Advertisement

ಮತ್ತೆ ಬೆಳಕು ಮೀನುಗಾರಿಕೆ, ಕ್ರಮಕ್ಕೆ ಆಗ್ರಹ

01:00 AM Feb 27, 2019 | Harsha Rao |

ಮಲ್ಪೆ: ಪಸೀìನ್‌ ಮೀನುಗಾರರು ಮತ್ತೆ ಕಾನೂನು ಉಲ್ಲಂಘಿಸಿ ಜನರೇಟರ್‌ ಬಳಸಿ ಬೆಳಕು ಮೀನುಗಾರಿಕೆ ನಡೆಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮಲ್ಪೆ ಆಳಸಮುದ್ರ ಮತ್ತು ನಾಡದೋಣಿ ಮೀನುಗಾರರು ಮಂಗಳವಾರ ಮಲ್ಪೆ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದರು.

Advertisement

ರಾಜ್ಯ ಮತ್ತು ಕೇಂದ್ರದ ಆದೇಶ ಹಾಗೂ ಉಚ್ಚ ನ್ಯಾಯಾಲಯದ ಮಧ್ಯಾಂತರ ತೀರ್ಪನ್ನು ಉಲ್ಲಂಘಿಸಿ ಪಸೀìನ್‌ ಮೀನುಗಾರರು ಕಾನೂನಿಗೆ ವಿರುದ್ಧವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿದ್ದಾರೆ. ತತ್‌ಕ್ಷಣ ಅದನ್ನು ನಿಲ್ಲಿಸಿ ಅವರ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಫೆ. 27ರಿಂದ ಮುಷ್ಕರ
ಅವೈಜ್ಞಾನಿಕ ಮೀನುಗಾರಿಕೆ ನಡೆಸುವವರ ಬಗ್ಗೆ ಮೀನುಗಾರಿಕೆ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮಲ್ಪೆ ಆಳಸಮುದ್ರ ಟ್ರಾಲ್‌ಬೋಟ್‌ ಮೀನುಗಾರರ ಸಂಘದ ನೇತೃತ್ವದಲ್ಲಿ ಫೆ. 27ರಿಂದ ಮಲ್ಪೆಯಲ್ಲಿ ಅಳಸಮುದ್ರ ಮೀನುಗಾರಿಕೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ ತಿಳಿಸಿದ್ದಾರೆ.

ಮುಖಂಡರಾದ ಚಂದ್ರಕಾಂತ್‌ ಕರ್ಕೇರ, ಕರುಣಾಕರ ಸಾಲ್ಯಾನ್‌, ವಿಠಲ ಕರ್ಕೇರ, ಆನಂದ ಅಮೀನ್‌, ದಯಾನಂದ ಕುಂದರ್‌, ದಯಾನಂದ ಕೆ. ಸುವರ್ಣ, ತಿಮ್ಮ ಮರಕಾಲ ಶಂಕರ ಸಾಲ್ಯಾನ್‌, ಭುವನೇಶ್‌ ಕೋಟ್ಯಾನ್‌,
ಮಹೇಶ್‌ ಸುವರ್ಣ, ಸುಭಾಸ್‌ ಮೆಂಡನ್‌, ಮಿಥುನ್‌ ಕರ್ಕೇರ, ಹರೀಶ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

ಪೊಲೀಸರಿಗೆ ಲಿಖೀತ ಆದೇಶ
ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕೆಲವು ದೋಣಿಗಳು ಜನರೇಟರ್‌ ಅಳವಡಿಸಿ ಮೀನುಗಾರಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ದೋಣಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ದೂರು ದಾಖ
ಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ ಉಪನಿರ್ದೇಶಕರು ಮಲ್ಪೆ ಪೊಲೀಸ್‌ ಠಾಣೆ ಮತ್ತು ಕರಾವಳಿ ಕಾವಲು ಪಡೆಗೆ ಲಿಖೀತ ಆದೇಶವನ್ನು ನೀಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next