ಸಿದ್ದಾಪುರ: ಮಚ್ಚಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮಕ್ಕಳು ತಯಾರಿಸಲಾದ ಬೆಳಕು ವಿಜ್ಞಾನ ಪ್ರದರ್ಶನ ಮತ್ತು ಮಕ್ಕಳ ವಿಜ್ಞಾನ ಪತ್ರಿಕೆ ಭೂಮಿ ಅನಾವರಣ ಕಾರ್ಯಕ್ರಮ ಜರಗಿತು.
ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ನಾಯ್ಕ ಅವರು ಬಲೂನು ಹಿಗ್ಗಿಸುವ ಪ್ರಯೋಗ ಮಾಡುವ ಮೂಲಕ ಚಾಲನೆ ನೀಡಿದರು.
ಅಮಾಸೆಬೈಲು ಹಾಲು ಉತ್ಪಾದಕರ ಸಂಘದ ರಾಜೀವ ಶೆಟ್ಟಿ ಮಕ್ಕಳ ವಿಜ್ಞಾನ ಪತ್ರಿಕೆ ಭೂಮಿಯನ್ನು ಅನಾವರಣ ಗೊಳಿಸಿದರು.
ಸಿದ್ದಾಪುರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶೈಲೇಂದ್ರನಾಥ ಅವರು ಮಕ್ಕಳ ವಿಜ್ಞಾನ ಪ್ರಯೋಗಾಲಯ ರಾಮನ್ ಇದನ್ನು ಉದ್ಘಾಟಿಸಿದರು. ದಾನಿ ಶಂಕರ ಐತಾಳ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಹಾರುವ ಬೆಂಕಿ, ಮುಂದೆ ಚಲಿಸದೇ ಹಿಂದಕ್ಕೆ ಬರುವ ಬೆಳಕು, ಬಾಗುವ ಬೆಳಕು, ಮಾಯವಾಗುವ ಮೀನು, ಮಾಯಾ ನಾಣ್ಯ, ಮೂರು ಆಯಾಮದ ಬಹುರೂಪದರ್ಶಕ ಹೀಗೆ ಹತ್ತು ಹಲವು ಪರಿಕಲ್ಪನೆಗಳಾಧಾರಿತ ವಿವಿಧ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಅಮಾಸೆಬೈಲು ಗ್ರಾ. ಪಂ. ಮಾಜಿ ಅಧ್ಯಕ್ಷ ಅಶೋಕ ಕುಮಾರ್‌ಆಚಾರ್ಯ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕ ಶ್ರೀಧರ್ ಎಸ್.ಸಿದ್ದಾಪುರ, ಸಹ ಶಿಕ್ಷಕಿ ಮಮತಾ ಎಸ್., ಸಹ ಶಿಕ್ಷಕಿ ಗೀತಾ ಹೆಗ್ಡೆ, ಗೌರವ ಶಿಕ್ಷಕಿ ಸಂಗೀತಾ ರಟ್ಟಾಡಿ ಅವರು ಕಾರ್ಯಕ್ರಮ ಸಂಯೋಜಿಸಿದ್ದರು.
ಮುಖ್ಯ ಶಿಕ್ಷಕಿ ಜ್ಯೋತಿ ಎಸ್. ಸ್ವಾಗತಿಸಿದರು. ಸಹ ಶಿಕ್ಷಕಿ ಮೀನಾಕ್ಷಿ ನಿರೂಪಿಸಿದರು.