Advertisement

Like Dhoni ರಾಹುಲ್‌ ಗಾಂಧಿ ಕಾಂಗ್ರೆಸ್‌ ‘ಫಿನಿಶರ್‌’: ರಾಜನಾಥ್‌

01:28 AM Apr 07, 2024 | Team Udayavani |

ಭೋಪಾಲ: ರಾಹುಲ್‌ ಗಾಂಧಿ ಬೆಸ್ಟ್‌ ಫಿನಿಶರ್‌. ಮಹೇಂದ್ರ ಸಿಂಗ್‌ ಧೋನಿ ಪಂದ್ಯವನ್ನು ಅಂತ್ಯ ಗೊಳಿಸುವ ರೀತಿಯಲ್ಲಿಯೇ ರಾಹುಲ್‌ ಗಾಂಧಿ ಕಾಂಗ್ರೆಸ್‌ ಮುಗಿಸುತ್ತಾರೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದ್ದಾರೆ. ಭೋಪಾಲದಲ್ಲಿ ಆಯೋಜಿ ಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ಹಿಂದೆ ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಮೆರೆದಿದ್ದ ಕಾಂಗ್ರೆಸ್‌, ಸದ್ಯ 2-3 ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಬಗ್ಗೆ ವಿಶ್ಲೇಷಣೆ ನಡೆಸಿದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, “ನಾನು ತೀವ್ರ ಆಸಕ್ತಿಯಿಂದ ಆಲೋಚಿಸಿದಾಗ ಧೋನಿ ನೆನಪಾದರು. ಕ್ರಿಕೆಟ್‌ನಲ್ಲಿ ಧೋನಿಯಂತೆ, ದೇಶದ ರಾಜಕಾರಣ ದಲ್ಲಿಯೇ ರಾಹುಲ್‌ ಗಾಂಧಿ ಅತ್ಯುತ್ತಮ ಫಿನಿಶರ್‌. ಈ ಕಾರಣದಿಂದಲೇ ಹಲವು ನಾಯಕರು ಕಾಂಗ್ರೆಸ್‌ ತೊರೆಯುತ್ತಿದ್ದಾರೆ’ ಎಂದರು. ಕಾಂಗ್ರೆಸ್‌ ಮತ್ತು ಭ್ರಷ್ಟಾಚಾರಿಗಳಿಗೆ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದ ಅವರು, “ಕಾಂಗ್ರೆಸ್‌ ಎಲ್ಲಿರುವುದೋ ಅಲ್ಲಿ ಭ್ರಷ್ಟಾಚಾರಿಗಳಿರುತ್ತಾರೆ’ ಎಂದು ರಾಜನಾಥ್‌ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next