Advertisement

ಮೀನುಮರಿ ಪಾಲನಾ ಕೇಂದ್ರ ಪುನಶ್ಚೇತನ

04:39 PM Apr 05, 2019 | Naveen |

ಲಿಂಗಸುಗೂರು: ಕಳೆದ ಮೂರು ದಶಕಗಳಿಂದ ಪಾಳು ಬಿದ್ದು, ಅಲ್ಲಲ್ಲಿ ಬಿರುಕು ಬಿಟ್ಟು ಕಸದ ತೊಟ್ಟಿಯಂತಾಗಿದ್ದ ಇಲ್ಲಿನ ಕೆರೆ ದಡದಲ್ಲಿರುವ ಮೀನುಮರಿ ಪಾಲನಾ ಕೇಂದ್ರಕ್ಕೆ ಈಗ ಪುನಶ್ಚೇತನ
ಭಾಗ್ಯ ಕೂಡಿಬಂದಿದೆ.

Advertisement

ಕಸದ ತೊಟ್ಟಿಯಂತಾಗಿದ್ದ ಮೀನುಮರಿ ಪಾಲನಾ 10 ಕೊಳಗಳ
ದುರಸ್ತಿ ಸೇರಿ ಸುತ್ತಲೂಕಾಂಪೌಂಡ್‌ ನಿರ್ಮಾಣಕ್ಕೆ ಸರ್ಕಾರ 10 ಲಕ್ಷ ರೂ. ಬಿಡುಗಡೆಗೊಳಿಸಿದೆ. ಈಗಾಗಲೇ ಮೀನುಮರಿ ಪಾಲನ ಕೊಳಗಳ ದುರಸ್ತಿ ಕಾರ್ಯ ನಡೆದಿದೆ.

ಮೀನುಗಾರಿಕೆ ಇಲಾಖೆ ಮೀನುಗಾರಿಕೆ ಕೃಷಿ ಉತ್ತೇಜನಕ್ಕಾಗಿ
ಪಟ್ಟಣದ ಕರಡಕಲ್‌ ಕೆರೆ ದಡದಲ್ಲಿ ಮೀನುಮರಿ ಪಾಲನಾ ಕೇಂದ್ರ ಸ್ಥಾಪಿಸಿತ್ತು. ಮೀನು ಮರಿ ತಂದು ಸುಮಾರು 45-50 ದಿನಗಳವರಿಗೆ ಪಾಲನೆ ಮಾಡಿ ನಂತರ ಅವುಗಳನ್ನು ಕೆರೆಗಳಿಗೆ ಬಿಡಲಾಗುತ್ತಿತ್ತು. ಪಾಲನಾ ಕೇಂದ್ರದಿಂದ ಮೀನುಮರಿಗಳನ್ನು
ರಾಯಚೂರು, ದೇವದುರ್ಗ, ಹೊಸಪೇಟೆ, ಯಾದಗಿರಿ, ಕಲುಬುರಗಿ
ಭಾಗಗಳ ಮೀನುಗಾರರು ಖರೀದಿಸುತ್ತಿದ್ದರು. ಆದರೆ 1987ರಿಂದ
ಈವರೆಗೂ ಪಾಲನಾ ಕೇಂದ್ರ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಇದರಿಂದಾಗಿ ಇಲ್ಲಿನ ಮೀನುಗಾರರು ಪಕ್ಕದ ಜಿಲ್ಲೆ ಕೊಪ್ಪಳದ ಶಿವಪುರ, ನಾರಾಯಣಪುರ, ಹೊಸಪೇಟೆ ಸೇರಿದಂತೆ ಇನ್ನಿತರ
ಕಡೆಗಳಿಂದ ಮೀನುಮರಿ ತಂದು ಸಾಕಾಣಿಕೆ ಮಾಡುತ್ತಿದ್ದರು. ಕರಡಕಲ್‌ ಕೆರೆ ದಡದಲ್ಲಿ ಹತ್ತು ಮೀನುಮರಿ ಪಾಲನಾ ಕೊಳಗಳಿವೆ. ಜಿಲ್ಲೆಯಲ್ಲಿ ಏಕೈಕ ಮೀನುಮರಿ ಪಾಲನಾ ಕೇಂದ್ರ ಇದಾಗಿದೆ. ಇಲ್ಲಿ ಏಕಕಾಲಕ್ಕೆ 4 ಲಕ್ಷಕ್ಕೂ ಅಧಿ ಕ ಮೀನು ಮರಿ
ಪಾಲನೆ ಮಾಡುವ ಸಾಮರ್ಥ್ಯದ 10 ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತೊಟ್ಟಿಯಲ್ಲಿ ಮೀನು ಮರಿ ಬದಲು
ಮದ್ಯದ ಬಾಟಲಿ, ಇಸ್ಪೀಟ್‌ ಎಲೆಗಳು, ಸಿಗರೇಟ್‌ಗಳ ತ್ಯಾಜ್ಯವೇ ತುಂಬಿತ್ತು. ಈ ಕುರಿತು ಹಿಂದೆಯೇ ಉದಯವಾಣಿ ಬೆಳಕು ಚೆಲ್ಲಿತ್ತು.

ತಾಲೂಕಿನಲ್ಲಿ 22 ಕೆರೆಗಳು, ಬಸವಸಾಗರ ಜಲಾಶಯ, ನದಿ
ತೀರದ ಒಟ್ಟು 50 ಕಿ.ಮೀ.ವರೆಗೆ ಮೀನು ಸಾಕಾಣಿಕೆ ಮಾಡಲಾಗುತ್ತಿದೆ. 17 ಲಕ್ಷಕ್ಕೂ ಅ ಧಿಕ ಮೀನು ಸಾಕಾಣೆ ಮಾಡಲಾಗುತ್ತಿದೆ. ವಾರ್ಷಿಕ 20-23 ಲಕ್ಷಕ್ಕೂ ಅಧಿಕ ಆದಾಯ
ಸರಕಾರದ ಖಜಾನೆಗೆ ಸೇರುತ್ತಿದೆ. ಇಷ್ಟೆಲ್ಲಾ ಇದ್ದರೂ ಮೀನುಗಾರಿಕೆಗೆ ಉತ್ತೇಜನ ಇಲ್ಲದಾಗಿತ್ತು. ಇನ್ನಾದರೂ ಮೀನು ಮರಿಪಾಲನಾ ಕೇಂದ್ರದ ಸದ್ಬಳಕೆಗೆ ಮೀನುಗಾರಿಕೆ ಇಲಾಖೆ
ಮುಂದಾಗಬೇಕಿದೆ.

ಮೀನುಮರಿ ಪಾಲನೆ ಕೊಳಗಳ ದುರಸ್ತಿಗೆ ಸರ್ಕಾರ 10 ಲಕ್ಷ ರೂ. ಒದಗಿಸಿದೆ. ಕೊಳಗಳ ದುರಸ್ತಿ ಕಾರ್ಯ ನಡೆದಿದೆ. ಸಿಬ್ಬಂದಿಗಳ ಕೊರತೆ ನಡುವೆ ಮೀನುಗಾರಿಕೆ ಕೃಷಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ.
.ಇಬ್ರಾಹಿಂ,
ಸಹಾಯಕ ನಿರ್ದೇಶಕರು
ಮೀನುಗಾರಿಕೆ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next