Advertisement

ಕೊಹ್ಲಿಗೆ ರಿಚರ್ಡ್ಸ್‌ ಪಾಠವಾಗಬೇಕು: ಹೋಲ್ಡಿಂಗ್‌

07:00 AM Jan 30, 2018 | |

ಜೊಹಾನ್ಸ್‌ಬರ್ಗ್‌: ಕ್ರಿಕೆಟ್‌ ನಾಯಕತ್ವ ಮತ್ತು ಶಾಂತ ಸ್ವಭಾವ ಕಲಿಕೆ ವಿಚಾರದಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿಂಡೀಸ್‌ ದಂತಕತೆ ವಿವಿಯನ್‌ ರಿಚರ್ಡ್ಸ್‌ ಅವರನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದು ಆ ನಾಡಿನ ಮಾಜಿ ವೇಗಿ ಮೈಕಲ್‌ ಹೋಲ್ಡಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ನಾಯಕತ್ವ ವಿಚಾರದಲ್ಲಿ ವಿರಾಟ್‌ ಕೊಹ್ಲಿ ಹೆಚ್ಚು ಆಕ್ರಮಣಕಾರಿ ಮನೋಭಾವ ತೋರುತ್ತಾರೆ. ಆರಂಭದಲ್ಲಿ ಇದೆಲ್ಲ ಸಹಜ. ಅನುಭವ ಪಡೆದಂತೆಲ್ಲ ಇದು ಬದಲಾಗುತ್ತದೆ. ಈ ಸಂದರ್ಭದಲ್ಲಿ ರಿಚರ್ಡ್ಸ್‌ ಅವರನ್ನು ಕೊಹ್ಲಿ ಅನುಸರಿಸಬೇಕಿದೆ. ಆಟದಲ್ಲಿ ಆಕ್ರಮಣಕಾರಿಯಾಗಿರುವ ರಿಚರ್ಡ್ಸ್‌ ಮೊದಲು ಕ್ರಿಕೆಟ್‌ನಲ್ಲಿ ಎತ್ತರಕ್ಕೇರಿದರು. ಆಮೇಲೆ ಶಾಂತವಾಗಿ ನಾಯಕತ್ವದ ಜವಾಬ್ದಾರಿ ನಿಭಾಯಿಸುವುದನ್ನು ಕಲಿತರು. ತಂಡ ಕೂಡ “ಶಾಂತ’ಗೊಂಡಿತು. ಅನಂತರ ಸಕಾರಾತ್ಮಕ ಫ‌ಲಿತಾಂಶ ಬಂತು. ಕಲಿಕೆ ವಿಚಾರದಲ್ಲಿ ವಿರಾಟ್‌ ಕೊಹ್ಲಿ ಅವರು ರಿಚರ್ಡ್ಸ್‌ರನ್ನು ಅನುಸರಿಸಬೇಕಿದೆ’ ಎಂದು ಹೋಲ್ಡಿಂಗ್‌ ಹೇಳಿದರು.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ ಬಗ್ಗೆ ಪ್ರತಿಕ್ರಿಯಿಸಿದ ಹೋಲ್ಡಿಂಗ್‌, “ನಾವು ವಿಭಿನ್ನ ಸಂದರ್ಭಗಳಲ್ಲಿ, ಬೇರೆ ಬೇರೆ ಅಂತಾರಾಷ್ಟ್ರೀಯ ತಂಡಗಳ ವಿರುದ್ಧ ಆಡುತ್ತಿರುತ್ತೇವೆ. ಆಗ ಅಲ್ಲಿನ ಪಿಚ್‌ಗಳಿಗೆ ತಕ್ಕಂತೆ ತಂಡವನ್ನು ರಚಿಸಬೇಕಾಗುತ್ತದೆ. ಮುಖ್ಯವಾಗಿ ಇಲ್ಲಿ ಬೌಲರ್‌ಗಳನ್ನು ಬದಲಿಸುತ್ತಿರಬೇಕಾಗುತ್ತದೆ. ಅಸಮಂಜಸ ತಂಡ ರಚನೆ ಪಂದ್ಯದ ಮೇಲೆ ಭಾರೀ ಪರಿಣಾಮ ಬೀರಬಲ್ಲದು’ ಎಂದರು.

“ಬಲಾಡ್ಯ ತಂಡವೊಂದರ ವಿರುದ್ಧ ಆಡುವಾಗ ಆಟಗಾರರನ್ನು ಬದಲಿಸಬೇಕಾದುದು ಅನಿವಾರ್ಯ. ಅಂದಮಾತ್ರಕ್ಕೆ ಪ್ರತೀ ಟೆಸ್ಟ್‌ನಲ್ಲೂ ಬದಲಿಸಬೇಕೆಂಬ ಅರ್ಥವಲ್ಲ…’ ಎಂದು ಹೋಲ್ಡಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next