Advertisement

‌ಲೈಗರ್‌ ಮತ್ತು ವಿಜಯ್‌ ಕನಸು: ರಾಜ್‌ ಕುಟುಂಬದ ಬಗ್ಗೆ ಸ್ಪೆಷೆಲ್‌ ಟಾಕ್

11:02 AM Aug 22, 2022 | Team Udayavani |

ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅಭಿನಯದ ಬಹುನಿರೀಕ್ಷಿತ ಲೈಗರ್‌ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ.

Advertisement

ಇದೇ 25ರಂದು ವಲ್ಡ್ ವೈಡ್‌ ಚಿತ್ರ ತೆರೆಗೆ ಬರುತ್ತಿದೆ. ಈ ಹಿನ್ನೆಲೆ ಲೈಗರ್‌ ತಂಡ ಇತ್ತೀಚೆಗೆ ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಮಾಡಿದೆ.

ಈ ವೇಳೆ ಮಾತನಾಡಿದ ವಿಜಯ್‌ ದೇವರಕೊಂಡ, “ಬೆಂಗಳೂರು ಯಾವಾಗಲೂ ನನಗೆ ಪ್ರೀತಿ ನೀಡಿದೆ. ಲೈಗರ್‌ ನನ್ನ ವೃತ್ತಿ ಜೀವನದ ದೊಡ್ಡ ಸಿನಿಮಾ. ಇದು ಮಾಸ್‌ ಎಂಟರ್‌ಟೈನರ್‌ ಚಿತ್ರ. ನಾನು ಈ ಚಿತ್ರಕ್ಕೆ ಕನ್ನಡದಲ್ಲಿ ಡಬ್‌ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾತ್ರಕ್ಕೆ ನಾನು ಡಬ್‌ ಮಾಡುತ್ತೇನೆ’ಎಂದರು.

ಇದೇ ವೇಳೆ ಅಪ್ಪು ಜೊತೆಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದ ವಿಜಯ್, ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್‌ ಅಣ್ಣನನ್ನು ಮೀಟ್‌ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್‌ ಮಾಡಿ ಮಾತನಾಡಿದ್ದು ಇದೆ’ ಎಂದು ರಾಜ್‌ ಕುಟುಂಬದೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next