Advertisement

ಒಲಿಂಪಿಕ್ಸ್‌ ಸ್ಪರ್ಧಿ ಪಟ್ಟಿಯಲ್ಲಿ ಲಿಫ್ಟರ್‌ ಅಕ್ಷತಾಗೆ ಸ್ಥಾನ

01:09 AM Nov 18, 2021 | Team Udayavani |

ಕಾರ್ಕಳ: ಅಂತಾರಾಷ್ಟ್ರೀಯ ಪವರ್‌ಲಿಫ್ಟರ್‌, ಕಾರ್ಕಳದ ಬೋಳ ಅಕ್ಷತಾ ಪೂಜಾರಿ ಹೆಸರು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ರಾಜ್ಯದಿಂದ ತರಬೇತಿ ಪಡೆಯಲಿರುವ 76ನೇ ಕ್ರೀಡಾಪಟುವಾಗಿ ಸೇರ್ಪಡೆಗೊಂಡಿದೆ. ತಾಲೂಕಿನ ಮತ್ತೂಬ್ಬ ಪ್ರತಿಭಾನ್ವಿತೆ, ಇತ್ತೀಚೆಗೆ ಹೆಪ್ಟಾತ್ಲಾನ್‌ನಲ್ಲಿ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟು, ಒಲಿಂಪಿಕ್ಸ್‌ ಕನಸು ಕಾಣುತ್ತಿದ್ದ ಕೆರ್ವಾಶೆಯ ಅಕ್ಷತಾ ಪೂಜಾರಿ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Advertisement

2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತಯಾರಾಗಲು ರಾಜ್ಯದ ಸಂಭವನೀಯರ ಪಟ್ಟಿ ಸಿದ್ಧಗೊಂಡಿದೆ. ಅಮೃತ ಕ್ರೀಡಾ ಯೋಜನೆಯಡಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರುವುದಕ್ಕಾಗಿ ಪ್ರತಿಭಾನ್ವಿತ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ರೀಡಾಪಟುಗಳಿಗೆ ಸರಕಾರದ ವತಿಯಿಂದ ಅತ್ಯುನ್ನತ ತರಬೇತಿ ನೀಡಲಾಗುತ್ತದೆ. ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನ ಕಾರ್ಯದರ್ಶಿ ನ. 16ರಂದು ಹೊರಡಿಸಿದ ಹೊಸ ಆದೇಶದಲ್ಲಿ ಬೋಳ ಅಕ್ಷತಾ ಪೂಜಾರಿ ಹೆಸರಿದೆ.

ಆರಂಭದಲ್ಲಿ ಗೊಂದಲ ಸೃಷ್ಟಿ
ಪವರ್‌ಲಿಫ್ಟರ್‌ ಅಕ್ಷತಾ ಪೂಜಾರಿ ಬೋಳ ಗ್ರಾಮದವರು. ಹೆಪ್ಟಾತ್ಲಾನ್‌ ಸಾಧಕಿ ಅಕ್ಷತಾ ಪೂಜಾರಿ ಕೆರ್ವಾಶೆಯವರು. ಇಬ್ಬರೂ ಒಂದೇ ಹೆಸರಿನವರಾಗಿದ್ದು, ತಾಲೂಕು ಕೂಡ ಒಂದೇ. ಹೀಗಾಗಿ ಆಯ್ಕೆಯಾದವರು ಯಾರು ಎಂಬ ಬಗ್ಗೆ ಮೊದಲು ಗೊಂದಲ ಉಂಟಾಗಿತ್ತು.
ಪವರ್‌ಲಿಫ್ಟರ್‌ ಅಕ್ಷತಾ ಪೂಜಾರಿ ಅವರ ಹೆಸರು ಅಂತಿಮವಾಗಿ ಸೂಚಿಸಿ ಬಂದಿತ್ತು. ಆದ್ದರಿಂದ ಅವರನ್ನೇ ಅಂತಿಮಗೊಳಿಸಲಾಗಿದೆ ಎಂದು ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನನಸಾಗದ ಕನಸು
ಕೆರ್ವಾಶೆಯ ಅಕ್ಷತಾ ಪೂಜಾರಿ ಹೆಪ್ಟಾತ್ಲಾನ್‌ ನಲ್ಲಿ ಚಿನ್ನ ಗೆದ್ದ ಸಂದರ್ಭ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ತನ್ನ ಕನಸು ಎಂದಿದ್ದರು. ಸರಕಾರದ ಅಮೃತ ಕ್ರೀಡಾ ಯೋಜನೆಯಡಿ ಆಯ್ಕೆಯಾದರೆ ತರಬೇತಿಗೆ ಅನುಕೂಲವಾಗುತ್ತದೆ. ನಾನಾಗಿ ಉನ್ನತ ತರಬೇತಿ ಪಡೆಯು
ವಷ್ಟು ಆರ್ಥಿಕವಾಗಿ ಸಶಕ್ತಳಲ್ಲ ಎಂದು ಹೇಳಿದ್ದರು. ಇದು ಕ್ರೀಡಾ ಸಚಿವ ನಾರಾಯಣ ಗೌಡರ ಗಮನಕ್ಕೂಬಂದಿದ್ದು, ಅವರು ಕೂಡಲೇ ತನ್ನನ್ನು ಭೇಟಿಯಾಗುವಂತೆ ಹೇಳಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಆಕೆಗೆ ಸಚಿವರನ್ನು ಭೇಟಿ ಮಾಡುವುದು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:ಡಿಸೆಂಬರ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಹೈಕೋರ್ಟ್​ ನಿರ್ದೇಶನ

Advertisement

ಇನ್ನು ಸಾಧನೆಯೇ ಮೆಟ್ಟಿಲು
ಸದ್ಯ ಸರಕಾರದ ವತಿಯಿಂದ ತರಬೇತಿಗೆ ಅವಕಾಶ ಸಿಗದಿರುವುದರಿಂದ ಇನ್ನು ಸಾಧನೆಯೇ ಅಕ್ಷತಾ ಅವರ ಒಲಿಂಪಿಕ್ಸ್‌ ದಾರಿಗೆ ಮೆಟ್ಟಿಲು ಆಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಅಕ್ಷತಾ ಹೊಂದಿದ್ದಾರೆ. ಆದರೆ ಇದಕ್ಕೆಲ್ಲ ಉನ್ನತ ಮಟ್ಟದ ತರಬೇತಿ ಪಡೆಯುವುದು ಹೇಗೆ? ಆರ್ಥಿಕ ಸಂಪನ್ಮೂಲ ಎಲ್ಲಿಂದ ಕ್ರೋಡಿಕರಿಸಲಿ ಎಂಬುದೇ ಹೆಪ್ಟಾತ್ಲಾನ್‌ ತಾರೆಯ ಚಿಂತೆಯಾಗಿದೆ.

ಇದುವೇ ಸಂಭವನೀಯ ಅಂತಿಮ ಪಟ್ಟಿ
ಕ್ರೀಡಾ ಅಸೋಸಿಯೇಶನ್‌ಗಳ ಮೂಲಕ ವಿವಿಧ ಕ್ರೀಡಾ ಕ್ಷೇತ್ರದ ಸಾಧಕರನ್ನು ಸರಕಾರದ ವತಿಯಿಂದ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಸಚಿವರ ವಿನಂತಿಯಂತೆ ಹೆಚ್ಚುವರಿ ಹೆಸರನ್ನು ಸೇರಿಸಿದ ಪಟ್ಟಿ ಸರಕಾರದಿಂದ ಅಂಗೀಕಾರ ಆಗಿ ಬಂದಿದೆ. ಅದರಲ್ಲಿ 76ನೇ ಕ್ರೀಡಾಳುವಾಗಿ ಪವರ್‌ಲಿಫ್ಟರ್‌ ಅಕ್ಷತಾ ಪೂಜಾರಿ ಬೋಳ ಹೆಸರು ಸೇರ್ಪಡೆಯಾಗಿದೆ. ಇನ್ನೂ 25-30 ಕ್ರೀಡಾಪಟುಗಳು ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರ ಮಾಹಿತಿ ನಮ್ಮಲ್ಲಿ ಇದೆ. ಅವರಿಗೆ ಯಾವ ರೀತಿ ಆರ್ಥಿಕ ಸಹಕಾರ ಮಾಡಬಹುದು ಎನ್ನುವ ಬಗ್ಗೆ ಯೋಚಿಸುತ್ತಿದ್ದೇವೆ. ಅದರಲ್ಲಿ ಹೆಪಾrತ್ಲಾನ್‌ ಕ್ರೀಡಾಳು ಅಕ್ಷತಾ ಪೂಜಾರಿ ಅವರಿಗೂ ಅವಕಾಶ ಕಲ್ಪಿಸುವ ಕುರಿತು ಪ್ರಯತ್ನಿಸುತ್ತೇವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾ ಸಚಿವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸಚಿವ ವಿ. ಸುನಿಲ್‌ಕುಮಾರ್‌ ಅವರನ್ನು ಸಂಪರ್ಕಿಸಿದ್ದೆ. ಅವಕಾಶ ಸಿಗುವ ನಿರೀಕ್ಷೆ ಹೊಂದಿದ್ದೆ. ಸದ್ಯ ನಿರಾಶೆಯಾದರೂ, ಆಶಾಭಾವನೆ ಹೊಂದಿರುವೆ.
– ಅಕ್ಷತಾ ಪೂಜಾರಿ ಕೆರ್ವಾಶೆ,
ಹೆಪ್ಟಾತ್ಲಾನ್‌ ಸಾಧಕಿ

76ನೇ ಕ್ರೀಡಾಳಾಗಿ ಹೆಸರು ಸೇರ್ಪಡೆಯಾಗಿರುವುದು ಕೆಲವರು ಕರೆ ಮಾಡಿದಾಗ ತಿಳಿಯಿತು, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ.
– ಅಕ್ಷತಾ ಪೂಜಾರಿ ಬೋಳ,
ಪವರ್‌ಲಿಫ್ಟಿಂಗ್‌ ಸಾಧಕಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next