Advertisement

ಲಿಂ|ಶಿವಕುಮಾರ ಶಿವಾಚಾರ್ಯರ ಬದುಕು ಅನನ್ಯ

06:55 PM Apr 29, 2022 | Team Udayavani |

ಹಿರೇಕೆರೂರ: ಕಾಯಕವೇ ಶಿವಪೂಜೆ, ಜನತೆಯೇ ಜಂಗಮವೆಂದು ನಂಬಿ ನುಡಿದು, ನಡೆದ ಶ್ರೀ ತರಳಬಾಳು ಬೃಹನ್ಮಠದ ಲಿಂ| ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬದುಕು ಅನನ್ಯವಾಗಿದೆ ಎಂದು ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್‌. ಎಸ್‌.ಪಾಟೀಲ ಹೇಳಿದರು.

Advertisement

ಪಟ್ಟಣದ ಸಿಇಎಸ್‌ ಸಂಸ್ಥೆ ಆವರಣದಲ್ಲಿ ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ಧ ಸಹಕಾರಿ ಹಾಗೂ ಸರ್ವಜ್ಞ ಸ್ಮಾರಕ ಸಮಿತಿ ಆಶ್ರಯದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಇಪ್ಪತ್ತನೇ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ 109ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಿಂ|ಶಿವಕುಮಾರ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿಯೇ ಜನಮಾನಸದಲ್ಲಿ ದಂತಕತೆಯಾಗಿದ್ದವರು. ಅಳುಕು, ಅಂಜಿಕೆ ಎಂಬ ಶಬ್ದಗಳನ್ನು ಅರಿಯದ ಶ್ರೀಗಳು, ದಿಟ್ಟ ಹೆಜ್ಜೆ,  ಧೀರೋದ್ದಾತ ನಿಶ್ಚಲ ಸಾಧನೆಗಳು ಅವರ ಗುಣವಿಶೇಷಗಳಾಗಿದ್ದವು. ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ ಶ್ರೀಗಳು ಪೀಠಾಧಿಪತಿಗಳಾಗಿ ಬಂದ ಮೇಲೆ ಸದ್ಧರ್ಮ ಪೀಠದ ಗುರುಗಳ ಸಾನ್ನಿಧ್ಯದಲ್ಲಿ ಪ್ರಜ್ವಲಿಸಿ, ನಾಡು ಮೆಚ್ಚಿದ ನೇರ ನುಡಿಯ ಸ್ಪಷ್ಟ ಮಾತುಗಳ ದಿಟ್ಟ ಹೆಜ್ಜೆಯ  ಧೀಮಂತ ಗುರುಗಳಾಗಿದ್ದರು. ಸವಾಲುಗಳಿಗೆಅಡ್ಡಿ, ಆತಂಕಗಳಿಗೆ ಅಂಜದೆ, ಅಳುಕದೆ ಬಸವಾದಿ ಶಿವಶರಣರ ವಚನಗಳಿಗೆ ಆತ್ಮಸಾಕ್ಷಿಯಾಗಿ ಅಡಿಯಿಟ್ಟ ಶ್ರೀಗಳು, ಶಿಷ್ಯ ಸಮುದಾಯ, ಸಮಾಜವನ್ನು ಕಟ್ಟಿ ಬೆಳೆಸಿ, ಸಮಾಜವನ್ನು ಮುನ್ನಡೆಸಿದರು. ಭಕ್ತರ ಹೃದಯವೇ ಅವರ ಸಿಂಹಾಸನವಾಗಿತ್ತು. ಭಕ್ತರ ಹೃದಯ ಸಿಂಹಾಸನಾಧಿಶ್ವರರಾದ ಅವರನ್ನು ನೆನೆಯುವುದೇ ಪುಣ್ಯದ ಕೆಲಸ ಎಂದರು. ಪ್ರಾಚಾರ್ಯ ಡಾ| ಎಸ್‌.ಬಿ.ಚನ್ನಗೌಡ್ರ ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಬಿ.ಪಿ.ಹಳ್ಳೇರ, ಎಂ.ಎಸ್‌.ರುದ್ರಗೌಡ, ಹರೀಶ ಅರ್ಕಾಚಾರಿ ಮುಖ್ಯ ಶಿಕ್ಷಕರಾದ ಬಿ.ವ್ಹಿ.ಸನ್ನೇರ, ಕೆ.ಆರ್‌. ಲಮಾಣಿ, ಸಂಸ್ಥೆಯ ಸಿಬ್ಬಂದಿ ಎಸ್‌.ಬಿ.ನೂಲ್ವಿ, ಕೆ.ಎಚ್‌.ಮಾವಿನತೋಪ, ಎಚ್‌.ಎಸ್‌.ಹಲಗೇರಿ, ಎಂ.ಜಿ.ಕಡದಕಟ್ಟಿ, ಸಿ.ಎಸ್‌.ಮರಿಗೂಳಪ್ಪನವರ, ಎನ್‌.ಬಿ.ಮುದಕನಗೌಡ್ರ, ರೇಖಾ ಎಂ.ಪಿ., ತನುಜಾ ಉಪ್ಪಾರ, ಎನ್‌.ಡಿ.ನಿಂಗಪ್ಪನವರ, ರಮೇಶ ಮೆಣಸಿನಹಾಳ, ಸತೀಶ ಬಣಕಾರ, ಎಸ್‌.ಚನ್ನಬಸಪ್ಪ ಸೇರಿದಂತೆ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು, ಸಮಾಜದ ಬಂಧುಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next