Advertisement

ಸಿಲಿಕಾನ್‌ ಸಿಟಿ ರೀತಿ ಬೆಳ್ತಂಗಡಿ ಅಭಿವೃದ್ಧಿ

01:13 PM Mar 27, 2022 | Team Udayavani |

ಬೆಳ್ತಂಗಡಿ: ಸಂಜೀವಿನಿ ಒಕ್ಕೂಟವು ಇಂದು ಗ್ರಾಮೀಣ ಮಹಿಳೆಯರನ್ನು ಆರ್ಥಿಕ ಸಶಕ್ತೀಕರಣ ಗೊಳಿಸುವ ಮೂಲಕ ಕುಟುಂಬ ನಿರ್ವಹಣೆಯಲ್ಲಿ ಸಶಕ್ತರನ್ನಾಗಿಸುವ ಶಕ್ತಿ ನೀಡಿದೆ. ಒಟ್ಟಾರೆಯಾಗಿ ನಮ್ಮ ಬೆಳ್ತಂಗಡಿಯೂ ಒಂದು ಪುಟ್ಟ ಸಿಲಿಕಾನ್‌ ಸಿಟಿಯಂತೆ ಅಭಿವೃದ್ಧಿ ಹೊಂದಬೇಕು ಎಂಬುದೇ ನಮ್ಮ ಆಶಯ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ದ.ಕ. ಜಿ.ಪಂ., ತಾ.ಪಂ. ಬೆಳ್ತಂಗಡಿ, ಗ್ರಾ.ಪಂ. ಲಾೖಲ ವತಿಯಿಂದ ಮಾ.26 ರಂದು ಲಾೖಲ ಗ್ರಾ.ಪಂ.ನಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಭಾರತ್‌ ಮಾತಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವತ್ಛತೆ ದೃಷ್ಟಿಯಿಂದ ಲಾೖಲ ಗ್ರಾ.ಪಂ.ಗೆ ವಾಹನದ ವ್ಯವಸ್ಥೆ, ಸುಂದರ ಗ್ರಂಥಾಲಯ ಸ್ಥಾಪಿಸುವ ಕೆಲಸವಾಗಲಿದೆ ಎಂದು ಹೇಳಿದರು. ದ.ಕ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್‌ ಮಾತನಾಡಿ, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಾಮರಸ್ಯದಿಂದ ಕರ್ತವ್ಯ ನಿರ್ವಹಿಸಿದಾಗ ಗ್ರಾಮದ ತಳಮಟ್ಟದ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಲಾೖಲ ಗ್ರಾ.ಪಂ. ಅಧ್ಯಕ್ಷೆ ಬೆನೆಡಿಕ್ಟ ಸಲ್ಡಾನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಇಒ ಕುಸುಮಾಧರ್‌ ಬಿ., ಲಾೖಲ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್‌, ಎನ್‌.ಆರ್‌. ಎಲ್‌.ಎಂ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್‌, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಯಶೋದಾ, ಪಿಡಿಒ ಪ್ರಕಾಶ್‌ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾದ ಬೆಳ್ತಂಗಡಿ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾೖಲ ಹಾಗೂ ಜಿ.ಪಂ. ಸಿಇಒ ಡಾ| ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಲ್ಯಾಲ ಗ್ರಾ.ಪಂ. ವ್ಯಾಪ್ತಿಯ ಪ.ಜಾತಿ, ಪ. ಪಂಗಡದ ಫಲಾನುಭವಿಗಳಿಗೆ ಸಹಾಯಧನದ ಚೆಕ್‌ ವಿತರಣೆ, ಸ್ವಚ್ಛತಾ ವಾಹನ ಉದ್ಘಾಟನೆ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ, ಎನ್‌.ಆರ್‌.ಎಲ್‌. ಎಂ. ಕಟ್ಟಡ, ಸಮಗ್ರ ಸಂಜೀವಿನಿ ಮಹಿಳಾ ಒಕ್ಕೂಟದ ಕಾರ್ಯಾಲಯವನ್ನು ಹರೀಶ್‌ ಪೂಂಜ ಉದ್ಘಾಟಿಸಿದರು. ತಾ.ಪಂ. ಕಾರ್ಯಕ್ರಮ ಸಂಯೋಜಕ ಜಯಾನಂದ ಲಾೖಲ ನಿರೂಪಿಸಿದರು. ಕಾರ್ಯದರ್ಶಿ ಯಶೋಧರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next