Advertisement

ಸಂಡೇ ಲಾಕ್ ಡೌನ್ ಇದ್ದರೂ ಕೊಟ್ಟಿಗೆಹಾರದಲ್ಲಿ ಸಾಲು ಸಾಲು ವಾಹನಗಳು

01:27 PM Jul 26, 2020 | keerthan |

ಚಿಕ್ಕಮಗಳೂರು: ಸಂಡೇ ಲಾಕ್ ಡೌನ್ ಇದ್ದರೂ ಜಿಲ್ಲೆಗೆ ಪ್ರವೇಶಿಸುವ ವಾಹನಗಳ ದಟ್ಟನೆ ಹೆಚ್ಚಾಗಿದ್ದು, ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆಹಾಕಿದರು.

Advertisement

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮಂಗಳೂರು ಕಡೆಗಳಿಂದ ಬಂದ ವಾಹನಗಳಿಗೆ ತಡೆಹಾಕಿದರು. ಲಾಕ್ ಡೌನ್ ಕಾರಣದಿಂದ ಜಿಲ್ಲೆಗೆ ಪ್ರವೇಶಿಸದಂತೆ ತಡೆಹಾಕಿದರು. ಇದರಿಂದ ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲು ಸಾಲಾಗಿ ನಿಂತ ದೃಶ್ಯ ಕಾಣುತ್ತಿತ್ತು.

ಕೊನೆಗೆ ವಾಹನಗಳ ಸಾಲು ಹೆಚ್ಚುತ್ತಿದ್ದಂತೆ ಬಣಕಲ್ ಪಿಎಸ್ಐ ಶ್ರೀನಾಥ್ ರೆಡ್ಡಿ ಸವಾರರಿಗೆ ಎಚ್ಚರಿಕೆ ಕೊಟ್ಟು ಬಿಟ್ಟು ಕಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next