ಉತ್ತರಾಖಂಡ್: ಸಿಡಿಲು ಬಡಿದ ಪರಿಣಾಮ 350 ಹೆಚ್ಚಿನ ಕುರಿ ಮತ್ತು ಮೇಕೆಗಳು ಮೃತಪಟ್ಟಿರುವ ಘಟನೆ ಉತ್ತರಕಾಶಿಯ ಖಟ್ಟು ಖಲ್ ಕಾಡಿನ ದುಂಡಾ ಬ್ಲಾಕ್ ಪ್ರದೇಶದಲ್ಲಿ ಶನಿವಾರ ರಾತ್ರಿ ( ಮಾ.25 ರಂದು) ನಡೆದಿದೆ.
ಭಟ್ವಾರಿ ಬ್ಲಾಕ್‌ನ ಬರ್ಸು ಗ್ರಾಮದ ನಿವಾಸಿ ಸಂಜೀವ್ ರಾವತ್ ತನ್ನ ಸ್ನೇಹಿತನೊಂದಿಗೆ ತನ್ನ ಕುರಿ ಮತ್ತು ಮೇಕೆಗಳನ್ನು ಋಷಿಕೇಶದಿಂದ ಉತ್ತರಕಾಶಿಗೆ ತರುತ್ತಿದ್ದರು. ಗುಡುಗು ಮಿಂಚಿನ ಸಹಿತ ಭಾರೀ ಮಳೆ ಬರುತ್ತಿದ್ದ ಕಾರಣ ದೊಡ್ಡ ಮರವೊಂದಕ್ಕೆ ಸಿಡಿಲು ಬಡಿದಿದೆ. ಪರಿಣಾಮ 350 ಕ್ಕೂ ಹೆಚ್ಚಿನ ಆಡು ಮತ್ತು ಮೇಕೆಗಳು ಮೃತಪಟ್ಟಿವೆ.
ಇದನ್ನೂ ಓದಿ: ವಾಟ್ಸಾಪ್ ನಲ್ಲಿ ಧರ್ಮನಿಂದನೆ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ
ಖಟ್ಟು ಖಾಲ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಘಟನೆಯು ಕೆಲವು ದಶಕಗಳಲ್ಲಿ ಅತಿ ಹೆಚ್ಚು ಪ್ರಾಣಿಗಳನ್ನು ಬಲಿ ತೆಗೆದುಕೊಂಡ ಘಟನೆ ಆಗಿದೆ ಎಂದು ಗ್ರಾಮಸ್ಥ ಜಗಮೋಹನ್ ರಾವತ್ ಹೇಳಿದ್ದಾರೆ.
ಕುರಿ ಮತ್ತು ಮೇಕೆಗಳ ಸಾವಿನ ಹಾನಿಯ ಅಂದಾಜು ಮಾಡಲು ತಂಡವನ್ನು ಸ್ಥಳಕ್ಕೆ ಕಳುಹಿಸಿ, ಜಿಲ್ಲಾಡಳಿತಕ್ಕೆ ವರದಿ ತಲುಪಿಸುತ್ತೇವೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ಉತ್ತರಾಖಂಡ್ ನಲ್ಲಿ ಮಾರ್ಚ್ 30ರವೆರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.