Advertisement

“ಸಹಕಾರಿ ಬ್ಯಾಂಕ್‌ಗಳಿಂದ ರೈತರ ಜೀವನದಲ್ಲಿ ದೀಪ ಹಚ್ಚುವ ಕಾರ್ಯ’

03:50 AM Jul 16, 2017 | Team Udayavani |

ಉಪ್ಪಿನಂಗಡಿ : ಜಿಲ್ಲೆಗೆ ಸಹಕಾರಿ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿಕೊಟ್ಟವರು ಮೊಳಹಳ್ಳಿ ಶಿವರಾಯರು. ಸಹಕಾರಿ ಬ್ಯಾಂಕ್‌ಗಳಿಂದ ಜಿಲ್ಲೆಯ ರೈತರ ಜೀವನದಲ್ಲಿ  ದೀಪ ಹಚ್ಚುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಆರ್ಥಿಕ  ವ್ಯವಹಾರದಲ್ಲಿ  ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕಾರಣವಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟರು.

Advertisement

ಉಪ್ಪಿನಂಗಡಿ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಹಿರೇಬಂಡಾಡಿ ಶಾಖೆಯ ಕಟ್ಟಡ ಮತ್ತು ಶಾಖಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಅನುಬಂಧನದ ಸಂಬಂಧ
ಗ್ರಾಮಗಳ ಪುನರೋತ್ಥಾನವಾದಾಗ ಮಾತ್ರ ದೇಶದ ಸಾಂಸ್ಕೃತಿಕ ವೈಭವ ಎದ್ದು  ನಿಲ್ಲಲು ಸಾಧ್ಯ.  ಹಳ್ಳಿಹಳ್ಳಿಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಸಹಕಾರಿ ರಂಗದ ಪರಿಕಲ್ಪನೆ ಅತ್ಯದ್ಭುತವಾಗಿದ್ದು, ಜಿಲ್ಲೆಯಲ್ಲಿ  ರೈತನೊಂದಿಗೆ ಪ್ರೀತಿಯ ಅನುಬಂಧನದ ಸಂಬಂಧವನ್ನು ಸಹಕಾರಿ ರಂಗವು ಹೊಂದಿದೆ. ಪ್ರಧಾನಿ ಮಂತ್ರಿಯ ಜನಧನ್‌ ಯೋಜನೆ ಬರುವ ಮೊದಲೇ ಜಿಲ್ಲೆಯಲ್ಲಿ  ಶೇ.80 ಜನರು ಬ್ಯಾಂಕ್‌ ಖಾತೆ ಹೊಂದಿದ್ದರು. ರಾಜ್ಯದಲ್ಲಿ ಅತೀ ಕಡಿಮೆ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ದ.ಕ. ಜಿಲ್ಲೆಯಲ್ಲಿ. ಇದಕ್ಕೆಲ್ಲಾ ಸಹಕಾರಿ ಬ್ಯಾಂಕ್‌ಗಳೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸಹಕಾರಿ ವ್ಯಾವಸಾಯಿಕ ಸಂಘದ ಅಧ್ಯಕ್ಷ ಯಶವಂತ ಜಿ. ಮಾತನಾಡಿ, ಸಂಜೀವ ಮಠಂದೂರು ಹಾಗೂ ದಿ. ಮಾಧವಗೌಡ ಶಾಂತಿತ್ತಡ್ಡ ಸೇರಿದಂತೆ ಹಲವರ ಪ್ರಯತ್ನದಿಂದ ಹಿರೇಬಂಡಾಡಿಯಲ್ಲಿ  ಸಂಘದ ಶಾಖೆ ತೆರೆಯುವ ಕನಸೀಗ ನನಸಾಗಿದೆ ಎಂದರು. ಎಸ್‌ಸಿಡಿಸಿಸಿ  ಬ್ಯಾಂಕ್‌ ನಿರ್ದೇಶಕ  ಶಶಿಕುಮಾರ್‌ ರೈ ಬಾಲೊÂಟ್ಟು ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದರು. ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ  ಶೌಕತ್‌ ಅಲಿ ಗಣಕಯಂತ್ರ ಉದ್ಘಾಟಿಸಿದರು. 

ಸಂಘದ ಸಿಬಂದಿ ವತಿಯಿಂದ ದಿ| ಮಾಧವ ಗೌಡ ಶಾಂತಿತ್ತಡ್ಡ ಅವರ ಮೂವರು ಪುತ್ರಿಯರಿಗೆ ತಲಾ 35 ಸಾವಿರ ರೂಪಾಯಿ ಠೇವಣಿ ಪತ್ರವನ್ನು  ಈ ಸಂದರ್ಭ ವಿತರಿಸಲಾಯಿತು.  

Advertisement

ಗ್ರಾ.ಪಂ. ಸದಸ್ಯ ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಸಂಘದ ಕಾರ್ಯನಿರ್ವಹಣಾ ಧಿಕಾರಿ ಎಂ. ರಘುವೀರ್‌ ರಾವ್‌, ಸಿಎ ಬ್ಯಾಂಕ್‌ ನಿರ್ದೇಶಕ ಯತೀಶ್‌ ಶೆಟ್ಟಿ, ಭಾಸ್ಕರ ಆಚಾರ್ಯ, ಶ್ಯಾಮಲಾ ಶೆಣೈ, ರಾಮಚಂದ್ರ ಮಣಿಯಾಣಿ, ಕೆ.ವಿ. ಪ್ರಸಾದ್‌, ದಯಾನಂದ ಸರೋಳಿ, ಎಂ. ಜಗದೀಶ್‌ ರಾವ್‌, ಧರ್ಣಪ್ಪ ನಾಯ್ಕ, ಸುಜಾತಾ ರೈ ಅಲಿಮಾರ್‌, ತಾ.ಪಂ. ಸದಸ್ಯ ಮುಕುಂದ ಗೌಡ, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ನಿತಿನ್‌ ತಾರಿತ್ತಡಿ, ಸೋಮೇಶ್‌, ಉಷಾ ಲಕ್ಷ್ಮೀಶ ನಿಡ್ಡೆಂಕಿ, ಮುದ್ದ, ಸದಾನಂದ ಶೆಟ್ಟಿ ಅಡೆಕ್ಕಲ್‌, ವಿಶ್ವನಾಥ ಕೆಮ್ಮಟೆ, ಚಂದ್ರಾವತಿ ನೆಹರೂತೋಟ, ವಸಂತಿ ಶಾಖೆಪುರ, ಪುಷ್ಪಾವತಿ ಶಾಂತಿತ್ತಡ್ಡ, ನಳಿನಾಕ್ಷಿ, ಮಾಲತಿ, ಪ್ರಮುಖರಾದ ಪೆಲಪ್ಪಾರು ವೆಂಕಟ್ರಮಣ ಭಟ್‌, ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ರವೀಂದ್ರ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.

ಉಷಾ ಮುಳಿಯ ಪ್ರಾರ್ಥಿಸಿದರು. ಉಪ್ಪಿನಂಗಡಿ ಸಹಕಾರಿ ವ್ಯಾವಸಾಯಿಕ ಸಂಘದ ಅಧ್ಯಕ್ಷ ಯಶವಂತ ಜಿ. ಸ್ವಾಗತಿಸಿದರು. ಸಿಎ ಬ್ಯಾಂಕ್‌ ಸಿಬಂದಿ ಪುಷ್ಪರಾಜ ಶೆಟ್ಟಿ  ವಂದಿಸಿದರು. ಸುಧಾಕರ ಗಾಂ ಪಾರ್ಕ್‌  ನಿರೂಪಿಸಿದರು.

350 ಕೋಟಿ ರೂ. ವ್ಯವಹಾರ
ಭದ್ರತಾ ಕೋಶ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ  ಸಂಜೀವ ಮಠಂದೂರು, ರಾಷ್ಟ್ರೀಕೃತ ಬ್ಯಾಂಕ್‌ಗಳ ತೀವ್ರ ಪೈಪೋಟಿಯ ನಡುವೆಯೂ ಉಪ್ಪಿನಂಗಡಿ ಸಹಕಾರಿ ವ್ಯಾವಸಾಯಿಕ ಸಂಘವು ತನ್ನ ಅಸ್ತಿತ್ವವನ್ನು ಉಳಿಸಿದಕೊಂಡಿದೆಯಲ್ಲದೆ, ರೈತರ ಕಷ್ಟಸುಖದಲ್ಲಿ ಭಾಗಿಯಾದ ಕಾರಣ ನಂ. 1 ಸ್ಥಾನ ಪಡೆದಿದೆ.  2016-17ನೇ ಸಾಲಿನಲ್ಲಿ  350 ಕೋಟಿ ರೂ. ವ್ಯವಹಾರ ನಡೆಸಿ, 1.46 ಕೋಟಿ ರೂ. ಲಾಭಗಳಿಸಿದೆ. ಇದೀಗ ಬಹುವರ್ಷದ ಕನಸಾದ ಹಿರೇಬಂಡಾಡಿ ಶಾಖೆಯ ಕನಸೂ ನನಸಾಗಿದೆ. ಅಭಿವೃದ್ಧಿ ಕ ‌ಡೆಗೆ ಸಾಗುವ ಮನೋಸ್ಥಿತಿ ನಮ್ಮೆಲ್ಲರದ್ದಾಗಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next