Advertisement

ಲಿಂಗನಮಕ್ಕಿ ಹಿನ್ನೀರು; ಹಲ್ಕೆ-ಮುಪ್ಪಾನೆ ಲಾಂಚ್ ಪುನರಾರಂಭ

12:32 PM Jul 22, 2023 | Kavyashree |

ಸಾಗರ: ತಾಲೂಕಿನ ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಕಾರಣ ತುಮರಿ ಸಮೀಪದ ಹಲ್ಕೆ-ಮುಪ್ಪಾನೆ ಲಾಂಚ್ ಮಾರ್ಗ ಜುಲೈ 17 ರಿಂದಲೇ ಪುನರಾರಂಭ ಮಾಡಲಾಗಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

Advertisement

ಈಗಾಗಲೇ ಮುಪ್ಪಾನೆ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು, ಜನರ ಸೇವೆಗೆ ಸಿದ್ಧವಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಈ ಭಾಗದ 3 ಕಡವು ಸೇವೆಗಳು ಮತ್ತೆ ಪುನರಾರಂಭವಾಗಿವೆ. ಸುರಕ್ಷತೆಯೊಂದಿಗೆ ಪೂರಕ ಕ್ರಮಗಳನ್ನು ಬಂದರು ಇಲಾಖೆ ಕೈಗೊಂಡಿದೆ.

ಲಾಂಚ್ ಸಿಬ್ಬಂದಿಗೆ ವೇತನ ಶೀಘ್ರ ಮಾಡಲು ಇಲಾಖೆ ವತಿಯಿಂದ ಕ್ರಮ ವಹಿಸಲಾಗಿದೆ. ಶರಾವತಿ ಎಡದಂಡೆಯ ಹೊಳೆಬಾಗಿಲು, ಹಸಿರುಮಕ್ಕಿ, ಮುಪ್ಪಾನೆ ಕಡವು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಆರೆಕಾಲಿಕ ನೌಕರರಿಗೆ 4 ದಿನಗಳಲ್ಲಿ ಬಾಕಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಕಡವು ನಿರೀಕ್ಷಕ ಧನೇಂದ್ರ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next