Advertisement

ಪ್ರಿಯಾಂಕಾ ಹಿಂದೂ ಆಗಿದ್ದು ಯಾವಾಗ?…ಆಕೆ ಊಸರವಳ್ಳಿ: ತೆಲಂಗಾಣ ಬಿಜೆಪಿ ಮುಖಂಡ

07:00 PM Oct 11, 2021 | Team Udayavani |

ಹೈದರಾಬಾದ್: ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಹಾಗೂ ಮಾ ದುರ್ಗಾ ದೇವಾಲಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಾರ್ಥನೆ ಸಲ್ಲಿಸಿದ್ದು, ಪ್ರಿಯಾಂಕಾ ಮುಂಬರುವ ಉತ್ತರಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಊಸವರಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುವುದಾಗಿ ತೆಲಂಗಾಣದ ಬಿಜೆಪಿ ಮುಖಂಡ ಎನ್ ವಿ ಸುಭಾಶ್ ವಾಗ್ದಾಳಿ ನಡೆಸಿದ್ದಾರೆ.

Advertisement

ಎಎನ್ ಐ ಜತೆ ಮಾತನಾಡಿದ ಸುಭಾಶ್, ಪ್ರಿಯಾಂಕಾ ಗಾಂಧಿ ಇದೀಗ ದಿಢೀರನೆ ಹಿಂದೂ ಧರ್ಮವನ್ನು ಶ್ಲಾಘಿಸತೊಡಗಿದ್ದಾರೆ. ಗಾಂಧಿ ಕುಟುಂಬ ಯಾವತ್ತೂ ಹಿಂದೂ ಕುಟಂಬ ಎಂಬಂತೆ ಆಲೋಚಿಸಿಯೇ ಇಲ್ಲ. ಪ್ರಿಯಾಂಕಾ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಆಕೆಯ ತಾಯಿ ಸೋನಿಯಾ ಕೂಡಾ ಕ್ರಿಶ್ಚಿಯನ್, ಪ್ರಿಯಾಂಕಾ ಅಜ್ಜ ಮುಸ್ಲಿಂ. ಹೀಗಾಗಿ ಗಾಂಧಿ ಕುಟುಂಬ ಹಿಂದೂ ಎಂದು ಹೇಳಿಕೊಳ್ಳಲು ಯಾವ ಆಧಾರವೂ ಇಲ್ಲ. ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮತ ಕಳೆದುಕೊಳ್ಳಲಿದ್ದೇವೆ ಎಂಬ ಭಯ ಪ್ರಿಯಾಂಕಾಗೆ ಕಾಡತೊಡಗಿದೆ ಎಂದು ಟೀಕಿಸಿದ್ದಾರೆ.

ಲಖಿಂಪುರ್ ಹಿಂಸಾಚಾರ ಘಟನೆ ನಂತರ ಪ್ರಿಯಾಂಕಾ ಹಿಂದು ಮಹಿಳಾ ಭಕ್ತಳಂತೆ ವರ್ತಿಸತೊಡಗಿದ್ದು, 2022ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿಸಿದ್ದಾರೆ. ರೈತರ ಪ್ರತಿಭಟನೆಯನ್ನು ಹೇಗೆ ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಕಾಂಗ್ರೆಸ್ ಪಕ್ಷ ಲೆಕ್ಕಾಚಾರ ಹಾಕುತ್ತಿರುವುದಾಗಿ ಸುಭಾಶ್ ದೂರಿದರು.

ಪ್ರಿಯಾಂಕಾ ಗಾಂಧಿ ಭಾನುವಾರ ಕಾಶಿ ವಿಶ್ವನಾಥ್ ದೇವಾಲಯ ಮತ್ತು ಮಾ ದುರ್ಗಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುಭಾಶ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next