿಗೆ ಕಿರುಕುಳ ನೀಡುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲೆಯಲ್ಲಿಯೇ ಹೂವಿನಭಾವಿ ಗ್ರಾಮದಲ್ಲಿ ಅತಿ ಹೆಚ್ಚು ಕುರಿ ಸಾಕಾಣಿಕೆದಾರರಿದ್ದಾರೆ. 100 ಕುಟಂಬಕ್ಕೂ ಹೆಚ್ಚು ಕುಟುಂಬಗಳು ಕುರಿ ಸಾಕಾಣಿಕೆಯನ್ನೇ ಜೀವನಾಧಾರ ಮಾಡಿಕೊಂಡಿವೆ. ಆದರೆ ಕುರಿ ಮೇಯಸಲು ಇಲ್ಲಿನ ಕುರಿಗಾಹಿಗಳಿಗೆ ಭಾರೀ ತೊಂದರೆಯಾಗಿದೆ. ಅರಣ್ಯ ಇಲಾಖೆಗೆ ಸೇರಿದ ಯಾವುದೇ ಭೂಮಿ ಇಲ್ಲ. ಸರ್ಕಾರಿ ಪರಂಪೂಕಗೆ ಸೇರಿ ಸ.ನ.32ರಲ್ಲಿ 369 ಎಕರೆ ಹಾಗೂ ಸ.ನಂ 44ರಲ್ಲಿ 236 ಎಕರೆ ಹುಲ್ಲುಗಾವಲು ಭೂಮಿ ಇದೆ. ಆದರೆ ಇಲ್ಲಿ ಕುರಿ ಮೇಯಿಸಲು ಹೋದರೆ ಅರಣ್ಯಾಧಿಕಾರಿಗಳು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಇದಲ್ಲದೆ ಹಿಂದುಳಿದ ವರ್ಗದ ಕೆಲವರಿಗೆ ತಲಾ 4 ಎಕರೆ ಮಂಜೂರಾಗಿದೆ ಪಹಣಿಯಲ್ಲೂ ಕೂಡಾ ಹೆಸರು ಇರುವ ರೈತರಿಗೆ ಸಾಗುವಳಿ ನಿಲ್ಲಿಸಿ ಅರಣ್ಯ ಇಲಾಖೆಯವರು ಗಿಡಗಳನ್ನು ನೆಡುತ್ತಿದ್ದಾರೆ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅರಣ್ಯ, ಕಂದಾಯ ಹಾಗೂ ಫಲಾನುಭವಿಗಳ ಜಂಟಿ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವಂತೆ ಆಗ್ರಹಿಸಿದರು.

ಕಾರ್ಮಿಕ ಸಂಘದ ಮುಖಂಡ ಆರ್‌.ಮಾನಸಯ್ಯ, ರೈತ ಸಂಘದ ಅಧ್ಯಕ್ಷ ಸಂತೋಷ, ಮುಖಂಡರಾದ ಅಮೀರ್‌ ಅಲಿ, ಡಿ.ಕೆ.ಲಿಂಗಸುಗೂರು. ಆಜಪ್ಪ ಹಟ್ಟಿ, ಬೀರಪ್ಪ ಪೂಜಾರಿ, ಅಂಬಣ್ಣ ಪೂಜಾರಿ, ಸಕ್ರೆಪ್ಪ ಜವಳಗೇರಾ, ಮಾಳಪ್ಪ ಹಟ್ಟಿ, ಶಿವಗ್ಯಾನಪ್ಪ ಪೂಜಾರಿ, ಬಾಲಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next