Advertisement

ಮಿಂಚಿನ ನೋಂದಣಿಗೆ ಉತ್ತಮ ಸ್ಪಂದನೆ

01:28 PM Apr 09, 2018 | Team Udayavani |

ರಾಯಚೂರು: ಮತದಾನ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ, ನಿರ್ಗಮನ ಸೇರಿ ವಿವಿಧ ಉದ್ದೇಶಗಳಿಗಾಗಿ ಜಿಲ್ಲಾಡಳಿತ ರವಿವಾರ ಹಮ್ಮಿಕೊಂಡಿದ್ದ ಮಿಂಚಿನ ನೋಂದಣಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು.

Advertisement

ಜಿಲ್ಲೆಯ 1805 ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಬೂತ್‌ ಮಟ್ಟದಲ್ಲಿ ಬಿಎಲ್‌ಒಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಬಿಲ್‌ ಕಲೆಕ್ಟರ್‌ಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಎಲ್ಲ ಕೇಂದ್ರಗಳಲ್ಲಿ ಪ್ರತ್ಯೇಕ ಕೌಂಟರ್‌ ತೆಗೆಯುವ ಮೂಲಕ ಅವಕಾಶ ನೀಡಲಾಗಿತ್ತು. ಹೆಸರು ಸೇರಿಸುವುರು, ತಿಪ್ಪುಪಡಿ, ವರ್ಗಾವಣೆ, ಹೆಸರು ತೆಗೆದು ಹಾಕಲು ಪ್ರತ್ಯೇಕ ಅರ್ಜಿಗಳನ್ನು ನೀಡಲಾಯಿತು. 

ಮತದಾರರಿಂದ ಆಧಾರ್‌ ಕಾರ್ಡ್‌ ಸೇರಿ ಇತರೆ ದಾಖಲೆಗಳನ್ನು ಸಂಗ್ರಹಿಸಲಾಯಿತು. ಸ್ಥಳದಲ್ಲೇ ಅರ್ಜಿ ನೀಡಿ ಅಲ್ಲಿಯೇ ಭರ್ತಿ ಮಾಡಿ ನೀಡಲು ಅವಕಾಶವಿತ್ತು. ಸಂಜೆ ಆರು ಗಂಟೆವರೆಗೂ ಮಿಂಚಿನ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.

ಅರ್ಜಿ ಸ್ವೀಕೃತಿಯಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಪರಿಶೀಲಿಸಿ ಸಮ್ಮತಿ ಸೂಚಿಸಿದ ಮೇಲೆಯೇ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏ.14ರ ವರೆಗೆ ಹೆಸರು ನೋಂದಣಿಗೆ ಅವಕವಾಶವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಡಿಸಿ ಗೋವಿಂದರೆಡ್ಡಿ ತಿಳಿಸಿದ್ದಾರೆ.

ಮಾಹಿತಿ ಕೊರತೆ: ಸಾಕಷ್ಟು ಗ್ರಾಮೀಣ ಮಟ್ಟದ ಬೂತ್‌ಗಳಲ್ಲಿ ಜನರಿಲ್ಲದೇ ಕೇಂದ್ರಗಳು ಬಿಕೊ ಎಂದವು. ಮಿಂಚಿನ ನೋಂದಣಿ ಬಗ್ಗೆ ನಿರೀಕ್ಷಿತ ಮಟ್ಟದ ಜನ ಬಂದಿರಲಿಲ್ಲ. ಸಾಕಷ್ಟು ಜನರಿಗೆ ಈ ಕುರಿತು ಮಾಹಿತಿಯೇ ಇರಲಿಲ್ಲ. ಹೀಗಾಗಿ ಕೇಂದ್ರಗಳತ್ತ ಜನ ಬರಲಿಲ್ಲ. ಇನ್ನೂ ಅಧಿಕಾರಿಗಳು ಕೂಡ ಈ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಕುಳಿತಿದ್ದು ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next