Advertisement

ಬಸವಾದಿ ಶರಣರ ವಚನಗಳ ಮೌಲ್ಯ ಅಳವಡಿಸಿಕೊಳ್ಳಿ

07:50 PM Nov 02, 2019 | Naveen |

ಲಿಂಗಸುಗೂರು: ಬಸವಾದಿ ಶರಣರ ವಚನಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶಕವಾಗಿದೆ. ಇದರ ಮಹತ್ವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ|
ಎಸ್‌.ಬಿ. ವೇದಮೂರ್ತಿ ಹೇಳಿದರು.

Advertisement

ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದ್ದ ವಿಜಯ ಮಹಾಂತ ಶಿವಯೋಗಿಗಳ 108ನೇ ಸಂಸ್ಮರಣೆ ಹಾಗೂ ಡಾ| ಮಹಾಂತ ಶಿವಯೋಗಿಗಳ ಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಮಹೋತ್ಸವ, ವಿಶ್ವ ಬಸವಧರ್ಮ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ ವಚನಗಳನ್ನು ಜೀವನ ಅಳವಡಿಸಿಕೊಂಡಿದ್ದಿವಾ ಎಂಬುದನ್ನು ಆತ್ಮ ಅವಲೋಕನ ಮಾಡಿಕೊಳ್ಳಬೇಕಾಗಿದೆ. ಕಳಬೇಡ ಹುಸಿಯ ನುಡಿಯಬೇಡ ಎಂಬ ವಚನ ಸಾರಂಶ ಅರ್ಥ ಮಾಡಿಕೊಂಡರೆ ಸಾಕು ಸಮಾಜದಲ್ಲಿ ಶಾಂತಿ ನೆಲಿಸಲು ಸಾಧ್ಯವಾಗುತ್ತದೆ.

ಮೇಲಾಗಿ ಪೋಲಿಸರ ಕೆಲಸವೇ ಇರುವುದಿಲ್ಲ, ಆದರೆ ಇತ್ತೀಚೆಗೆ ಸಮಾಜ ಘಾತುಕ ಕೃತ್ಯಗಳು ಹೆಚ್ಚಾಗುತ್ತಿದ್ದರಿಂದ ಪೋಲಿಸರ ಕೆಲಸ ಕೂಡ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಶಾಂತಿ-
ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ, ತುಂಗಾ, ಭೀಮಾ ನದಿ ಹರಿಯುತ್ತಿದ್ದರೂ ಇಲ್ಲಿ ಬರಗಾಲ ಎದುರಿಸುವಂತಾಗಿದೆ. ಇಲ್ಲಿ ಜಲಸಂಪನ್ಮೂಲನ ಬಳಕೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಬೆಳೆಯುವ ಪದ್ಧತಿ ಬದಲಾಗಬೇಕು. ಕೃಷಿ ಹೊಂಡಗಳು ಹೆಚ್ಚಾಗಬೇಕು.

ಪುರಾತನ ಬಾವಿ ರಕ್ಷಣೆ ಮಾಡಬೇಕು. ಅದರಲ್ಲಿ ಪ್ಲಾಸ್ಟಿಕ್‌ ಹಾಕುವುದರ ಜತೆಗೆ ನೀರಿನ ಸೆಲೆ ಹಾಳು ಮಾಡುತ್ತಿದ್ದೇವೆ. ಪ್ರತಿಯೊಬ್ಬರು ಎರಡು ಗಿಡಗಳನ್ನು ನಡೆವುದರ ಜತೆ ಅವುಗಳನ್ನು ಪೋಷಣೆ ಮಾಡಿ ಬೆಳೆಸಬೇಕು ಎಂದು ಹೇಳಿದರು.

Advertisement

ಶಾಖಾ ಅನುಭವ ಮಂಟಪದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬಸವಬೆಳವಿಯ ಚರಂತೇಶ್ವರ ಮಠದ ಶ್ರೀ ಶರಣಬಸವ ದೇವರು, ಶರಣ ಸಾಹಿತಿ ಅಶೋಕ ಹಂಚಾಲಿ, ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ ಹಿರೇಮಠ, ಡಾ| ಲತಾ ಹೆಸರೂರು, ಜಂಗಮಮೂರ್ತಿ, ಮಲ್ಲಣ್ಣ ನರಕಲದಿನ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next